ಮಿಷನ್ ಮಂಗಲ್ ಮೂಲಕ ಪ್ರೇಕ್ಷಕರ ಮನ ಗೆದ್ದ ನಟಿ ನಿತ್ಯಾ ಮೆನನ್ ಈಗ ಡಿಜಿಟಲ್ ಫ್ಲಾಟ್‌ಫಾರ್ಮ್‌ಗಳಲ್ಲಿ ಧೂಳೆಬ್ಬಿಸುತ್ತಿದ್ದಾರೆ.  ಅಪಹರಿಸಲ್ಪಟ್ಟ 6 ವರ್ಷದ ತಾಯಿಯ ಪಾತ್ರದಲ್ಲಿ ನಿತ್ಯ ಮೆನನ್ ಕಾಣಿಸಿಕೊಂಡಿದ್ದಾರೆ. ಒಟಿಟಿ ಫ್ಲಾಟ್‌ಫಾರ್ಮ್‌ಗಳಲ್ಲಿ ಸಾಕಷ್ಟು ಅವಕಾಶಗಳು ಬರುತ್ತಿವೆ ಎಂದು ನಿತ್ಯ ಮೆನನ್ ಈಗಾಗಲೇ ಹೇಳಿದ್ದರು. ಇವುಗಳಲ್ಲಿ ಬಹಳಷ್ಟು ಯಶಸ್ಸು ಕಂಡಿವೆ.

ಸುಮ್ಮನೆ ಬಫರ್ ಮಾಡುವ ಪಾತ್ರ ನನ್ನದಲ್ಲ ಎಂಬುದು ನನಗೆ ಬಹಳ ಮುಖ್ಯ. ನನಗೆ ನಟನೆ ಮಾಡಲು ಏನಾದರೂ ಅವಕಾಶ ನೀಡುವ ಪಾತ್ರವಾಗಿರಬೇಕು.  ಹಾಗಾಗಿಯೇ ಈ ಸ್ಕ್ರಿಪ್ಟ್ ನೋಡಿದಾಗ ಇದು ವಿಭಿನ್ನ, ಮಾಮೂಲಿ ಪಾತ್ರವಲ್ಲ ಎಂದು ಅನಿಸಿತು ಎಂದಿದ್ದಾರೆ.

ಹೇಗಿದೆ ಬಿಗ್‌ಬಿ ಆರೋಗ್ಯ? ಇನ್ನೆಷ್ಟು ದಿನ ಆಸ್ಪತ್ರೆ ವಾಸ? ಇಲ್ಲಿದೆ ವಿವರ

ತೆಲುಗು ಸಿನಿಮಾ Aweನಲ್ಲಿ ನಿತ್ಯಾ ಮೆನನ್ ಲೆಸ್ಬಿಯನ್ ಪಾತ್ರ ನಿರ್ವಹಿಸಿದ್ದಾರೆ. ಈ ಸಿನಿಮಾದಲ್ಲಿ ಇನ್ನೊಬ್ಬ ಯುವತಿಗೆ ಆಕರ್ಷಿತಳಾಗ ಯುವತಿ ಪಾತ್ರದಲ್ಲಿ ನಿತ್ಯ ಮೆನನ್ ಕಾಣಿಸಿಕೊಂಡಿದ್ದರು.

ಆದರೆ ಈಗ ಇನ್‌ ಟು ದಿ ಶಾಡೋಸ್ ವೆಬ್ ಸಿರೀಸ್‌ನಲ್ಲಿ ಇನ್ನೊಬ್ಬ ಯುವತಿಗೆ ಚುಂಬಿಸುವ ಸೀನ್ ಕೂಡಾ ಮಾಡುತ್ತಿದ್ದಾರೆ. ಸಹ ನಟಿಯ ಜೊತೆ ಹಾಟ್‌ ಲಿಪ್‌ಲಾಕ್ ಸೀನ್‌ನಲ್ಲಿ ನಿತ್ಯಾ ಕಾಣಿಸಿಕೊಂಡಿದ್ದಾರೆ. ಈಗ ನಿತ್ಯಾ ಮೆನನ್ ಲೆಸ್ಬಿಯನ್ ಲಿಪ್‌ಲಾಕ್‌ ಫೋಟೋ ವೈರಲ್ ಆಗಿದೆ.