ಭಾರತದ ಪೌರಾಣಿಕ ಮಹಾಕಾವ್ಯಗಳಾದ ಮಹಾಭಾರತ ಹಾಗೂ ರಾಮಾಯಣ ತನ್ನ ಕಥೆಗಳ ಮೇಲೆ ಹೇಗೆ ಪ್ರಭಾವ ಬೀರಿದೆ ಎನ್ನುವುದು ಆರ್‌ಆರ್‌ಆರ್‌ ನಿರ್ದೇಶ ಎಸ್‌ಎಸ್‌ ರಾಜಮೌಳಿ ಹೇಗೆ ಪ್ರಭಾವ ಬೀರಿದೆ ಎನ್ನುವುದನ್ನು ತೆರೆದಿಟ್ಟರು.

ಭಾರತೀಯ ಚಿತ್ರರಂಗದಲ್ಲಿ ಹೊಸ ಮೈಲಿಗಲ್ಲನ್ನೇ ನೆಟ್ಟಿರುವ ಆರ್‌ಆರ್‌ಆರ್‌ ಚಿತ್ರದ ನಿರ್ದೇಶ ಎಸ್‌ಎಸ್‌ ರಾಜಮೌಳಿ ಪ್ರಸ್ತುತ ಅಮೆರಿಕದಲ್ಲಿದ್ದಾರೆ. ಆಸ್ಕರ್‌ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಭಾಗವಹಿಸಲಿದ್ದು, ಅದಕ್ಕೂ ಮುನ್ನ ಅಮೆರಿಕದ ಮಾಧ್ಯಮಗಳಿಗೆ ವಿಶೇಷ ಸಂದರ್ಶನ ನೀಡಿದ್ದಾರೆ. ಅಂತರಾಷ್ಟ್ರೀಯ ಪತ್ರಿಕೆಗೆ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ, ಬಾಹುಬಲಿ ಚಿತ್ರದ ನಿರ್ದೇಶಕ ರಾಮಾಯಣ ಮತ್ತು ಮಹಾಭಾರತಗಳು ತಮ್ಮ ಜೀವನದ ಮೇಲೆ ಹೇಗೆ ಪ್ರಮುಖ ಪರಿಣಾಮ ಬೀರಿತು ಹಾಗೂ ತಮ್ಮ ಚಲನಚಿತ್ರಗಳ ಮೇಲೆ ಅವುಗಳ ಪರಿಣಾಮ ಬೀರಿದೆ ಎನ್ನುವುದರ ಬಗ್ಗೆ ಮಾತನಾಡಿದರು. 

ದಿ ನ್ಯೂಯಾರ್ಕರ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಎಸ್‌ಎಸ್‌ ರಾಜಮೌಳಿ, "ನಾನು ಬಾಲ್ಯದಿಂದಲೂ ರಾಮಾಯಣ, ಮಹಾಭಾರತದ ಕಥೆಗಳನ್ನು ಓದಿದ್ದೇನೆ. ಆರಂಭದಲ್ಲಿ ಇವುಗಳು ಕೇವಲ ಒಳ್ಳೆಯ ಹಾಗೂ ಆಕರ್ಷಕ ಎನಿಸುವ ಕಥೆಗಳು ಎನಿಸಿದ್ದವು. ಬೆಳೆಯಲು ಆರಂಭಿಸಿದಾಗ ನಾನು ಇದೇ ಮಹಾಕಾವ್ಯಗಳ ವಿವಿಧ ಆವೃತ್ತಿಗಳನ್ನು ಓದಿದೆ. ಅದರೊಂದಿಗೆ ಈ ಕಥೆಯು ನನಗೆ ಹೆಚ್ಚು ದೊಡ್ಡದಾಗಿ ವಿಕಸನವಾಗಲು ಪ್ರಾರಂಭವಾಯಿತು. ನಾನು ಪಾತ್ರಗಳು ಮತ್ತು ಪಾತ್ರದ ಒಳಗಿನ ಸಂಘರ್ಷಗಳು ಹಾಗೂ ಅದರೊಂದಿಗೆ ಅವರ ಪ್ರೇರಕ ಭಾವನೆಗಳನ್ನು ನೋಡಿತ್ತಿದೆ. ಇದರಿಂದಾಗಿ ನಾನು ಈ ಕಾವ್ಯಗಳನ್ನು ಇನ್ನಷ್ಟು ಅರ್ಥಮಾಡಿಕೊಳ್ಳಲು ಮತ್ತು ಪ್ರೀತಿ ಮಾಡಲು ಆರಂಭಿಸಿದೆ. ನನ್ನಿಂದ ನಿರ್ಮಾಣವಾಗುವ ಚಿತ್ರಗಳಲ್ಲಿ ರಾಮಾಯಣ ಹಾಗೂ ಮಹಾಭಾರತದ ಕಥೆಗಳು ಹೇಗಾದರೂ ಒಂದು ರೀತಿಯಲ್ಲಿ ಪ್ರಭಾವಿತವಾಗಿರುತ್ತದೆ. ಈ ಮಹಾಕಾವ್ಯಗಳು ಸಾಗರವಿದ್ದಂತೆ. ಪ್ರತಿ ಬಾರಿ ಭೇಟಿ ನೀಡಿದಾಗಲೂ ನಾನು ಹೊಸದನ್ನು ಕಂಡುಕೊಳ್ಳುತ್ತೇನೆ ಎಂದಿದ್ದಾರೆ.

Hania Aamir: ನಾಟು ನಾಟು ಹಾಡಿಗೆ ಪಾಕ್​ ಬೆಡಗಿಯ ಭರ್ಜರಿ ಸ್ಟೆಪ್​: ನೆಟ್ಟಿಗರು ಫಿದಾ

ಆಸ್ಕರ್‌ ರೇಸ್‌ನಲ್ಲಿದೆ ಆರ್‌ಆರ್‌ಆರ್‌: ಆರ್‌ಆರ್‌ಆರ್‌ನ ನಾಟು ನಾಟು ಈ ವರ್ಷದ ಆಸ್ಕರ್‌ನಲ್ಲಿ ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ಅಂತಿಮ ನಾಮಿನೇಷನ್‌ಗೆ ಆಯ್ಕೆಯಾಗಿದೆ ಮತ್ತು ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಹಾಜರಾಗಲು ಇಡೀ ಆರ್‌ಆರ್‌ಆರ್ ತಂಡವು ಲಾಸ್‌ ಏಂಜಲಿಸ್‌ನಲ್ಲಿದೆ. ಮಾರ್ಚ್ 12 ರಂದು ಲಾಸ್ ಏಂಜಲೀಸ್‌ನ ಡಾಲ್ಬಿ ಥಿಯೇಟರ್‌ನಲ್ಲಿ ರಾಹುಲ್ ಸಿಪ್ಲಿಗುಂಜ್ ಮತ್ತು ಕಾಲ ಭೈರವ ಅವರಿಂದ ವೇದಿಕೆಯಲ್ಲಿ ನಾಟು ನಾಟು ಲೈವ್ ಪ್ರದರ್ಶನಗೊಳ್ಳಲಿದೆ. ಕಾಲ ಭೈರವನ ತಂದೆ ಎಂಎಂ ಕೀರವಾಣಿ ಅವರು ಚಿತ್ರದ ಸಂಗೀತ ನಿರ್ದೇಶಕರಾಗಿದ್ದು, ಪ್ರದರ್ಶನದ ಸಮಯದಲ್ಲಿ ಅವರು ಸಹ ಇರುತ್ತಾರೆ.

'ಹಿಂದು ದೇವರ ಕಥೆಗಳನ್ನು ಓದಿ ಅನುಮಾನ ಬಂದವು..' ಧರ್ಮದ ಬಗ್ಗೆ ರಾಜಮೌಳಿ ಮಾತು!

ಆರ್‌ಆರ್‌ಆರ್‌ನ ನಾಟು ನಾಟು ಈಗ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಂಚಲನ ಸೃಷ್ಟಿಸಿದೆ. ದಕ್ಷಿಣ ಕೊರಿಯನ್ನರು ಸಹ ಅದಕ್ಕೆ ನೃತ್ಯ ಮಾಡುತ್ತಿದ್ದಾರೆ. ಈ ಹಾಡು ಜನವರಿಯಲ್ಲಿ ಅತ್ಯುತ್ತಮ ಮೂಲ ಗೀತೆಗಾಗಿ ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿಯನ್ನು ಗೆದ್ದುಕೊಂಡಿತು, ನಂತರ ವಿಮರ್ಶಕರ ಆಯ್ಕೆ ಪ್ರಶಸ್ತಿಗಳು ಮತ್ತು ಹಾಲಿವುಡ್ ಕ್ರಿಟಿಕ್ಸ್ ಅಸೋಸಿಯೇಷನ್ ಪ್ರಶಸ್ತಿಗಳನ್ನು ಕೂಡ ಬಾಚಿಕೊಂಡಿದೆ.