ದಿನದಿಂದ ದಿನಕ್ಕೆ ’ಕನ್ನಡದ ಕೋಟ್ಯಧಿಪತಿ’ ವೇದಿಕೆಯ ಖದರ್ ಹೆಚ್ಚಾಗುತ್ತಿದೆ. ಕರ್ನಾಟಕದ ವಿವಿಧ ಭಾಗ ಹಾಗೂ ವಿವಿಧ ಭಾಷಾ ಜನ ಬಂದು ಭಾಗಿಯಾಗುತ್ತಾರೆ. ಕೆಲವರು ಲಕ್ಷ ಗೆದ್ದರೆ ಕೆಲವರು ಸಾವಿರ ಗೆದ್ದು ಸಂತೋಷದಿಂದ ಹೋಗುತ್ತಾರೆ.

ಕೋಟ್ಯಧಿಪತಿಯಲ್ಲಿ ಲೈಫ್ ಲೈನ್ ಇದ್ರೂ ಎಡವಟ್ಟು ಮಾಡಿಕೊಂಡ ಡಾಕ್ಟರ್!

ಕನ್ನಡ ಕೋಟ್ಯಧಿಪತಿಯ ಈ ವಾರದ ಹಾಟ್‌ ಸೀಟ್ ಐಎಎಸ್ ಆಕಾಂಕ್ಷಿ ಶ್ವೇತಾ ಕುಳಿತಿದ್ದರು. ಅವರ ಟೈಂ ಸರಿ ಇಲ್ವೋ ಏನೋ. ಫಿಫ್ಟಿ ಫಿಫ್ಟಿ ಆಯ್ಕೆ ಮಾಡಿಕೊಂಡಿದ್ದರೂ ಅದೃಷ್ಟ ಕೈ ಕೊಟ್ಟಿತ್ತು.

ಕೋಟಿ ಗೆಲ್ಲೋ ಆಟದಲ್ಲಿ ಕಣ್ಣೀರಿಟ್ಟ ಯುವತಿ!

80 ಸಾವಿರ ಪಡೆದು ಸುಗಮವಾಗಿ ಸಾಗುತ್ತಿದ್ದ ಗೇಮ್‌ನಲ್ಲಿ ಅಡ್ಡ ಬಂದದ್ದು ಈ ಪ್ರಶ್ನೆ 'ಭಾರತೀಯರೊಬ್ಬರು ಇಲ್ಲಿನ ಯಾವ ಸ್ಥಳಕ್ಕೆ ಇಲ್ಲಿಯವರೆಗೂ ಭೇಟಿಕೊಟ್ಟಿಲ್ಲ?' ಎಂಬ ಪ್ರಶ್ನೆ ಕೇಳಲಾಗಿತ್ತು. ಇದಕ್ಕೆ ಇದ್ದ ಆಯ್ಕೆಗಳು ನಾಲ್ಕು - ಚಂದ್ರ, ಮೌಂಟ್ ಎವರೆಸ್ಟ್‌, ದಕ್ಷಿಣ ಧ್ರುವ ಹಾಗೂ ಉತ್ತರ ಧ್ರುವ. ಫುಲ್ ಕನ್ಫ್ಯೂಸ್ ಆದ ಶ್ವೇತಾ ತೆಗೆದುಕೊಂಡಿದ್ದು ಫಿಫ್ಟಿ ಫಿಫ್ಟಿ ಲೈಫ್‌ ಲೈನ್. ಆ ವೇಳೆ ಉಳಿದ ಎರಡು ಆಯ್ಕೆಗಳು ಚಂದ್ರ ಹಾಗೂ ಮೌಂಟ್ ಎವರೆಸ್ಟ್‌. ದುರಾದೃಷ್ಟವಶಾತ್ ಇದಕ್ಕೆ ಮೌಂಟ್ ಎವರೆಸ್ಟ್‌ ಎಂದು ಉತ್ತರ ನೀಡಿ ಪಡೆದ 80 ಸಾವಿರ ಕಳೆದುಕೊಂಡು 10 ಸಾವಿರವನ್ನು ಮಾತ್ರ ತನ್ನದಾಗಿಸಿಕೊಂಡರು.