ಈ ಹಿಂದೆ ಅವರು ನವರಸ ನಾಯಕ ಜಗ್ಗೇಶ್‌ ಅಭಿನಯದ ‘ಅಳಿಯ ಅಲ್ಲ ಮಗಳ ಗಂಡ’,‘ಸೋಮ’ ದಂತಹ ಯಶಸ್ವಿ ಚಿತ್ರಗಳನ್ನು ಕೊಟ್ಟಿದ್ದರು. ಇದೀಗ ಲವ್‌, ಥ್ರಿಲ್ಲರ್‌ ಹಾಗೂ ಆ್ಯಕ್ಷನ್‌ ಕಥಾ ಹಂದರದ ಚಿತ್ರದೊಂದಿಗೆ ಸಿನಿಮಾ ನಿರ್ದೇಶನಕ್ಕಿಳಿದಿದ್ದಾರೆ. ಬೆಂಗಳೂರು ಹೊರವಲಯದ ನೆಲಮಂಗಲದ ಉದ್ಭವ ಗಣಪತಿ ದೇವಾಸ್ಥಾನದಲ್ಲಿ ಇತ್ತೀಚೆಗೆ ಚಿತ್ರಕ್ಕೆ ಮುಹೂರ್ತ ನಡೆಯಿತು. ನೆಲಮಂಗಲ ಶಾಸಕ ಶ್ರೀನಿವಾಸಮೂರ್ತಿ, ಚಿತ್ರದ ಮೊದಲ ದೃಶ್ಯಕ್ಕೆ ಕ್ಯಾಮೆರಾ ಚಾಲನೆ ಮಾಡಿದರು. ಹಿರಿಯ ನಟ ಬಿರಾದಾರ್‌ ಕ್ಲಾಪ್‌ ಮಾಡಿದರು.

ಮಗಳು ಖುಷ್‌ ನಾನೂ ಖುಷ್‌: ಸುದೀಪ್‌

ವಿಕ್ಟರಿ ಸಿನಿ ಕ್ರಿಯೇಷನ್ಸ್‌ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಮುತ್ತುರಾಜ್‌ ಛಾಯಾಗ್ರಹಣ, ರಘುನಂದನ್‌ ಜೈನ್‌ ಸಂಗೀತ, ಸೂರ್ಯಕಾಂತ್‌ ಸಂಕಲನ, ಸೂರ್ಯಪ್ರಕಾಶ್‌ ಸಾಹಸ, ಸಿದ್ಧರಾಜ್‌ ನರಗುಂದ ಮತ್ತು ಆ್ಯಂಟೋನಿ ಸಾಹಿತ್ಯ ಒದಗಿಸಿದ್ದಾರೆ. ವಿನಯ್‌ ಹಾಗೂ ಆರತಿ ಚಿತ್ರದ ನಾಯಕ -ನಾಯಕಿ. ಹಾಗೆಯೇ ಶೋಭರಾಜ್‌, ಶ್ರೀನಿವಾಸ ಮೂರ್ತಿ ಕೂಡ ಚಿತ್ರದಲ್ಲಿದ್ದಾರೆ. ಕಲಾವಿದರ ಪೈಕಿ ಸದ್ಯಕ್ಕೆ ಇವರಷ್ಟೇ ಆಯ್ಕೆಯಾದವರು. ಉಳಿದಂತೆ ಇನ್ನಷ್ಟುಕಲಾವಿದರ ಆಯ್ಕೆ ಹುಡುಕಾಟ ನಡೆದಿದೆ. ಲವ್‌, ಥ್ರಿಲ್ಲರ್‌ ಸಿನಿಮಾ ಎನ್ನುವುದನ್ನು ಬಿಟ್ಟರೆ ಚಿತ್ರದ ಕತೆ ಬಗ್ಗೆ ನಿರ್ದೇಶಕ ಯೇಸುದಾಸ್‌ ಹೆಚ್ಚಿನ ಮಾಹಿತಿ ನೀಡಿಲ್ಲ.

ನಟನಾಗಿದ್ದಾಗ ಕದ್ದು ನೋಡಿ ಸಿನಿಮಾ ಮೇಕಿಂಗ್ ಕಲಿತೆ: ಸುಜಯ್ ಶಾಸ್ತ್ರಿ

‘ಪ್ರೇಮಿಗಳಿಗೆ ಅವರ ಪೋಷಕರಿಂದ ಎದುರಾಗುವ ತೊಂದರೆಗೆ ವಿಲನ್‌ ಕೂಡ ಸೇರಿಕೊಂಡರೆ ಏನೆಲ್ಲ ಆಗುತ್ತೆ, ಪ್ರೇಮಿಗಳು ಎಷ್ಟೇಲ್ಲ ಕಷ್ಟಎದುರಿಸಬೇಕಾಗುತ್ತದೆ, ಅಷ್ಟಾಗಿಯೂ ಅವರ ಪ್ರೀತಿ ಗೆಲುತ್ತಾ, ಇಲ್ಲವೇ ಎನ್ನುವುದನ್ನು ಥ್ರಿಲ್ಲರ್‌ ಜಾನರ್‌ ನಲ್ಲಿ ತೋರಿಸಲು ಹೊರಟಿದ್ದಾರಂತೆ ನಿರ್ದೇಶಕರು. ದಾಂಡೇಲಿ, ಧಾರವಾಡ, ಸಾಗರ ಹಾಗೂ ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲು ಚಿತ್ರ ತಂಡ ಪ್ಲಾನ್‌ ಹಾಕಿಕೊಂಡಿದೆ.ಈ ಚಿತ್ರದ ಇನ್ನೊಂದು ವಿಶೇಷ ಅಂದ್ರೆ ನೆಲಮಂಗಲ ಶಾಸಕ ಶ್ರೀನಿವಾಸ ಮೂರ್ತಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಸದ್ಯಕ್ಕೆ ಅವರ ಪಾತ್ರವೇನು ಎನ್ನುವುದನ್ನು ಚಿತ್ರತಂಡ ರಿವೀಲ್‌ ಮಾಡಿಲ್ಲ.