ಶ್ರೀದೇವಿ ಸಾವೆಂದಿಗೂ ಮರೆಯಲಾದಗ ಘಟನೆ, ಅಚಾನಕ್ ಆಗಿ ಅಸುನೀಗಿದ ನಟಿ ನೆನಪು ಅಮರ. ಅಭಿಮಾನಗಳಿಗೇ ಇಷ್ಟು ದುಃಖ ತಂದೆ ಘಟನೆ, ಕುಟುಂಬದ ಸದಸ್ಯರಿಗೆ ಇನ್ನೆಷ್ಟು ನೋವು ತಂದಿರಲಾರದು? ಪತ್ನಿಯ ಅಗಲಿಕೆಯನ್ನು ವಿವಾಹ ವಾರ್ಷಿಕೋತ್ಸವದ ದಿನ ಪತಿ ಬೋನಿ ಕಪೂರ್ ನನಪಿಸಿಕೊಂಡಿದ್ದು ಹೀಗೆ....

ನವದೆಹಲಿ: ದುಬೈನಲ್ಲಿ ನಿಗೂಢವಾಗಿ ಸಾವಿಗೀಡಾದ ನಟಿ ಶ್ರೀದೇವಿ ಜೊತೆಗಿನ 22ನೇ ವಿವಾಹ ವಾರ್ಷಿಕೋ ತ್ಸವದ ಹಿನ್ನೆಲೆಯಲ್ಲಿ ಪತಿ ಬೋನಿ ಕಪೂರ್ ಭಾವೊದ್ವೇಗದ ವಿಡಿಯೋವೊಂದನ್ನು ಶನಿವಾರ ಟ್ವೀಟಿಸಿದ್ದಾರೆ. 

Scroll to load tweet…

ದುಬೈನಲ್ಲಿ ದುರಂತ ಸಾವಿಗೀಡಾಗುವುದಕ್ಕೂ ಮುನ್ನ ತಮ್ಮ ಸಂಬಂಧಿ ಮೋಹಿತ್ ಮರ್ವಾ ವಿವಾಹ ಸಮಾರಂ ಭದಲ್ಲಿ ಶ್ರೀದೇವಿ ಪಾಲ್ಗೊಂಡಿದ್ದರು. ಆ ವೇಳೆ ಅನಿಲ್ ಕಪೂರ್ ಮತ್ತು ಸ್ನೇಹಿತರ ಜೊತೆ ಲವಲವಿಕೆಯಿಂದ ನೃತ್ಯ ಮಾಡುತ್ತಿರುವುದನ್ನು ವಿಡಿಯೋದಲ್ಲಿದೆ. ಈ ವಿಡಿಯೋವನ್ನು ಶೇರ್ ಮಾಡಿರುವ ಬೋನಿ ಕಪೂರ್, 'ಒಂದು ವೇಳೆ ಶ್ರೀದೇವಿ ಬದುಕಿದ್ದರೆ ಇಂದು 22ನೇ ವಿವಾಹ ವಾರ್ಷಿಕೋತ್ಸವ ಆಗಿರುತ್ತಿತ್ತು. ಜಾನ್ ನನ್ನ ಪತ್ನಿ, ನನ್ನ ಆತ್ಮದ ಜೊತೆಗಾರ್ತಿ, ನನ್ನ ಪ್ರೀತಿ ಪಾತ್ರಳಾದ ನೀನು ಯಾವತ್ತೂ ನನ್ನ ಜೊತೆಯಲ್ಲೇ ಇರುತ್ತೀಯ,' ಎಂಬ ಸಂದೇಶವನ್ನು ಬರೆದಿದ್ದಾರೆ.