ಸೈಲೆಂಟಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಚಂದನವನದ ನಟಿ ನೇಹಾ ಪಾಟೀಲ್.

ಬೆಂಗಳೂರು: ಜನುಮದ ಜೋಡಿ ಧಾರವಾಹಿಯ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡ ನೇಹಾ ಪಾಟೀಲ್ ಬೆಂಗಳೂರು ಹುಡುಗ ಪ್ರವಿಣ್ ಕೈ ಹಿಡಿಯುತ್ತಿದ್ದಾರೆ. ಈ ಜೋಡಿಯ ನಿಶ್ಚಿತಾರ್ಥ ಅ.19 ರಂದು ಮಾಗಡಿ ರಸ್ತೆಯಲ್ಲಿರುವ ವಿಸ್ಮಯ ಪಾರ್ಟಿ ಹಾಲ್ ನಲ್ಲಿ ಕುಟುಂಬಸ್ಥರು, ಬಂಧುಗಳು, ಸ್ನೇಹಿತರು ಹಾಗು ಚಿತ್ರೋದ್ಯಮದ ಗಣ್ಯರ ಸಮ್ಮುಖದಲ್ಲಿ ನಡೆದಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮುಂದಿನ ವರ್ಷದ ಫೆಬ್ರವರಿಯಲ್ಲಿ ಜೋಡಿ ಸಪ್ತಪದಿ ತುಳಿಯಲಿದ್ದಾರೆ. ನೇಹಾ ಟೈಟ್ಲು ಬೇಕಾ, ಸಿತಾರಾ, ತಿಪ್ಪಜ್ಜಿ ಸರ್ಕಲ್, ಸ್ಲಂ, ಹುಲಿಯ ದುರ್ಗ, ವರ್ಧನ್ ಸೇರಿದಂತೆ ಹಲವಾರು ಚಿತ್ರದಲ್ಲಿ ನಟಿಸಿದ್ದಾರೆ. ವಿವಾಹದ ನಂತರವು ಕೂಡ ಸಿನಿಮಾ ಇಂಡಸ್ಟ್ರಿಯಲ್ಲಿ ಮುಂದುವರೆಯುವ ಬಯಕೆಯನ್ನು ನೇಹಾ ಹೊಂದಿದ್ದಾರೆ.