'ಗೋಲ್ಡನ್‌ ಗ್ಲೋಬ್‌ ಅವಾರ್ಡ್‌' ಸೇರಿದಂತೆ ಹಲವು ಪ್ರಶಸ್ತಿಗಳನ್ನು ಮುಡಿಲಿಗೇರಿಸಿಕೊಂಡಿರುವ ಆರ್​ಆರ್​ಆರ್​ ಚಿತ್ರದ ನಾಟು ನಾಟು ಹಾಡಿಗೆ ಪಾಕಿಸ್ತಾನದ ನಟಿ ಸ್ಟೆಪ್​ ಹಾಕಿದ್ದು, ಹೇಗಿದೆ ನೋಡಿ...  

ಎಸ್‌. ಎಸ್‌. ರಾಜಮೌಳಿಯವರ ಬ್ಲಾಕ್‌ಬಸ್ಟರ್ 'ಆರ್​ಆರ್​ಆರ್'​ ಚಿತ್ರದ 'ನಾಟು ನಾಟು' ಹಾಡಿಗೆ ಜಾಗತಿಕ ಪ್ರಶಸ್ತಿಯಾದ 'ಗೋಲ್ಡನ್‌ ಗ್ಲೋಬ್‌ ಅವಾರ್ಡ್‌' ಸಿಕ್ಕಿದೆ. ಈ ಚಿತ್ರ ವಿದೇಶದಲ್ಲಿಯೂ ಹವಾ ಸೃಷ್ಟಿಸಿದೆ. ಅದರಲ್ಲಿಯೂ ನಾಟು ನಾಟು ಹಾಡಂತೂ ವಿದೇಶಿಗರ ಬಾಯಲ್ಲೂ ಕೇಳಿಬರುತ್ತಿದೆ. ಬ್ರಿಟಿಷರ ಮತ್ತು ಭಾರತೀಯರ ನಡುವಿನ ಒಂದು ಹೋರಾಟವನ್ನು ಒಳಗೊಂಡಿರುವ ಈ ಚಿತ್ರದ ಕಥೆ, ಭಾರತದಲ್ಲಷ್ಟೇ ಅಲ್ಲದೆ ವಿದೇಶಗಳಲ್ಲಿಯೂ ಆರ್​ಆರ್​ಆರ್​ ಗಲ್ಲಾ ಪೆಟ್ಟಿಗೆಯಲ್ಲಿ ಭಾರಿ ಕಲೆಕ್ಷನ್ (Collection) ಮಾಡಿದೆ. ಮೆಗಾಸ್ಟಾರ್ ಚಿರಂಜೀವಿ ಅವರ ಪುತ್ರ ನಟ ರಾಮ್ ಚರಣ್ (Ram Charan) ಮತ್ತು ಜ್ಯೂನಿಯರ್ ಎನ್‌ಟಿಆರ್ (Junior NTR) ನಟಿಸಿರೋ ಈ ಚಿತ್ರದ ನಾಟು ನಾಟು ಹಾಡು ಜಗದ್ವಿಖ್ಯಾತಿ ಗಳಿಸುವುದು ಈಗ ಇತಿಹಾಸ. ಈಗಾಗಲೇ ಪ್ರತಿಷ್ಠಿತ ಗೋಲ್ಡನ್ ಗ್ಲೋಬ್, ಕ್ರಿಟಿಕ್ ಚಾಯ್ಸ್ ಅವಾರ್ಡ್, ಹಾಲಿವುಡ್ ಕ್ರಿಟಿಕ್ ಅಸೋಸಿಯೇಷನ್ ಅವಾರ್ಡ್ ಸೇರಿದಂತೆ ಇನ್ನೂ ಹಲವು ಪ್ರಶಸ್ತಿಗೆ ಭಾಜವಾಗಿರುವ ಈ ಹಾಡು ಆಸ್ಕರ್​ಗೂ ನಾಮಿನೇಟ್ ಆಗಿದ್ದು ಆಸ್ಕರ್ ಗೆಲ್ಲುವ ಭರವಸೆ ಮೂಡಿಸಿದೆ.

'ನಾಟು ನಾಟು' ಹಾಡಿನ ಗೀತರಚನೆಕಾರ ಚಂದ್ರಬೋಸ್ (Chandrabose) ಅವರು ಈ ಹಾಡಿನ ರಹಸ್ಯವನ್ನೂ ಹಂಚಿಕೊಂಡಿದ್ದರು. ಈ ಹಾಡಿನ ಶೇಕಡಾ 90ರಷ್ಟು ಭಾಗವನ್ನು ಬರೆಯಲು ಒಂದೇ ಒಂದು ಸಿಟ್ಟಿಂಗ್ ಬೇಕಾಯಿತು, ಆದರೆ ಉಳಿದದ್ದನ್ನು ಬರೆಯಲು ಸುಮಾರು 17 ತಿಂಗಳು ಬೇಕಾಯಿತು ಎಂದು ಹೇಳಿದ್ದರು. 'ಚಿತ್ರದ ಒಂದು ನಿರ್ದಿಷ್ಟ ದೃಶ್ಯಕ್ಕಾಗಿ ಒಂದು ಹಾಡನ್ನು ಬರೆಯುವಂತೆ ಚಿತ್ರದ ನಿರ್ದೇಶಕ ಎಸ್.ಎಸ್.ರಾಜಮೌಳಿ (SS Rajamouli) ಅವರು ನನ್ನನ್ನು ಕೇಳಿದರು. ನಾನು ಮೂರು ಹಾಡುಗಳನ್ನು ಬರೆದು ಅವರಿಗೆ ಪ್ರಸ್ತುತ ಪಡಿಸಿದೆ. ಅವರು ‘ನಾಟು ನಾಟು’ ಹಾಡನ್ನು ಎಲ್ಲದಕ್ಕಿಂತಲೂ ಹೆಚ್ಚು ಇಷ್ಟಪಟ್ಟರು' ಎಂದು ಚಂದ್ರಬೋಸ್ ತಿಳಿಸಿದ್ದರು.

ಗುಡ್ ಮಾರ್ನಿಂಗ್ ಅಮೆರಿಕದಲ್ಲಿ RRR: ಹುಚ್ಚೆದ್ದು ಸಂಭ್ರಮಿಸ್ತಿದ್ದಾರೆ ಫ್ಯಾನ್ಸ್!

ಈಗ ಯುವಜನರಂತೂ ಈ ಹಾಡಿಗೆ ಭರ್ಜರಿ ಸ್ಟೆಪ್​ ಹಾಕಿ ರೀಲ್ಸ್​ (Reels) ಮಾಡುತ್ತಿದ್ದಾರೆ. ಸಾಮಾನ್ಯ ಜನರು ಮಾತ್ರವಲ್ಲದೇ ನಟ-ನಟಿಯರೂ ರೀಲ್ಸ್​ ಮಾಡಿರುವ ಉದಾಹರಣೆಗಳಿವೆ. ಇದೀಗ ನೆರೆಯ ಪಾಕಿಸ್ತಾನದಲ್ಲಿಯೂ ನಾಟುನಾಟು ರಿಂಗಣಿಸಿದೆ. ಪಾಕಿಸ್ತಾನಿ ನಟಿ ಹನಿಯಾ ಅಮೀರ್ ಈ ಹಾಡಿಗೆ ಸ್ಟೆಪ್​ ಹಾಕಿದ್ದು ಅದು ಭಾರಿ ವೈರಲ್​ ಆಗಿದೆ. ಮದುವೆ ಸಮಾರಂಭವೊಂದರಲ್ಲಿ ನಟಿ ‘ನಾಟು ನಾಟು’ ಹಾಡಿಗೆ ಸಖತ್ತಾಗಿ ಡಾನ್ಸ್​ ಮಾಡಿ ವೇದಿಕೆಯ ಮೇಲೆ ಚಿಂದಿ ಉಡಾಯಿಸಿದ್ದಾರೆ. ರಾಜಮೌಳಿಯ ಆರ್​ಆರ್​ಆರ್ ಸಿನಿಮಾ ಅಮೆರಿಕ ಸೇರಿದಂತೆ ಹಲವು ದೇಶಗಳ ಸಿನಿ ಪ್ರಿಯರ ಮನಸ್ಸು ಗೆದ್ದಿದೆ. ಪಾಕಿಸ್ತಾನದಲ್ಲಿ (Pakistan) ಸಿನಿಮಾ ಅಧಿಕೃತವಾಗಿ ಬಿಡುಗಡೆ ಆಗದಿದ್ದರೂ ಸಹ ಸಿನಿಮಾದ ಹಾಡುಗಳು ಯೂಟ್ಯೂಬ್ ಮೂಲಕ ಪಾಕ್ ಸಿನಿಮಾ ಹಾಗೂ ಸಂಗೀತ ಪ್ರಿಯರನ್ನು ತಲುಪಿವೆ. ಹಾಗಾಗಿಯೂ ಅಲ್ಲಿಯೂ ಸಹ ನಾಟು-ನಾಟು ಫೀವರ್ ಜೋರಾಗಿಯೇ ಇದೆ.

ಚಿನ್ನದ ಮಿನುಗುವ ಶರಾರಾ ಸೆಟ್ ಧರಿಸಿದ ಹನಿಯಾ ‘ನಾಟು ನಾಟು’ ಟ್ರ್ಯಾಕ್ ಗೆ ಸ್ಟೆಪ್ಸ್​ ಹಾಕಿದ್ದಾರೆ. ಓರ್ವ ಯುವಕ ಮತ್ತು ನಟಿ ಇಬ್ಬರು ಅದ್ಭುತವಾಗಿ ಕಾಣುತ್ತಿದ್ದು, ‘ದಿ ವೆಡ್ಡಿಂಗ್ ಬ್ರಿಡ್ಜ್’ ತನ್ನ ಇನ್‌ಸ್ಟಾಗ್ರಾಮ್ ಪುಟದಲ್ಲಿ ಹಂಚಿಕೊಂಡಿದೆ. ಈ ವೀಡಿಯೋವನ್ನು ಒಂದು ದಿನದ ಹಿಂದೆಯಷ್ಟೆ ಹಂಚಿಕೊಂಡಿದ್ದು, ಇದುವರೆಗೂ ಐದು ಸಾವಿರಕ್ಕೂ ಅಧಿಕ ಲೈಕ್ಸ್​ ಬಂದಿವೆ. ನಾಟು-ನಾಟು ಹಾಡಿಗೆ ಸ್ಟೆಪ್ಸ್ ಹಾಕಿರುವ ನಟಿ ಹನಿಯಾ ಆಮಿರ್ (haniya Aamir) ಪಾಕಿಸ್ತಾನದ ಜನಪ್ರಿಯ ನಟಿಯರಲ್ಲೊಬ್ಬರು. 2016 ರಿಂದಲೂ ಪಾಕಿಸ್ತಾನದ ಸಿನಿಮಾ ಹಾಗೂ ಟಿವಿ ರಂಗಗಳಲ್ಲಿ ಸಕ್ರಿಯರಾಗಿದ್ದಾರೆ. ಈವರೆಗೆ ಆರು ಸಿನಿಮಾಗಳಲ್ಲಿ ನಟಿಸಿರುವ ಹನಿಯಾ ಆಮಿರ್, ಹತ್ತು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಕೆಲವು ಕಿರುಚಿತ್ರಗಳಲ್ಲಿಯೂ ನಟಿಸಿದ್ದಾರೆ.

ಉಕ್ರೇನ್‌ನಲ್ಲಿ ನಡೆದಿತ್ತು 'ನಾಟು ನಾಟು' ಚಿತ್ರೀಕರಣ, ಶ್ರಮವಿತ್ತು ಪೂರ್ಣ

Scroll to load tweet…