ಹೇಗಿದೆ ಬಿಗ್‌ಬಿ ಆರೋಗ್ಯ? ಇನ್ನೆಷ್ಟು ದಿನ ಆಸ್ಪತ್ರೆ ವಾಸ? ಇಲ್ಲಿದೆ ವಿವರ

First Published 15, Jul 2020, 1:55 PM

ಕೊರೋನಾ ಸೋಂಕಿಗೆ ಒಳಗಾದ ಕಾರಣ ಅಮಿತಾಬ್ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್‌ರನ್ನು ಮುಂಬೈನ ನಾನಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಮಿತಾಬ್‌ ಐಸೋಲೇಶನ್‌ ವಾರ್ಡ್‌ನಲ್ಲಿದ್ದಾರೆ. ಅಭಿಷೇಕ್ ಅವರನ್ನು ಈಗ ಸಾಮಾನ್ಯ ವಾರ್ಡ್‌ಗೆ ಶಿಫ್ಟ್‌ ಮಾಡಲಾಗಿದೆ. ಆಸ್ಪತ್ರೆಗೆ ಸಂಬಂಧಿಸಿದ ಮೂಲವೊಂದು ಇಬ್ಬರ ಆರೋಗ್ಯದ ಬಗ್ಗೆ ಮಾಹಿತಿಯನ್ನು ನೀಡಿದೆ. ಇಬ್ಬರ ಮೇಲೆ ಚಿಕಿತ್ಸೆಯ ಉತ್ತಮ ಪರಿಣಾಮ ಬೀರಿದ್ದು, ಆರೋಗ್ಯ ಸ್ಥಿರವಾಗಿದೆ. ವರದಿಗಳ ಪ್ರಕಾರ, ಅವರು ಕನಿಷ್ಠ ಏಳು ದಿನಗಳವರೆಗೆ ಆಸ್ಪತ್ರೆಯಲ್ಲಿ ಇರಬೇಕಾಗುತ್ತದೆ. ಅದೇ ಸಮಯದಲ್ಲಿ, ಅಮಿತಾಬ್ ಸೊಸೆ ಐಶ್ವರ್ಯಾ ರೈ ಮತ್ತು ಮೊಮ್ಮಗಳು ಆರಾಧ್ಯ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಿಎಂಸಿ ತಂಡ ಇಬ್ಬರ ಬಗ್ಗೆ ಸಂಪೂರ್ಣ ಕಾಳಜಿ ವಹಿಸುತ್ತಿದೆ.

ಕೊರೋನಾ ಸೋಂಕಿಗೆ ಒಳಗಾದ ಕಾರಣ ಅಮಿತಾಬ್ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್‌ರನ್ನು ಮುಂಬೈನ ನಾನಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಚ್ಚನ್ ಕುಟುಂಬದೊಂದಿಗೆ ಸಂಪರ್ಕಕ್ಕೆ ಬಂದಿದ್ದ ಸುಮಾರು 54 ಜನರಲ್ಲಿ  28 ಜನ ಕ್ವಾರೆಂಟೈನ್‌ ಆಗಿದ್ದಾರೆ.

ಅವರ ಬಂಗಲೆಯಲ್ಲಿ ಭಾನುವಾರ 26 ಜನರ ಸ್ವ್ಯಾಬ್ ಪರೀಕ್ಷೆಯನ್ನು ನಡೆಸಲಾಗಿದ್ದು, ಅವರ ಪರೀಕ್ಷಾ ವರದಿ ನೆಗಟಿವ್‌ ಬಂದಿದೆ. ಮುನ್ನೆಚ್ಚರಿಕೆಯಾಗಿ ಎಲ್ಲರವನ್ನು 14 ದಿನಗಳವರೆಗೆ ಕ್ವಾರೆಂಟೈನ್‌ನಲ್ಲಿ ಇರಿಸಲಾಗಿದೆ.

ಬಿಗ್‌ ಬಿ ಬಂಗಲೆಯ ಹೊರಗಿನ ಕೆಲವು ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ, ಇದರಲ್ಲಿ ಅವರ ಸೆಕ್ಯುರಿಟಿ ಗಾರ್ಡ್ ಪಿಜ್ಜಾ ಡೆಲಿವರಿ ಹುಡುಗನಿಂದ ಪ್ಯಾಕೆಟ್ ತೆಗೆದುಕೊಳ್ಳುತ್ತಿರುವುದು ಕಂಡುಬರುತ್ತದೆ. ಈ ಪೋಟೋಗಳಿಂದ, ಸೋಮವಾರ  ಬಚ್ಚನ್ ಕುಟುಂಬವು ಪಿಜ್ಜಾವನ್ನು ಊಟಕ್ಕೆ ಆರ್ಡರ್‌ ಮಾಡಿತ್ತು ಎಂದು ತಿಳಿಯುತ್ತದೆ. ಸೆಕ್ಯೂರುಟಿ ಗಾರ್ಡ್‌ ಸಂಪೂರ್ಣ ಭದ್ರತೆಯೊಂದಿಗೆ ಪಿಜ್ಜಾವನ್ನು ಪಡೆದಿದ್ದಾನೆ.

ಬಾಲಿವುಡ್‌ ಸೂಪರ್‌ಸ್ಟಾರ್‌ನ ನಾಲ್ಕು ಬಂಗಲೆಗಳನ್ನು ಸ್ಯಾನಿಟೈಜ್‌ ಮಾಡಿ ಮೊಹರು ಮಾಡಲಾಗಿದೆ. ಬಿಎಂಸಿ ತಂಡವು ಸೋಮವಾರ ನಾಲ್ಕು ಬಂಗಲೆಗಳನ್ನೂ ಸ್ಯಾನಿಟೈಜ್‌ ಮಾಡಿದೆ.

ಮಾಧ್ಯಮಗಳ ಸುದ್ದಿಗಳ ಪ್ರಕಾರ, ಬಚ್ಚನ್‌ ಫ್ಯಾಮಿಲಿಗೆ ಕೊರೋನಾ ಹರಡಲು ಎರಡು ವಿಶೇಷ ಕಾರಣಗಳನ್ನು ಬಹಿರಂಗಪಡಿಸಲಾಗುತ್ತಿದೆ.

ವರದಿಯಲ್ಲಿ ಮೊದಲ ಕಾರಣವೆಂದರೆ ಅಭಿಷೇಕ್ ಬಚ್ಚನ್ ಡಬ್ಬಿಂಗ್‌ಗಾಗಿ ಮನೆಯಿಂದ ಹೊರ ಹೋಗಿದ್ದು. ಇತ್ತೀಚಿಗೆ ಬಿಡುಗಡೆಯಾದ ತಮ್ಮ ವೆಬ್ ಸೀರಿಸ್‌ನ ಧ್ವನಿ ಮುದ್ರಣಕ್ಕಾಗಿ ವರ್ಸೋವಾದ ಸ್ಟುಡಿಯೋಗೆ ಅಭಿಷೇಕ್  ಹೋಗಿದ್ದರೆಂದು ಕೇಳಿ ಬಂದಿದೆ. ಈ ಸಮಯದಲ್ಲಿ ಅವರು ವೈರಸ್ ಸೋಂಕಿತರಾಗಿರಬಹುದು, ಎನ್ನಲಾಗಿದೆ.

ಇದಲ್ಲದೆ, ಕೊರೋನಾ ವೈರಸ್ ಪ್ರಕರಣಗಳು ಹೆಚ್ಚಾಗಿರುವ ಸ್ಥಳದಲ್ಲೇ ಬಚ್ಚನ್ ಮನೆ ಇರುವುದರಿಂದ ಕುಟುಂಬದ ಕೆಲವು ಸದಸ್ಯರು ಕೊರೋನಾ ಸೋಂಕಿತ ವ್ಯಕ್ತಿಯೊಂದಿಗೆ ಸಂಪರ್ಕಕ್ಕೆ ಬಂದಿರಬಹುದು ಮತ್ತು ಅದರ ಮೂಲಕ ಅದು ಕುಟುಂಬದ ಉಳಿದ ಸದಸ್ಯರಿಗೂ ಹರಡಿರಬಹುದು ಎಂದು ಊಹಿಸಲಾಗುತ್ತಿದೆ.

ಬಿಗ್ ಬಿ ಅವರ ಸ್ಥಿತಿಯ ಬಗ್ಗೆ, ನಾನಾವತಿ ಆಸ್ಪತ್ರೆಯ ಕ್ರಿಟಿಕಲ್ ಕೇರ್ ಸರ್ವಿಸ್ ಮುಖ್ಯಸ್ಥ ಡಾ.ಅಬ್ದುಲ್ ಸಮದ್ ಅನ್ಸಾರಿ, 'ಅಮಿತಾಬ್ ಕೋವಿಡ್ ರೋಗಲಕ್ಷಣಗಳನ್ನು ತೋರಿಸುತ್ತಿರುವ ಐದನೇ ದಿನವಾಗಿದೆ. ಬಹುಶಃ ರೋಗಿಗಳಲ್ಲಿ ಕೊರೋನಾದ ಪರಿಣಾಮ 10 ಅಥವಾ 12ನೇ ಹೆಚ್ಚಾಗುತ್ತದೆ. ಆದರೆ ಇದು ಎಲ್ಲರಿಗೂ ಅನ್ವಯಿಸುವುದಿಲ್ಲ. ಅನೇಕ ಜನರಿಗೆ  ಲಕ್ಷಣಗಳು ಸೌಮ್ಯವಾಗಿಯೇ ಇರುತ್ತದೆ' ಎಂದಿದ್ದಾರೆ.

ಮತ್ತೊಂದು ವರದಿಯ ಪ್ರಕಾರ, ಆಸ್ಪತ್ರೆಗೆ ದಾಖಲಾದ ನಂತರ, ಅಮಿತಾಬ್ ಅವರ ಶ್ವಾಸಕೋಶದಲ್ಲಿ ಕಫ ತುಂಬಾ ಸಂಗ್ರಹವಾಗಿತ್ತು, ಅದು ಈಗ ಗಣನೀಯವಾಗಿ ಕಡಿಮೆಯಾಗಿದೆ. ಅವರ ಆಕ್ಸಿಜನ್‌ ಲೆವಲ್‌ ಕೂಡ ಸಾಮಾನ್ಯವಾಗಿದೆ. ಅಮಿತಾಬ್ ಅವರ ದುರ್ಬಲ ಶ್ವಾಸಕೋಶ ಮತ್ತು ವೈದ್ಯಕೀಯ ಇತಿಹಾಸವನ್ನು ಗಮನದಲ್ಲಿಟ್ಟುಕೊಂಡು, ನಿಯಂತ್ರಿತ ರೀತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಕಿತ್ಸೆಯ ಯಾವುದೇ ವ್ಯತಿರಿಕ್ತ ಪರಿಣಾಮವು ಅವರ ಶ್ವಾಸಕೋಶದ ಮೇಲೆ ಆಗದಂತೆ ವಿಶೇಷ ಕಾಳಜಿ ವಹಿಸಲಾಗುತ್ತಿದೆ ಎಂದು ಈ ವರದಿಯಲ್ಲಿ, ಆಸ್ಪತ್ರೆಗೆ ಸಂಬಂಧಿಸಿದ ಮೂಲಗಳನ್ನು ಉಲ್ಲೇಖಿಸಿವೆ.

ಭಾನುವಾರ ಮಧ್ಯಾಹ್ನದ ನಂತರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ವರದಿಗಳನ್ನು ಹಾಗೂ ತಂದೆಯೊಂದಿಗೆ ಆಸ್ಪತ್ರೆಯಲ್ಲಿಯೇ ಇರುತ್ತಾರೆ ಎಂದು ಟ್ವೀಟ್ ಮಾಡುವ ಮೂಲಕ ಅಭಿಷೇಕ್  ಸ್ಪಷ್ಟಪಡಿಸಿದ್ದಾರೆ. ಆರಾಧ್ಯ ಮತ್ತು ಐಶ್ವರ್ಯಾ ಸ್ವಯಂ ಕ್ಯಾರೆಂಟೈನ್‌ನಲ್ಲಿ ಉಳಿದುಕೊಂಡಿರುವ ಬಗ್ಗೆ ಮಾಹಿತಿ ನೀಡಿದ ಅಭಿಷೇಕ್, ಅವರು ಮನೆಗೆ ಹೋಗುವ ಬಗ್ಗೆ ವೈದ್ಯರು ಹೇಳುವವರೆಗೆ ತಂದೆಯೊಂದಿಗೆ ಆಸ್ಪತ್ರೆಯ ಮೇಲ್ವಿಚಾರಣೆಯಲ್ಲಿರುತ್ತಾರೆ ಎಂದು ಬರೆದಿದ್ದಾರೆ.

ಐಸೋಲೇಶನ್‌ ವಾರ್ಡ್‌ನಲ್ಲಿದ್ದರೂ ಅಮಿತಾಬ್ ತನ್ನ ದಿನಚರಿಯನ್ನು ಮುಂದುವರಿಸಿದ್ದಾರೆ. ಅವರು ತಮ್ಮ ಫ್ಯಾನ್ಸ್‌, ಕೋಲಿಂಗ್ಸ್‌, ಪತ್ರಕರ್ತರು ಮತ್ತು ಸ್ನೇಹಿತರಿಗೆ ಜನ್ಮದಿನದ ಶುಭಾಶಯಗಳನ್ನು ಕೋರುತ್ತಿದ್ದಾರೆ ಮತ್ತು ಅವರ ಬ್ಲಾಗ್ ಅಪ್ಡೇಟ್‌ ಮಾಡುತ್ತಿದ್ದಾರೆ. ಸೋಮವಾರ ರಾತ್ರಿ ಬ್ಲಾಗ್‌ನಲ್ಲಿ  ಕವಿತೆಯ ಮೂಲಕ ಎಲ್ಲ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿ, ಭಾವನೆಗಳಿಗೆ ಮತ್ತು ಪ್ರಾರ್ಥನೆಗಳಿಗೆ ನಮಸ್ಕರಿಸಿದ್ದಾರೆ. . ಅಮಿತಾಬ್ ಬರೆದ ಸ್ಥಳವನ್ನು  'ಕೋವಿಡ್ ವಾರ್ಡ್ ಆಸ್ಪತ್ರೆ' ಎಂದು ಉಲ್ಲೇಖಿಸಿದ್ದಾರೆ.

loader