ಮುಂಬೈ[ನ.19]: ಬಾಲಿವುಡ್‌ ನಟ ಅಂಗದ್‌ ಬೇಡಿ ಅವರನ್ನು ಕಳೆದ ಮೇ 10ರಂದು ವಿವಾಹವಾಗಿದ್ದ ನಟಿ ನೇಹಾ ಧೂಪಿಯಾ ಭಾನುವಾರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಧೂಪಿಯಾ ಕುಟುಂಬಸ್ಥರು ತಿಳಿಸಿದ್ದಾರೆ.

ತಮಗಿಂತಲೂ ಎರಡು ವರ್ಷ ಹಿರಿಯರಾಗಿದ್ದ ಧೂಪಿಯಾ (37) ಅವರನ್ನು ಬೇಡಿ (35) 2018ರ ಮೇ 10ರಂದು ವಿವಾಹವಾಗಿದ್ದರು. ಆಗಸ್ಟ್‌ 24ರಂದು ಸಾಮಾಜಿಕ ಮಾಧ್ಯಮದ ಮೂಲಕ ತಾವು ಹೊಸ ಅತಿಥಿಯ ನಿರೀಕ್ಷೆಯಲ್ಲಿರುವುದಾಗಿ ತಿಳಿಸಿದ್ದರು. ಅದರ ಬೆನ್ನಲ್ಲೇ ಇದೀಗ ಶುಭ ಸುದ್ದಿಯನ್ನು ಜೋಡಿ ನೀಡಿದೆ.

ವಿವಾಹಕ್ಕೆ ಮುನ್ನವೇ ಧೂಪಿಯಾ ಗರ್ಭ ಧರಿಸಿದ್ದ ಕಾರಣ, ಅಂಗದ್‌-ನೇಹಾ ತರಾತುರಿಯಲ್ಲಿ ವಿವಾಹವಾಗಿದ್ದರು.