ಹಾಲಿವುಡ್‌ಗೆ ಈ ತನಕ ಈ ತಂತ್ರಜ್ಞಾನ ಬಳಕೆ ಆಗಿದ್ದು ಒಂದೇ ಒಂದು ಚಿತ್ರಕ್ಕಂತೆ. ಅದನ್ನು ಹೊರತು ಪಡಿಸಿದರೆ, ಭಾರತೀಯ ಚಿತ್ರರಂಗದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಈ ತಂತ್ರಜ್ಞಾನದೊಂದಿಗೆ ಪ್ರೇಕ್ಷಕರ ಮುಂದೆ ಬರುತ್ತಿರುವ ಚಿತ್ರವೇ ‘ನಾಗರಹಾವು’
ದೇಶಾದ್ರಿ ಹೊಸ್ಮನೆ, ಕನ್ನಡ ಪ್ರಭ
ಕಣ್ಣೆದುರೇ ಬಾಲಕನೊಬ್ಬ ಮೇಕೆಯಾಗುವ ಕತೆ, ಪೆಟ್ಟಿಗೆಯೊಳಗಿನ ನರಿ, ಬಾಲಕನಾಗುವ ಪರಿ ಎಲ್ಲವೂ ಜಾದೂ ಎನ್ನುವುದು ಗೊತ್ತಿರುವ ಸಂಗತಿ. ಆದರೆ, ಭೌತಿಕವಾಗಿ ನಮ್ಮೊಂದಿಗಿಲ್ಲದ ಸ್ಟಾರ್ ನಟನೊಬ್ಬ ಬೆಳ್ಳಿತೆರೆಯಲ್ಲಿ ಮತ್ತೆ ಕಾಣಿಸಿಕೊಳ್ಳಲು ಸಾಧ್ಯ ಎನ್ನುತ್ತಿದೆ ವಿಎ್ಎಕ್ಸ್ ಗ್ರಾಫಿಕ್ಸ್. ಹೌದು, ಇದೇ ಸಾಧ್ಯತೆಯ ಕಾರಣಕ್ಕೆ ಸ್ಯಾಂಡಲ್ವುಡ್ನಲ್ಲಿ ಭಾರೀ ಕುತೂಹಲ ಹುಟ್ಟಿಸಿರುವ ಚಿತ್ರ‘ನಾಗರ ಹಾವು’. ಸಾಹಸ ಸಿಂಹ ವಿಷ್ಣುವರ್ಧನ್ ಎಂದಾಕ್ಷಣ ನಮಗೆ ನೆನಪಾಗುವುದೇ ‘ನಾಗರ ಹಾವು’ ಚಿತ್ರ. ಯಾಕೆಂದ್ರೆ ಸ್ಪುರದ್ರೂಪಿ ಯುವಕ ಬೆಳ್ಳಿತೆರೆಗೆ ಪರಿಚಯವಾಗಿದ್ದೇ ಆ ಚಿತ್ರದ ಮೂಲಕ. ಕಾಕಾತಾಳೀಯ ಎನ್ನುವ ಹಾಗೆ, ಅವರು ಭೌತಿಕವಾಗಿ ಇನ್ನಿಲ್ಲವಾದರೂ ಅದೇ ಹೆಸರಿನ ಚಿತ್ರದ ಮೂಲಕ ಮತ್ತೆ ಅವರದ್ದೇ ಮರುಸೃಷ್ಟಿ ಈ ಚಿತ್ರದ ಕುತೂಹಲದ ಸಂಗತಿ. ಅದು ಸಾಧ್ಯವಾಗಿದ್ದು ವಿಎ್ಎಕ್ಸ್ ಗಾಫ್ರಿಕ್ಸ್ ಎಂಬ ಬೆಳ್ಳಿತೆರೆಯ ಹೊಸ ತಂತ್ರಜ್ಞಾನದ ಮೂಲಕ. ಇದರ ಸೃಷ್ಟಿಗೆ ಕಾರಣವಾಗಿದ್ದೇ ‘ಮುಕುಟ ವಿಎ್ಎಕ್ಸ್ ’.
ಗ್ರಾಫಿಕ್ಸ್ ಲೋಕದ ಗಾರುಡಿಗ
ಟಾಲಿವುಡ್ ಮಟ್ಟಿಗೆ ಮುಕುಟ ವಿಎ್ಎಕ್ಸ್ ಅಂದ್ರೆ ‘ಆಧುನಿಕ ಜಾದೂಗಾರ’ ಅಂತಲೇ ೇಮಸ್. ‘ಮಗೀರ’, ‘ಈಗ’ ಚಿತ್ರದ ಮೂಲಕ ಬೆಳ್ಳಿತೆರೆಯಲ್ಲಿ ವಿಎ್ಎಕ್ಸ್ ಗ್ರಾಫಿಕ್ಸ್ ನ ಹೊಸ ಅವತಾರವನ್ನೇ ಕಂಡ ಪ್ರೇಕ್ಷಕರಿಗೆ ಅದರ ಕೈಚಳಕಕ್ಕೆ ಪರ್ಯಾಯ ಪದ ಇನ್ನು ಸಿಕ್ಕಿಲ್ಲ. ಅಂಥದೊಂದು ವಿಸ್ಮಯ ಲೋಕದ ಸೃಷ್ಟಿ ಅದರದ್ದು. ‘ಬಾಹುಬಲಿ’ ಕಂಡಾಗ ಪ್ರೇಕ್ಷಕನಿಗೆ ಆದ ಅನುಭವ ಇದಕ್ಕಿಂತ ಭಿನ್ನವಾಗಿರಲಿಲ್ಲ. ಚಿತ್ರದೊಳಗಿನ ರಮ್ಯ ದೃಶ್ಯಗಳನ್ನು ಕಾಣುತ್ತಲೇ ವಾಸ್ತವದ ಹತ್ತಿರ ಹೋದ ಪ್ರೇಕ್ಷಕನಿಗೆ ಆನಂತರವೇ ಗೊತ್ತಾಗಿದ್ದು ಅದು ಗ್ರಾಫಿಕ್ಸ್ನ ಜಾದೂ ಅಂತ. ಆ ಮಟ್ಟಿಗೆ ನೈಜತೆಗೆ ಹತ್ತಿರವೇ ಎನ್ನುವ ಹಾಗೆ ವಿಎ್ಎಕ್ಸ್ ತಂತ್ರಜ್ಞಾನವನ್ನು ಸೃಷ್ಟಿಸುತ್ತಿರುವ ಮುಕುಟ ವಿಎ್ಎಕ್ಸ್ ಅಂತಾರಾಷ್ಟ್ರೀಯ ಮಟ್ಟದ ಸಂಸ್ಥೆ. ಭಾರತದ ಮಟ್ಟಿಗೆ ಹೈದ್ರಾಬಾದ್ ಇದರ ಕೇಂದ್ರ ಸ್ಥಾನ. ಅಲ್ಲಿಂದ ಅಮೆರಿಕದಲ್ಲೂ ತನ್ನ ಕೇಂದ್ರ ಕಚೇರಿ ಹೊಂದಿದೆ. ಭಾರತೀಯ ಚಿತ್ರರಂಗ ಮಾತ್ರವಲ್ಲ, ಹಾಲಿವುಡ್ನಲ್ಲೂ ಈ ಸಂಸ್ಥೆಯ ಜಾದೂ ಪ್ರೇಕ್ಷಕರನ್ನು ಮಂತ್ರ ಮುಗ್ಧಗೊಳಿಸುತ್ತಿದೆ. ಇದೇ ಸಂಸ್ಥೆಯೇ ಈಗ ‘ ನಾಗರಹಾವು’ ಚಿತ್ರಕ್ಕೂ ಗ್ರಾಫಿಕ್ಸ್ ವರ್ಕ್ ಮಾಡಿದೆ.
ವಿಶ್ವದಲ್ಲಿಯೇ ಮೊದಲು
‘ಮಗೀರ’, ‘ಬಾಹುಬಲಿ’ ಸೇರಿದಂತೆ ಹಲವು ಚಿತ್ರಗಳ ಮೂಲಕ ಭಾರತೀಯ ಸಿನಿ ರಸಿಕರಿಗೆ ವಿಎ್ಎಕ್ಸ್ ಗ್ರಾಫಿಕ್ಸ್ ನ ಜಾದೂ ಹೊಸತಾಗಿಲ್ಲ ಉಳಿದಿಲ್ಲ. ಆದರೆ, ‘ನಾಗರಹಾವು’ ಚಿತ್ರಕ್ಕೆ ಜಗತ್ತಿನ ಮೊದಲ ಚಿತ್ರ ಎನ್ನುವ ಮತ್ತೊಂದು ಖ್ಯಾತಿ ಇದಿದ್ದು ಸಿಜಿಐ ಟೆಕ್ನಾಲಜಿ ಬಳಕೆಯಿಂದ. ಹಾಲಿವುಡ್ಗೆ ಈ ತನಕ ಈ ತಂತ್ರಜ್ಞಾನ ಬಳಕೆ ಆಗಿದ್ದು ಒಂದೇ ಒಂದು ಚಿತ್ರಕ್ಕಂತೆ. ಅದನ್ನು ಹೊರತು ಪಡಿಸಿದರೆ, ಭಾರತೀಯ ಚಿತ್ರರಂಗದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಈ ತಂತ್ರಜ್ಞಾನದೊಂದಿಗೆ ಪ್ರೇಕ್ಷಕರ ಮುಂದೆ ಬರುತ್ತಿರುವ ಚಿತ್ರವೇ ‘ನಾಗರಹಾವು’. ಬೆಳ್ಳಿತೆರೆಯಲ್ಲಿ ವಿಎ್ಎಕ್ಸ್ ತನ್ನದೆ ಆದ ವಿಸ್ಮಯವನ್ನು ಸೃಷ್ಟಿಸಿದರೆ, ಸಿಜಿಐ ಅದರ ನೋಟವನ್ನು ಮತ್ತಷ್ಟು ರಮ್ಯಗೊಳಿಸಲಿದೆಯಂತೆ. ಹೀಗಾಗಿ ವಿಎ್ಎಕ್ಸ್ ತಂತ್ರಜ್ಞಾನದ ಮತ್ತೊಂದು ಸುಧಾರಿತ ತಂತ್ರಜ್ಞಾನ ಎಂದೇ ಹೆಸರಾಗಿದೆ ಸಿಜಿಐ.
9 ನಿಮಿಷಕ್ಕೆ 15 ಕೋಟಿ
ಈ ಚಿತ್ರದ ಪ್ರಮುಖ ಪಾತ್ರಧಾರಿಯೇ ನಟಿ ರಮ್ಯಾ. ನಾಗದೇವತೆ, ಮಾನಸ ಹಾಗೂ ನಾಗಮ್ಮ ಎನ್ನುವ ಮೂರು ಪಾತ್ರಗಳಲ್ಲಿ ಕಾಣಸಿಗುವ ರಮ್ಯಾ, ಇಡೀ ಚಿತ್ರದ ಪ್ರಮುಖ ಆಕರ್ಷಣೆ. ಅವರ ಹಾಗೆಯೇ ನಟ ದಿಗಂತ ಕೂಡ ಚಿತ್ರದ ಪ್ರಮುಖರಲ್ಲಿ ಒಬ್ಬರು. ಅವರೊಂದಿಗೆ ಸಾಗುವ ಕತೆಯ ಕ್ಲೈ ಮ್ಯಾಕ್ಸ್ನಲ್ಲಿ ವಿಷ್ಣುವರ್ಧನ್ ಅವರದ್ದು ನಾಗರಹಾವಿನ ರೂಪ. ಜತೆಗೆ ಅವರದ್ದೇ ಆಕೃತಿ. ಈ ಪಾತ್ರಗಳು ಕಾಣಿಸಿಕೊಳ್ಳುವುದು ಕೇವಲ 9 ನಿಮಿಷಗಳು ಮಾತ್ರ. ಇದಕ್ಕಾಗಿ 15 ಕೋಟಿ ಖರ್ಚಾಗಿದೆಯಂತೆ. 20 ಅಡಿಯ ನಾಗರ ಹಾವು ಮತ್ತು ಶಿವನ ಗ್ರಾಫಿಕ್ಸ್ ಜತೆಗೆ ವಿಷ್ಣುವರ್ಧನ್ ಆಕೃತಿಯ ಸೃಷ್ಟಿಸಿಗೆ ಮುಕುಟ ವಿಎ್ಎಕ್ಸ್ ಸಂಸ್ಥೆ ಒಟ್ಟು ಎರಡು ವರ್ಷ ಕಾಲಾವಕಾಶ ತೆಗೆದುಕೊಂಡಿದೆ.
ವಿಷ್ಣು ಮರುಸೃಷ್ಟಿಗೆ ಕಾರಣ ಯಾರು?
‘ನಾಗರಹಾವು’ ಹೆಸರಲ್ಲಿ ಮತ್ತೊಂದು ಚಿತ್ರ ಶರುವಾಗಿದ್ದು, ಆ ಚಿತ್ರಕ್ಕೆ ವಿಷ್ಣುವರ್ಧನ್ ಅವರನ್ನೇ ಗ್ರಾಫಿಕ್ಸ್ ಮೂಲಕ ಮರು ಸೃಷ್ಟಿಸಿದ್ದು ಇಲ್ಲಿ ಕುತೂಹಲದ ಸಂಗತಿಗಳು. ಇದಕ್ಕೆ ಮೂಲ ಕಾರಣ ಚಿತ್ರದ ನಿರ್ದೇಶಕ ಕೋಡಿ ರಾಮಕೃಷ್ಣ. ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿ ಸಾಕಷ್ಟು ಚಿತ್ರಗಳನ್ನು ನಿರ್ದೇಶಿಸಿ ಸೈ ಎನಿಸಿಕೊಂಡವರು. ಟಾಲಿವುಡ್ನಲ್ಲಿ ಮೈಥಾಲಜಿ ಚಿತ್ರಗಳ ಬೆನ್ನು ಬಿದ್ದ ಖ್ಯಾತಿ ಅವರದ್ದು. ಅವರಿಗೆ ಕನ್ನಡದಲ್ಲಿ ವಿಷ್ಣುವರ್ಧನ್ ಜತೆಗೆ ಕೆಲಸ ಮಾಡಬೇಕೆನ್ನುವ ಬಹುದೊಡ್ಡ ಆಸೆ ಇತ್ತಂತೆ. ‘ಆಪ್ತರಕ್ಷಕ’ಚಿತ್ರ ಸೆಟ್ಟೇರಿದ ದಿನಗಳಲ್ಲಿ ಆ ಬಗೆಯ ಮಾತುಕತೆ ಕೂಡ ನಡೆದಿತ್ತಂತೆ. ಆದರೆ ಆ ಹೊತ್ತಿಗೆ ವಿಷ್ಣುವರ್ಧನ್ ಶೂಟಿಂಗ್ನಲ್ಲಿ ಬ್ಯುಸಿ ಆಗಿದ್ದರು. ಆದರೆ, ಇಬ್ಬರು ಸೇರುವ ವೇಳೆಗೆ, ವಿಷ್ಣುವರ್ಧನ್ ಭೌತಿಕವಾಗಿ ಇಲ್ಲವಾದರು. ಹೀಗಾಗಿ ಕೋಡಿ ರಾಮಕೃಷ್ಣ ಅಂದುಕೊಂಡ ಆಸೆ ಅರ್ಧಕ್ಕೆ ನಿಂತು ಹೋಗಿದ್ದು ಮತ್ತೆ ಸಾಧ್ಯವಾಗಿದ್ದು ನಿರ್ಮಾಪಕ ಸಾಜಿದ್ ಖುರೇಷಿ ಮೂಲಕ. ನಾಗದೇವತೆ ಹೆಸರಿನ ಕತೆಯನ್ನು ಬಹು ಭಾಷೆಗಳಲ್ಲಿ ತೆರೆಗೆ ತರಬೇಕೆಂದಾಗ ಕೋಡಿ ರಾಮಕೃಷ್ಣ ಅವರಿಗೆ ಕನ್ನಡದ ಮಟ್ಟಿಗೆ ಮೊದಲು ನೆನಪಾಗಿದ್ದೆ ವಿಷ್ಣುವರ್ಧನ್ ಅವರ ಹೆಸರಂತೆ. ಅವರ ಹೆಸರಲ್ಲಿಯೇ ಈ ಚಿತ್ರ ಮಾಡಬೇಕೆಂದು ಹೊರಟಾಗ ಮೊದಲು ಫಿಕ್ಸ್ ಆಗಿದ್ದು ಟೈಟಲ್. ಆ ನಂತರ ಅವರನ್ನು ಗಾಫ್ರಿಕ್ಸ್ ಮೂಲಕ ತರುವ ಚಿಂತನೆ. ಕ್ಲೈಮ್ಯಾಕ್ಸ್ನಲ್ಲಿ ಬರುವ ಒಂದು ಪಾತ್ರದ ಮೂಲಕವೇ ಕತೆಗೆ ಟ್ವಿಸ್ಟ್ ಸಿಗಲಿದೆಯಂತೆ. ಆ ಪಾತ್ರಕ್ಕೆ ಗ್ರಾಫಿಕ್ಸ್ ಮೂಲಕ ವಿಷ್ಣುವರ್ಧನ್ ಅವರನ್ನು ಯಾಕೆ ತರಬಾರದು ಎನ್ನುವ ಕೋಡಿ ಅವರ ಕನಸನ್ನು ನಿರ್ಮಾಪಕ ಖುರೇಷಿ ಅಕ್ಷರಶಃ ನಿಜವಾಗಿಸಿದ್ದಾರಂತೆ.
ಮೂರು ಭಾಷೆಗಳಲ್ಲಿ ಬರುತ್ತಿದೆ ಹಾವು
ಕನ್ನಡ, ತೆಲುಗು ಹಾಗೂ ತಮಿಳು ಹೀಗೆ ಮೂರು ಭಾಷೆಯಲ್ಲಿ ಬರುತ್ತಿದೆ ಈ ಚಿತ್ರ. ಕನ್ನಡದಲ್ಲಿ ಇದು ‘ನಾಗರಹಾವು’ ಎನ್ನುವ ಟೈಟಲ್ ಮೂಲಕವೇ ತೆರೆ ಕಂಡರೆ, ತೆಲುಗು ಮತ್ತು ತಮಿಳಿನಲ್ಲಿ ‘ಶಿವನಾಗಮ್’ಹೆಸರಲ್ಲಿ ಬಿಡುಗಡೆ ಆಗುತ್ತಿದೆ. ಕರ್ನಾಟಕ, ಆಂಧ್ರಪ್ರದೇಶ ಹಾಗೂ ತಮಿಳುನಾಡು ಸೇರಿದಂತೆ ವಿಶ್ವದಾದ್ಯಂತ ಒಟ್ಟು 1, 200 ಚಿತ್ರ ಮಂದಿರಗಳಲ್ಲಿ ಏಕಕಾಲದಲ್ಲಿಯೇ ಇದರ ಅಬ್ಬರ ಶುರುವಾಗುತ್ತಿದೆ. ಆದರೆ, ಕಾವೇರಿ ನದಿ ನೀರಿನ ವಿಚಾರದಲ್ಲಿ ನಟಿ ರಮ್ಯಾ, ಕರ್ನಾಟಕ ಪರ ಮಾತಾನಾಡಿದ್ದು ತಮಿಳು ಚಿತ್ರ ರಸಿಕರಿಗೆ ಬೇಸರ ತರಿಸಿದೆಯಂತೆ. ತಮಿಳು ನಾಡಿನಲ್ಲಿ ‘ನಾಗರಹಾವು’ ಚಿತ್ರದ ತಮಿಳು ಆವತರಣಿಕೆಯ ಬಿಡುಗಡೆಗೆ ಅಲ್ಲಿನ ವಿವಿಧ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ ಎನ್ನುವ ಮಾತುಗಳಿವೆ.
