ಬೆಂಗಳೂರು (ಜ.04): ನಿಖಿಲ್ ಕುಮಾರಸ್ವಾಮಿ ನಾಯಕನಾಗಿ ನಟಿಸುತ್ತಿರುವ ಬಹು ನಿರೀಕ್ಷಿತ ಚಿತ್ರ ’ಸೀತಾರಾಮ ಕಲ್ಯಾಣ’ ಜ. 25 ಕ್ಕೆ ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ. 

ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ ರಚಿತಾ ರಾಮ್ ಈ ಫೋಟೋ

ಈ ಚಿತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ನಾಯಕನಾಗಿ, ರಚಿತಾ ರಾಮ್ ನಾಯಕಿಯಾಗಿ ನಟಿಸಿದ್ದಾರೆ. ಈ ಸಿನಿಮಾದ ಇನ್ನೊಂದು ವಿಶೇಷ ಎಂದರೆ ನೂರಕ್ಕೂ ಹೆಚ್ಚು ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ. ಚೆನ್ನಾಂಬಿಕಾ ಫಿಲಂಸ್ ಬ್ಯಾನರ್ ಅಡಿಯಲ್ಲಿ ಅನಿತಾ ಕುಮಾರಸ್ವಾಮಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. 

ಸೀತಾರಾಮ ಕಲ್ಯಾಣ ಹಿಂದಿ ಸ್ಯಾಟಲೈಟ್ ಹಕ್ಕಿಗೆ 5.5 ಕೋಟಿ

ಈ ಚಿತ್ರಕ್ಕಾಗಿ ನಟಿ ರಚಿತಾ ರಾಮ್ ಕೇವಲ 25 ದಿನಗಳಲ್ಲಿ 7 ಕೆಜಿ ಇಳಿಸಿಕೊಂಡಿದ್ದಾರೆ. ಚಿತ್ರ ರಿಲೀಸ್ ಗೂ ಮುನ್ನ ಸೀತಾರಾಮ ಕಲ್ಯಾಣ ಹಿಂದಿ ಸ್ಯಾಟಲೈಟ್ ರೈಟ್ಸ್ ಬರೋಬ್ಬರಿ 5.5 ಕೋಟಿಗೆ ಮಾರಾಟವಾಗಿದೆ. ಆರ್ ಕೆ ಸ್ಟುಡಿಯೋಸ್ ಈ ಹಕ್ಕನ್ನು ಖರೀದಿಸಿದೆ. 

ನಿಖಿಲ್ ಕುಮಾರ್ ಅಭಿನಯದ ಮೊದಲ ಚಿತ್ರ ‘ಜಾಗ್ವಾರ್’ ಹಿಂದಿಗೆ ಡಬ್ ಆಗಿತ್ತು. ಯುಟ್ಯೂಬ್‌ನಲ್ಲೇ 5 ಲಕ್ಷಕ್ಕೂ ಹೆಚ್ಚು ಜನ ಚಿತ್ರ ವೀಕ್ಷಿಸಿದ್ದರು. ಅದು ಬಾಲಿವುಡ್ ನಲ್ಲಿ ಸಂಚಲನಕ್ಕೂ ಕಾರಣವಾಗಿತ್ತು. ವಿಶೇಷವಾಗಿ ಆನ್‌ಲೈನ್‌ನಲ್ಲಿ ಅದನ್ನು ನೋಡಿದವರು ಚಿತ್ರದ ಮೇಕಿಂಗ್ ಹಾಗೂ ಆ್ಯಕ್ಷನ್ ಸೀಕ್ವೆನ್ಸ್‌ಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅದೇ ಕಾರಣಕ್ಕೆ ನಿಖಿಲ್ ‘ಸೀತಾರಾಮ ಕಲ್ಯಾಣ’ ಚಿತ್ರಕ್ಕೆ ಬಹು ಬೇಡಿಕೆ ಸಿಕ್ಕಿದೆ.

ಪುತ್ರನ ಸಿನಿಮಾ ಟೀಸರ್ ಬಿಡುಗಡೆ ಮಾಡಿದ ಸಿಎಂ

‘ಮೊದಲ ಚಿತ್ರದ ಹಾಗೆ ಇದು ಕೂಡ ಅದ್ಧೂರಿಯಾಗಿ ಮೂಡಿ ಬರಬೇಕು ಎನ್ನುವುದು ನಿರ್ಮಾಪಕ ಕುಮಾರಸ್ವಾಮಿ ಅವರಿಗೂ ಇತ್ತು. ಅದನ್ನೇ ತಲೆಯಲ್ಲಿಟ್ಟುಕೊಂಡು ಈ ಸಿನಿಮಾ ಮಾಡಿದೆವು. ನಟನೆ ಮಾತ್ರವಲ್ಲ ಪ್ರತಿಯೊಂದರಲ್ಲೂ ನಿಖಿಲ್ ಕುಮಾರ್ ಮುತುವರ್ಜಿ ವಹಿಸಿಕೊಂಡರು. ಅದರ ಫಲವೇ ಇವತ್ತು ಚಿತ್ರದ ಹಿಂದಿ ಸ್ಯಾಟ್‌ಲೈಟ್ಸ್ ರೈಟ್ಸ್ ದಾಖಲೆ ಮೊತ್ತಕ್ಕೆ ಸೇಲ್ ಆಗಿದೆ ಅಂತ ನಿರ್ಮಾಪಕರು ಹೇಳಿದ್ದಾರೆ’ ಎನ್ನುತ್ತಾರೆ ನಿರ್ದೇಶಕ ಎ. ಹರ್ಷ.