ನಿಖಿಲ್ ಕುಮಾರ್ ಅಭಿನಯದ ‘ಸೀತಾರಾಮ ಕಲ್ಯಾಣ’ ರಿಲೀಸ್‌ಗೆ ರೆಡಿ ಆಗಿದೆ. ನವೆಂಬರ್ ಕೊನೆಯ ವಾರ, ಇಲ್ಲವೇ ಡಿಸೆಂಬರ್ ಮೊದಲ ವಾರ ಚಿತ್ರ ರಿಲೀಸ್ ಗ್ಯಾರಂಟಿ. ಈ ಮಧ್ಯೆ ‘ಸೀತಾರಾಮ ಕಲ್ಯಾಣ’ ಹಿಂದಿ ಸ್ಯಾಟಲೈಟ್ ರೈಟ್ಸ್ದಾಖಲೆ ಮೊತ್ತಕ್ಕೆ ಮಾರಾಟವಾಗಿದೆ. ಬರೋಬ್ಬರಿ 5.5 ಕೋಟಿಗೆ ಆರ್‌ಕೆ ಸ್ಟುಡಿಯೋಸ್ ಖರೀದಿಸಿದೆ. ಈ ಮೊತ್ತ ಕನ್ನಡದ ಮಟ್ಟಿಗೆ ದಾಖಲೆಯೇ. 

ನಿಖಿಲ್ ಕುಮಾರ್ ಅಭಿನಯದ ಮೊದಲ ಚಿತ್ರ ‘ಜಾಗ್ವಾರ್’ ಹಿಂದಿಗೆ ಡಬ್ ಆಗಿತ್ತು. ಯುಟ್ಯೂಬ್‌ನಲ್ಲೇ 5 ಲಕ್ಷಕ್ಕೂ ಹೆಚ್ಚು ಜನ ಚಿತ್ರ ವೀಕ್ಷಿಸಿದ್ದರು. ಅದು ಬಾಲಿವುಡ್ ನಲ್ಲಿ ಸಂಚಲನಕ್ಕೂ ಕಾರಣವಾಗಿತ್ತು. ವಿಶೇಷವಾಗಿ ಆನ್‌ಲೈನ್‌ನಲ್ಲಿ ಅದನ್ನು ನೋಡಿದವರು ಚಿತ್ರದ ಮೇಕಿಂಗ್ ಹಾಗೂ ಆ್ಯಕ್ಷನ್ ಸೀಕ್ವೆನ್ಸ್‌ಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅದೇ ಕಾರಣಕ್ಕೆ ನಿಖಿಲ್ ‘ಸೀತಾರಾಮ ಕಲ್ಯಾಣ’ ಚಿತ್ರಕ್ಕೆ ಬಹು ಬೇಡಿಕೆ ಸಿಕ್ಕಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

‘ಮೊದಲ ಚಿತ್ರದ ಹಾಗೆ ಇದು ಕೂಡ ಅದ್ಧೂರಿಯಾಗಿ ಮೂಡಿ ಬರಬೇಕು ಎನ್ನುವುದು ನಿರ್ಮಾಪಕ ಕುಮಾರಸ್ವಾಮಿ ಅವರಿಗೂ ಇತ್ತು. ಅದನ್ನೇ ತಲೆಯಲ್ಲಿಟ್ಟುಕೊಂಡು ಈ ಸಿನಿಮಾ ಮಾಡಿದೆವು. ನಟನೆ ಮಾತ್ರವಲ್ಲ ಪ್ರತಿಯೊಂದರಲ್ಲೂ ನಿಖಿಲ್ ಕುಮಾರ್ ಮುತುವರ್ಜಿ ವಹಿಸಿಕೊಂಡರು. ಅದರ ಫಲವೇ ಇವತ್ತು ಚಿತ್ರದ ಹಿಂದಿ ಸ್ಯಾಟ್‌ಲೈಟ್ಸ್ ರೈಟ್ಸ್ ದಾಖಲೆ ಮೊತ್ತಕ್ಕೆ ಸೇಲ್ ಆಗಿದೆ ಅಂತ ನಿರ್ಮಾಪಕರು ಹೇಳಿದ್ದಾರೆ’ ಎನ್ನುತ್ತಾರೆ ನಿರ್ದೇಶಕ ಎ. ಹರ್ಷ.