Mumbai Police: ಗಿರ್‌ಗಾಂವ್‌ನ ಹೋಟೆಲ್ ಒಂದರಲ್ಲಿ ನಡೆಯುತ್ತಿದ್ದ ಹೈ-ಪ್ರೊಫೈಲ್ ವೇಶ್ಯಾವಾಟಿಕೆ ಜಾಲವನ್ನು ಭೇದಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ, ಮರಾಠಿ ಹಾಗೂ ಬೆಂಗಾಲಿ ಚಿತ್ರರಂಗದ ಇಬ್ಬರು ನಟಿಯರನ್ನು ರಕ್ಷಿಸಿದ್ದಾರೆ.

ಮುಂಬೈ ಪೊಲೀಸರು ಗಿರ್‌ಗಾಂವ್‌ನ ಹೋಟೆಲ್ ಒಂದರಲ್ಲಿ ನಡೆಯುತ್ತಿದ್ದ ಹೈ-ಪ್ರೊಫೈಲ್ ವೇಶ್ಯಾವಾಟಿಕೆ ಜಾಲವನ್ನು ಭೇದಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ, ಮರಾಠಿ ಹಾಗೂ ಬೆಂಗಾಲಿ ಚಿತ್ರರಂಗದ ಇಬ್ಬರು ನಟಿಯರನ್ನು ರಕ್ಷಿಸಿದ್ದಾರೆ. ಪಿಂಪ್ ಆಗಿ ಕೆಲಸ ಮಾಡುತ್ತಿದ್ದ ಮೇಕಪ್ ಆರ್ಟಿಸ್ಟ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಪೂರ್ತಿ ಡೀಟೆಲ್ಸ್ ಇಲ್ಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮುಂಬೈನಿಂದ ಒಂದು ಶಾಕಿಂಗ್ ಸುದ್ದಿ ಹೊರಬಿದ್ದಿದೆ. ಮುಂಬೈ ಪೊಲೀಸರು ನಗರದ ಗಿರ್‌ಗಾಂವ್ ಪ್ರದೇಶದ ಹೋಟೆಲ್ ಒಂದರಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಜಾಲವನ್ನು ಬಯಲಿಗೆಳೆದಿದ್ದಾರೆ. ಪೊಲೀಸರು ನಡೆಸಿದ ಖಚಿತ ಕಾರ್ಯಾಚರಣೆಯಲ್ಲಿ ಇಬ್ಬರು ನಟಿಯರನ್ನು ರಕ್ಷಿಸಿದ್ದಾರೆ. ಈ ವೇಳೆ, ಪಿಂಪ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ವಶಕ್ಕೆ ಪಡೆದಿದ್ದಾರೆ.

ಬಂಧಿತ ಆರೋಪಿ ಮೇಕಪ್ ಆರ್ಟಿಸ್ಟ್ ಆಗಿ ಕೆಲಸ ಮಾಡುತ್ತಿದ್ದ. ಈತನಿಗೆ ಗ್ಲಾಮರ್ ಇಂಡಸ್ಟ್ರಿಯ ಹಲವರ ಜೊತೆ ಸಂಪರ್ಕವಿತ್ತು ಅಂತ ಪೊಲೀಸರು ಹೇಳಿದ್ದಾರೆ. ಈಗ ಪೊಲೀಸರು ಈತನ ಕಾಂಟ್ಯಾಕ್ಟ್‌ಗಳ ಬಗ್ಗೆ ಆಳವಾಗಿ ತನಿಖೆ ನಡೆಸುತ್ತಿದ್ದಾರೆ. ಈ ಜಾಲದ ಮೂಲಕ ಶೋಷಣೆಗೆ ಒಳಗಾದ ಬೇರೆ ಮಹಿಳೆಯರ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ.

ಮರಾಠಿ, ಬೆಂಗಾಲಿ ನಟಿಯರ ರಕ್ಷಣೆ

ವರದಿಗಳ ಪ್ರಕಾರ, ರಕ್ಷಿಸಲ್ಪಟ್ಟ ಇಬ್ಬರು ಮಹಿಳೆಯರಲ್ಲಿ ಒಬ್ಬರು ಮರಾಠಿ ಚಿತ್ರಗಳಲ್ಲಿ ಪ್ರಮುಖ ಪಾತ್ರ ಮಾಡಿರುವ ನಟಿ. ಇನ್ನೊಬ್ಬರು ಬೆಂಗಾಲಿ ಮತ್ತು ಹಿಂದಿ ಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಗೌಪ್ಯತೆ ಮತ್ತು ಸುರಕ್ಷತೆ ದೃಷ್ಟಿಯಿಂದ, ಪೊಲೀಸರು ಈ ಇಬ್ಬರು ನಟಿಯರ ಗುರುತನ್ನು ಬಹಿರಂಗಪಡಿಸಿಲ್ಲ. ಪೊಲೀಸರು ಈ ನಟಿಯರನ್ನು ಸಂತ್ರಸ್ತರು ಅಂತ ಪರಿಗಣಿಸಿ ರಕ್ಷಣೆ ಮಾಡಿದ್ದಾರೆ, ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಆರೋಪಿಗಳು ಈ ಮಹಿಳೆಯರನ್ನು ವೇಶ್ಯಾವಾಟಿಕೆಗೆ ಬಲವಂತವಾಗಿ ದೂಡುತ್ತಿದ್ದರು ಮತ್ತು ಗ್ರಾಹಕರಿಂದ ದೊಡ್ಡ ಮೊತ್ತದ ಹಣವನ್ನು ಪಡೆಯುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪೊಲೀಸರ ಅಧಿಕೃತ ಹೇಳಿಕೆ ಹೀಗಿದೆ

“ಮುಂಬೈ ಪೊಲೀಸರು ಗಿರ್‌ಗಾಂವ್‌ನ ಹೋಟೆಲ್ ಮೇಲೆ ದಾಳಿ ಮಾಡಿ, ವೇಶ್ಯಾವಾಟಿಕೆ ಅಡ್ಡೆಯನ್ನು ನಾಶಪಡಿಸಿದ್ದಾರೆ ಮತ್ತು ಇಬ್ಬರು ನಟಿಯರನ್ನು ರಕ್ಷಿಸಿದ್ದಾರೆ. ಅವರಲ್ಲಿ ಒಬ್ಬರು ಹಲವು ಚಿತ್ರಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವ ಖ್ಯಾತ ಮರಾಠಿ ನಟಿ. ಇನ್ನೊಬ್ಬರು ಬೆಂಗಾಲಿ ಮತ್ತು ಬಾಲಿವುಡ್ ಚಿತ್ರಗಳಲ್ಲಿ ಸಣ್ಣ ಪಾತ್ರಗಳಿಗೆ ಹೆಸರುವಾಸಿಯಾಗಿದ್ದಾರೆ. ಈ ಕಾರ್ಯಾಚರಣೆಯ ವೇಳೆ, ಒಬ್ಬ ದಲ್ಲಾಳಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿಯಲಾಗಿದೆ,” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಆಪರೇಷನ್ ಪ್ಲಾನ್ ಆಗಿದ್ದು ಹೀಗೆ

ಈ ಕಾರ್ಯಾಚರಣೆ ನಡೆಸುವ ಮೊದಲು, ಪೊಲೀಸರು ಒಬ್ಬ ನಕಲಿ ಗ್ರಾಹಕನನ್ನು ಕಳುಹಿಸಿದ್ದರು. ಅಲ್ಲಿ ನಡೆಯುತ್ತಿದ್ದ ಅಕ್ರಮ ಚಟುವಟಿಕೆಯನ್ನು ಖಚಿತಪಡಿಸಿಕೊಂಡ ನಂತರವೇ ದಾಳಿ ಮಾಡಲು ಬೇಕಾದ ಎಲ್ಲ ಸಿದ್ಧತೆ ಮಾಡಿಕೊಂಡಿದ್ದರು. ಮಾಹಿತಿ ಖಚಿತವಾದ ಕೂಡಲೇ, ಅಧಿಕಾರಿಗಳು ಸ್ಥಳಕ್ಕೆ ದಾಳಿ ಮಾಡಿ ಮಹಿಳೆಯರನ್ನು ರಕ್ಷಿಸಿದ್ದಾರೆ.