ಸಮಂತಾ ಒಲಿಸಿಕೊಳ್ಳಲು ನಾಗ ಚೈತನ್ಯ ಏನೆಲ್ಲಾ ಸರ್ಕಸ್ ಮಾಡಿದ್ರು ಗೊತ್ತಾ?

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 4, Aug 2018, 5:23 PM IST
Naga Chaitanya: For 7 years, I tried my best to impress Samantha
Highlights

ಸಮಂತಾ, ನಾಗ ಚೈತನ್ಯ ದಾಂಪತ್ಯ ಜೀವನಕ್ಕೆ ಕಾಲಿಟ್ಟಾಗಿದೆ. ಈಗ ತಮ್ಮ ಪ್ರೀತಿಯ ಬಗ್ಗೆ ಹೇಳಿಕೊಂಡಿದ್ದಾರೆ. ಸಮಂತಾರನ್ನು ಒಲಿಸಿಕೊಳ್ಳಲು ಏನೆಲ್ಲಾ ಸರ್ಕಸ್ ಮಾಡಬೇಕಾಯಿತು ಎಂದು ನಾಗ ಚೈತನ್ಯ ಬಹಳ ಮಜವಾಗಿ ವಿವರಿಸಿದ್ದಾರೆ. 

 ಬೆಂಗಳೂರು (ಆ. 04): ನಾಗಚೈತನ್ಯ ಮತ್ತು ಸಮಂತಾ ಅಕ್ಕಿನೇನಿ ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಒಂದೂವರೆ ವರ್ಷವಾದರೂ ಇಲ್ಲಿಯವರೆಗೂ ಅವರು ತಮ್ಮ ಪ್ರೀತಿಯ ಬಗ್ಗೆ ಮಾತಾಡಿದ್ದು ಕಡಿಮೆ. ಆದರೆ ಈಗ ಕಾರ್ಯಕ್ರಮವೊಂದರಲ್ಲಿ ನಿರೂಪಕರು ಕೇಳಿದ ಪ್ರಶ್ನೆಗೆ ನಾಗಚೈತನ್ಯ ಮತ್ತು ಸಮಂತಾ ಕೊಟ್ಟಿರುವ ಉತ್ತರ ಅವರ ಪ್ರೀತಿಯ ಬಗೆಗಿನ ಇಂಟರೆಸ್ಟಿಂಗ್ ಸ್ಟೋರಿಯನ್ನು ಬಿಚ್ಚಿಟ್ಟಿದೆ.

‘ನೀವು ಯಾವಾಗಿನಿಂದ ಸಮಂತಾರನ್ನು ಇಷ್ಟಪಟ್ಟಿರಿ’ ಎಂದು ನಿರೂಪಕ ಕೇಳಿದ ಪ್ರಶ್ನೆಗೆ ನಾಗಚೈತನ್ಯ ‘ಹತ್ತು ವರ್ಷದ ಹಿಂದೆ ಸಿನಿಮಾ ಶೂಟ್‌ನಲ್ಲಿ ಸಮಂತಾಳನ್ನು ನೋಡಿ ಮನಸೋತೆ. ಆಗಿನಿಂದಲೂ ಅವಳನ್ನು ಒಲಿಸಿಕೊಳ್ಳಲು ಮಾಡಿದ ಪ್ರಯತ್ನ ಅಷ್ಟಿಷ್ಟಲ್ಲ. ಆದರೆ ಅವಳು ನನ್ನತ್ತ ತಿರುಗಿ ನೋಡಲು, ಪ್ರೀತಿ ಮಾಡಲು ಏಳು ವರ್ಷ ತೆಗೆದುಕೊಂಡಳು. ನನಗೆ ಅವಳನ್ನು ಬಿಟ್ಟು ಬೇರೆಯವರನ್ನು ಪ್ರೀತಿಸುವ ಆಯ್ಕೆಯೂ ಮನದಲ್ಲಿ ಸುಳಿಯಲಿಲ್ಲ’ ಎಂದು
ಹೇಳಿಕೊಂಡಿದ್ದಾರೆ.

ಇದೇ ಪ್ರಶ್ನೆಗೆ ಸಮಂತಾ ಕೊಟ್ಟ ಉತ್ತರ ಎಲ್ಲರೂ ನಗುವಂತೆ ಮಾಡಿದೆ. ‘ನಾಗಚೈತನ್ಯ ಸಾಕಷ್ಟು ಹುಡುಗಿಯರ ಹಿಂದೆ ಹೋದ. ಆದರೆ ನನ್ನ ಟೋಕನ್ ನಂಬರ್ ಅವನಿಗೆ ಸಿಗಬೇಕಾದರೆ ಏಳು ವರ್ಷ ಬೇಕಾಯಿತು’ ಎಂದು ಕಿಚಾಯಿಸಿದರು. ಇದಕ್ಕೆ ನಾನೇನು ಕಮ್ಮಿ ಎನ್ನುವ ಹಾಗೆ ‘ಒಂದೂವರೆ ವರ್ಷದ ಹಿಂದೆ ಇವಳನ್ನು ಕೈ ಹಿಡಿದಾಗಿನಿಂದ ಮತ್ಯಾವ ಹುಡುಗಿಯನ್ನೂ ನೋಡಲು ನನಗೆ ಆಗಿಲ್ಲ’ ಎಂದು ಸಂಗಾತಿ ಸಮಂತಾರನ್ನು ರೇಗಿಸಿದರು ನಾಗಚೈತನ್ಯ.

loader