ಕಿರುತೆರೆಯ ‘ಕಾಮಿಡಿ ಕಿಲಾಡಿಗಳು' ಖ್ಯಾತಿಯ ನಾಟಿ ಗಲ್‌ರ್‍ ನಯನಾಗೆ ಸಿನಿಮಾದಲ್ಲಿ ಸಿಕ್ಕಾಪಟ್ಟೆಡಿಮ್ಯಾಂಡ್‌ ಕ್ರಿಯೇಟ್‌ ಆಗಿದೆ. ‘ಕಾಮಿಡಿ ಕಿಲಾಡಿಗಳು' ಸಖತ್‌ ಹಿಟ್‌ ಆದ ನಂತರ, ಹಿರಿಯ ನಟ ಜಗ್ಗೇಶ್‌ ಪುತ್ರನ ಸಿನಿಮಾದಲ್ಲಿ ನಯನಾ ಅಭಿನಯಿಸುವ ಅವಕಾಶ ಸಿಕ್ಕಿದೆ ಎನ್ನುವ ಸುದ್ದಿ ಇತ್ತು. ಆದಾದ ಬೆನ್ನಲ್ಲೇ ‘ಜಂತರ್‌ ಮಂತರ್‌' ಹೆಸರಿನ ಚಿತ್ರಕ್ಕೆ ನಯನಾ ಫಿಕ್ಸ್‌ ಆದ್ರು. ಈ ಸುದ್ದಿಗಳು ಹಳತಾದವು ಎನ್ನುವ ಹೊತ್ತಲ್ಲಿ ರಾಕಿಂಗ್‌ ಸ್ಟಾರ್‌ ಯಶ್‌ ಅಭಿನಯದ ‘ಕೆ ಜಿಎಫ್‌ 'ಕಡೆಯಿಂದ ನಯ­ನಾಗೆ ಬಂಪರ್‌ ಆಫರ್‌ ಬಂದಿದೆ. ಈ ಚಿತ್ರದಲ್ಲಿ ನಯನಾ ಪ್ರಮುಖ ಪಾತ್ರ­ವೊಂದಕ್ಕೆ ಬಣ್ಣ ಹಚ್ಚಲು ರೆಡಿ ಆಗಿದ್ದಾರೆ. ‘ಕಾಮಿಡಿ ಕಿಲಾಡಿಗಳು' ರಿಯಾಲಿಟಿ ಶೋ ಕಾರಣಕ್ಕೆ ನಯನಾ, ‘ಕೆಜಿ­ಎಫ್‌'ನಲ್ಲೂ ಕಾಮಿಡಿ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆಂದರೆ ನಿಮ್ಮ ಉಹೆ ತಪ್ಪು. ಕೆಜಿಎಫ್‌ನಲ್ಲಿ ನಾಟಿ ಹುಡುಗಿ ನಯನಾ ಓರ್ವ ಪ್ರೆಗ್ನೆಂಟ್‌ ವುಮೆನ್‌ ಅಂತೆ.

‘ನಿರ್ದೇಶಕರು ಪಾತ್ರದ ಬಗ್ಗೆ ನನ್ನಲ್ಲಿ ಹೆಚ್ಚೇನೂ ಹೇಳಿಲ್ಲ. ಅದೊಂದು ಪ್ರೆಗ್ನೆಂಟ್‌ ವುಮೆನ್‌ ಪಾತ್ರ. ಒಳ್ಳೆಯ ಮೆಸೇಜ್‌ ಇದೆ. ನೀವು ಆ ಪಾತ್ರದಲ್ಲಿ ಕಾಣಿಸಿಕೊಂಡರೆ ಚೆನ್ನಾಗಿರುತ್ತೆ ಅಂದ್ರು. ಒಪ್ಪಿಕೊಂಡೆ. ಎಷ್ಟುದಿನದ ಚಿತ್ರೀಕರಣವೋ ಎಂತೋ ಇನ್ನು ಗೊತ್ತಾಗಿಲ್ಲ. ರೆಡಿ ಇರಿ ಅಂತ ಹೇಳಿದ್ದಾರೆ. ನಾಳೆಯೋ ಅಥವಾ ನಾಡಿದ್ದೋ ಶೂಟಿಂಗ್‌ ಶುರುವಾಗಲಿದೆಯಂತೆ' ಎನ್ನುತ್ತಾರೆ ನಯನಾ. ವಿಜಯ್‌ ಕಿರಗಂದೂರು ನಿರ್ಮಾಣದಲ್ಲಿ ಪ್ರಶಾಂತ್‌ ನೀಲ್‌ ಆ್ಯಕ್ಷನ್‌ ಕಟ್‌ ಹೇಳುತ್ತಿರುವ ‘ಕೆಜಿಎಫ್‌' ರಾಕಿಂಗ್‌ ಸ್ಟಾರ್‌ ಯಶ್‌ ಅಭಿನಯದ ಬಹುನಿರೀಕ್ಷಿತ ಚಿತ್ರ. ಈ ಚಿತ್ರಕ್ಕಾಗಿಯೇ ನಟ ಯಶ್‌ ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಂಡಿರುವುದು ಸಾಕಷ್ಟುಕುತೂಹಲ ಹುಟ್ಟಿಸಿದೆ.

ಮಧ್ಯೆ ನಯನಾ ಅಭಿನಯಿಸುತ್ತಿ ದ್ದಾರೆನ್ನುವ ‘ಜಂತರ್‌ ಮಂತರ್‌'ಗೆ ಈ ತಿಂಗಳ ಕೊನೆ ವಾರದಿಂದ ಚಿತ್ರೀಕರಣ ಶುರುವಂತೆ. ಉಳಿದಂತೆ ನಟ ಜಗ್ಗೇಶ್‌ ಪುತ್ರನ ಸಿನಿಮಾದ ವಿವರ ಇನ್ನು ಅವರಿಗೂ ಗೊತ್ತಿಲ್ವಂತೆ. ಒಟ್ಟಿನಲ್ಲಿ ‘ಕೆಜಿಎಫ್‌' ಮೂಲಕವೇ ಸಿನಿಜರ್ನಿ ಶುರು ಮಾಡು­ತ್ತಿರುವ ನಯನಾ, ಮತ್ತೆ ಕಿರುತೆರೆಯಲ್ಲೂ ಬ್ಯುಸಿ ಆಗುತ್ತಿದ್ದಾರಂತೆ. ಝೀ ಕನ್ನಡದಲ್ಲಿಯೇ ಮೇ ಮೊದಲ ವಾರದಿಂದ ‘ಕಿಲಾಡಿ ಕುಟುಂಬ' ಹೆಸರಿನ ಮತ್ತೊಂದು ರಿಯಾ­ಲಿಟಿ ಶೋ ಶುರು­ವಾಗಲಿದೆ. ಅದರಲ್ಲೂ ನಯನಾ ಅ್ಯಂಡ್‌ ಟೀ ಮ್‌ ಪ್ರೇಕ್ಷಕರ ಮುಂದೆ ಬರಲಿದೆ. ಒಂದೆಡೆ ಕಿರುತೆರೆ ರಿಯಾಲಿಟಿ ಶೋ ಮತ್ತೊಂದೆಡೆ ಸಿನಿಮಾ ಎರಡು ಕಡೆ ಬ್ಯುಸಿ ಆಗುತ್ತಿರುವ ನಯನಾ ‘ಅವಕಾಶ ಬಂದಾಗ ಉಪಯೋಗಿಸಿಕೊಳ್ಳಬೇಕೆನ್ನುವ ಸೂತ್ರ ನನ್ನದು. ಎರಡಕ್ಕೂ ಕ್ಲಾಸ್‌ ಆಗದಂತೆ ಶೆಡ್ಯೂಲ್‌ ಫಿಕ್ಸ್‌ ಮಾಡಿಕೊಳ್ಳುತ್ತಿದ್ದೇನೆ. ಹಾಗೆನೇ ಖಾಸಗಿ ಬದುಕು ಕೂಡ ಅಷ್ಟೇ ಮುಖ್ಯ. ಎಲ್ಲೋ ಮುಕ್ತವಾಗಿ ಮನಸ್ಸಿಗೆ ಬಂದಂತೆ ಬದುಕುವುದನ್ನು ಕಳೆದು ಕೊಳ್ಳುತ್ತಿದ್ದೇವೆ ಎನ್ನುವ ಆತಂಕ. ಆದರೂ ಇವೆಲ್ಲ ಅಪರೂಪದ ಅವಕಾಶಗಳು ಸದ್ಬಳಕೆ ಮಾಡಿಕೊಳ್ಳಬೇಕಷ್ಟೇ' ಅಂತಾರೆ

ವರದಿ: ಕನ್ನಡಪ್ರಭ