ಆರ್ ಆರ್ ನಗರ ಕ್ಷೇತ್ರದ ಶಾಸಕ ಮುನಿರತ್ನ ಒಂದೆಡೆ ರಾಜಕೀಯದಲ್ಲಿ ಬ್ಯುಸಿಯಾಗಿದ್ದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಬಿಜೆಪಿ ಸರ್ಕಾರ ರಚೆನೆಯಾಗುವ ಹಂತದಲ್ಲಿದೆ. ರಾಜಕೀಯ ಗುದ್ದಾಟದಲ್ಲಿ ಬ್ಯುಸಿಯಾಗಿದ್ದರೆ ಇನ್ನೊಂದೆಡೆ ಕುರುಕ್ಷೇತ್ರ ಸಿನಿಮಾ ರಿಲೀಸ್ ಡೇಟ್ ವಿಚಾರದಲ್ಲೂ ಗೊಂದಲದಲ್ಲಿದ್ದಾರೆ. 

ಸ್ಯಾಂಡಲ್‌ವುಡ್ ಸ್ಟಾರ್ ತಾರಾಗಣ ಸೇರಿ ಮಾಡಿರುವ 'ಕುರುಕ್ಷೇತ್ರ' ಪಂಚ ಭಾಷೆಯಲ್ಲಿ ಬಿಡುಗಡೆಯಾಗಲು ಸಿದ್ಧವಾಗುತ್ತಿದ್ದು ಕಾರಣಾಂತರಗಳಿಂದ ರಿಲೀಸ್ ದಿನಾಂಕ ಮುಂದೆ ಹೋಗುತ್ತಲೇ ಇದೆ. ಮೂಲಗಳ ಪ್ರಕಾರ ಸಿನಿಮಾ ಆಗಸ್ಟ್‌ 9 ರಂದು ದೇಶಾದ್ಯಂತ ಬಿಡುಗಡೆ ಮಾಡುವುದಾಗಿ ಚಿತ್ರತಂಡ ನಿರ್ಧರಿಸಿದೆ.

ಕುರುಕ್ಷೇತ್ರ 2 ನೇ ಟ್ರೇಲರ್ ರಿಲೀಸ್; ದರ್ಶನ್ ಅಬ್ಬರಕ್ಕೆ ಅಭಿಮಾನಿಗಳು ಫುಲ್ ಖುಷ್!

ಕೆಲ ದಿನಗಳ ಹಿಂದೆ ಅದ್ಧೂರಿಯಾಗಿ ಆಡಿಯೋ ಲಾಂಚ್‌ ಕಾರ್ಯಕ್ರಮ ನಡೆದಿದ್ದು ನಟಿಸಿರುವ ಎಲ್ಲಾ ಕಲಾವಿದರು ಭಾಗಿಯಾಗಿದ್ದರು. ಆದರೆ ನಿಖಿಲ್ ಕುಮಾರಸ್ವಾಮಿ ಮಾತ್ರ ಕಾಣಿಸಿಕೊಂಡಿರಲಿಲ್ಲ. ಅಷ್ಟೇ ಅಲ್ಲದೇ ಸಿನಿಮಾ ಸಂಬಂಧಪಟ್ಟ ಯಾವುದೇ ವಿಚಾರಕ್ಕೂ ಪ್ರತಿಕ್ರಿಯೆ ನೀಡದ ಕಾರಣ ಅಭಿಮಾನಿಗಳಿಗೆ ಗೊಂದಲ ಹೆಚ್ಚಾಗಿದೆ.

ಸಖತ್‌ ಸೌಂಡ್‌ ಮಾಡುತ್ತಿದೆ ಕುರುಕ್ಷೇತ್ರದ ಪ್ರೇಮ ಗೀತೆ!

ದರ್ಶನ್‌ಗೆಂದು ಒಂದು ಟೀಸರ್ ಹಾಗೂ ಟ್ರೇಲರ್‌ ರಿಲೀಸ್ ಆಗಿತ್ತು. ಆದರೆ ನಿಖಿಲ್‌ಗೆ ಮಾತ್ರ ಒಂದೇ ಒಂದು ಟೀಸರ್ ರಿಲೀಸ್ ಆಗಿದ್ದು ಬೇಸರ ತಂದಿದ್ಯಾ ಅಥವಾ ಮುನಿರತ್ನ ಮೇಲೆ ಮುನಿಸಿಕೊಂಡಿದ್ದಾರಾ ?

ಟ್ರೇಲರ್ ನೋಡಿದರೆ ಗೊತ್ತಾಗುತ್ತದೆ ನಿಖಿಲ್ ಸಿನಿಮಾದಲ್ಲಿ ಅಭಿಮನ್ಯು ಪಾತ್ರ ಮಾಡಿದ್ದಾರೆ. ಆದರೆ ಅದಕ್ಕೆ ನೀಡಿರುವ ಧ್ವನಿ ಮಾತ್ರ ಅವರದಲ್ಲ. ಮೊದಲ ಟೀಸರ್‌ ಬಿಡುಗಡೆಯಾದಾಗ ಅದರಲ್ಲಿ ನಿಖಿಲ್ ಧ್ವನಿಯಲ್ಲೇ 'ತಾತ, ಈ ಯುದ್ಧ ಸ್ವಾಭಿಮಾನದ ಸಂಕೇತ ' ಎಂಬ ಡೈಲಾಗೆ ಇತ್ತು. ಇದಾದ ಮೇಲೆ ಬಿಡುಗಡೆಯಾದ ಎರಡು ಟ್ರೇಲರ್‌ನಲ್ಲಿ ನಿಖಿಲ್ ಧ್ವನಿ ಬದಲಾಗಿದೆ. ನಿಖಿಲ್ ಯಾಕೆ ದಬ್‌ ಮಾಡಿಲ್ಲ? ಕುರುಕ್ಷೇತ್ರಕ್ಕೂ ನಿಖಿಲ್‌ಗೂ ಕ್ಲಾಶ್‌ ಆಗಿದ್ಯಾ ಎಂಬುದು ಕುತೂಹಲ ಮೂಡಿಸಿದೆ.

ದರ್ಶನ್ ಅಭಿಮಾನಿ ಬೆನ್ನ ಮೇಲೆ ದುರ್ಯೋಧನ ಟ್ಯಾಟೋ

ಇನ್ನೊಂದೆಡೆ ಮುನಿರತ್ನ ವಿರುದ್ಧ ಉಪಚುನಾವಣೆಯಲ್ಲಿ ಹಂಗಾಮಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್‌ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸುವ ಕುರಿತು ಗಂಭೀರವಾಗಿ ಚರ್ಚೆ ನಡೆದಿದೆ.