ಪ್ರಕಾಶ್ ಹೆಸರಿನ ಜೊತೆಗೇ ಮಿಲನ ಸೇರಿಕೊಂಡುಬಿಟ್ಟಿದೆ. ಅವರನ್ನು ಮಿಲನ ಪ್ರಕಾಶ್ ಎಂದೇ ಗುರುತಿಸಲಾಗುತ್ತದೆ. ಅದಕ್ಕೆ ಸರಿಯಾಗಿ ಅವರು ಹೆಚ್ಚಾಗಿ ಮಾಡಿರುವುದು ಒಂದುಗೂಡಿಸುವ ಸಿನಿಮಾಗಳೇ. ರಿಷಿ, ಮಿಲನ ಮುಂತಾದ ಸಿನಿಮಾಗಳೇ ಅದಕ್ಕೆ ಸಾಕ್ಷಿ. ಬೇರೆಯಾಗಿರುವ ಪ್ರೇಮಿಗಳನ್ನು, ದೂರವಾಗಿರುವ ಕುಟುಂಬಗಳನ್ನು ಒಂದು ಮಾಡುವುದು ಪುಣ್ಯದ ಕೆಲಸ ಅನ್ನುವ ಭಾವನೆ ತೆಲುಗು ಚಿತ್ರರಂಗದಲ್ಲಿ ಸ್ಥಾಯಿಯಾಗಿದೆ. ಅದು ಸಾರ್ವತ್ರಿಕ ಸದಾಶಯ ಆಗಿದ್ದರಿಂದ ನಾವದನ್ನು ಕಡೆಗಣಿಸಬೇಕಾಗಿಲ್ಲ.

ಚಿತ್ರ: ತಾರಕ್

ತಾರಾಗಣ: ದರ್ಶನ್, ಶ್ರುತಿ ಹರಿಹರನ್, ಶಾನ್ವಿ ಶ್ರೀವಾಸ್ತವ್, ದೇವರಾಜ್, ಕುರಿ ಪ್ರತಾಪ್, ಅವಿನಾಶ್, ಚಿತ್ರಾ ಶೆಣೈ

ನಿರ್ದೇಶನ: ಪ್ರಕಾಶ್

ನಿರ್ಮಾಣ: ಲಕ್ಷ್ಮಣ್ ದೃಷ್ಯಂತ್

ಸಂಗೀತ: ಅರ್ಜುನ್ ಜನ್ಯ

ಛಾಯಾಗ್ರಾಹಣ: ಕೃಷ್ಣ

ರೇಟಿಂಗ್:3 ಸ್ಟಾರ್ಸ್

ಪ್ರಕಾಶ್ ಹೆಸರಿನ ಜೊತೆಗೇ ಮಿಲನ ಸೇರಿಕೊಂಡುಬಿಟ್ಟಿದೆ. ಅವರನ್ನು ಮಿಲನ ಪ್ರಕಾಶ್ ಎಂದೇ ಗುರುತಿಸಲಾಗುತ್ತದೆ. ಅದಕ್ಕೆ ಸರಿಯಾಗಿ ಅವರು ಹೆಚ್ಚಾಗಿ ಮಾಡಿರುವುದು ಒಂದುಗೂಡಿಸುವ ಸಿನಿಮಾಗಳೇ. ರಿಷಿ, ಮಿಲನ ಮುಂತಾದ ಸಿನಿಮಾಗಳೇ ಅದಕ್ಕೆ ಸಾಕ್ಷಿ. ಬೇರೆಯಾಗಿರುವ ಪ್ರೇಮಿಗಳನ್ನು, ದೂರವಾಗಿರುವ ಕುಟುಂಬಗಳನ್ನು ಒಂದು ಮಾಡುವುದು ಪುಣ್ಯದ ಕೆಲಸ ಅನ್ನುವ ಭಾವನೆ ತೆಲುಗು ಚಿತ್ರರಂಗದಲ್ಲಿ ಸ್ಥಾಯಿಯಾಗಿದೆ. ಅದು ಸಾರ್ವತ್ರಿಕ ಸದಾಶಯ ಆಗಿದ್ದರಿಂದ ನಾವದನ್ನು ಕಡೆಗಣಿಸಬೇಕಾಗಿಲ್ಲ.

ವಿದೇಶದಲ್ಲಿ ನೆಲೆಸಿರುವ ಮೊಮ್ಮಗ, ಇಂಡಿಯಾದಲ್ಲಿ ಚಟ್ನಿಪುಡಿ ಮಾರುವ ತಾತ. ಅವರಿಬ್ಬರನ್ನು ಒಂದು ಮಾಡುವ ಸವಾಲು. ಅವರು ದೂರವಾಗಿರೋದಕ್ಕೆ ಒಂದು ಫ್ಲ್ಯಾಷ್ ಬ್ಯಾಕು. ಆರಂಭದಲ್ಲೇ ಒಂದು ಟ್ವಿಸ್ಟು. ಕೊನೆಯಲ್ಲಿ ಇನ್ನೊಂದು ಟ್ವಿಸ್ಟು, ನಡುವೆ ಒಂದಷ್ಟು ಪ್ರೇಮ, ವಿಶ್ವಾಸದ್ರೋಹ. ಇಷ್ಟನ್ನಿಟ್ಟುಕೊಂಡು ಮಿಲನ ಪ್ರಕಾಶ್ ಕತೆ ಹೇಳಲು ಹೊರಡುತ್ತಾರೆ. ಅವರಿಗೆ ತಮ್ಮ ಟಾಸ್ಕ್ ಏನೆಂದು ಗೊತ್ತಿದೆ. ಮೊಮ್ಮಗನನ್ನೂ ತಾತನನ್ನೂ ಒಂದಾಗಿಸುವುದನ್ನಷ್ಟೇ ಇಟ್ಟುಕೊಂಡರೆ ದರ್ಶನ್ ಸಿನಿಮಾ ಮಾಡುವುದು ಕಷ್ಟ ಅನ್ನುವುದು ಗೊತ್ತಿದೆ. ಹೀಗಾಗಿ ಇದರ ನಡುವೆ ಸಂಬಂ‘ಪಡದ, ಸಂಬಂ‘ ಕೆಡದ ಕೆಲವು ಘಟನೆಗಳನ್ನು ಅವರು ತಂದು, ಚಿತ್ರಕತೆಯನ್ನು ಆದಷ್ಟು ರೋಚಕವಾಗಿಸುವುದಕ್ಕೆ ನೋಡುತ್ತಾರೆ. ದೇಶ-ವಿದೇಶಗಳನ್ನು ಬೆಸೆಯುವುದು ಈಚೀಚಿನ ಟ್ರೆಂಡು. ಹೀಗಾಗಿ ಅ‘ರ್ ಸಿನಿಮಾ ಯುರೋಪಿನಲ್ಲಿ ಇನ್ನನ್ನರ್ಧ ಇಂಡಿಯಾದಲ್ಲಿ. ಯುರೋಪಿನಲ್ಲಿ ಸಿಗುವ ನಾಯಕಿಯ ವಿಚಿತ್ರ ಪಾತ್ರವೈ‘ವ, ಅಲ್ಲೇ ಹುಟ್ಟುವ ಪ್ರೇಮ, ಇಂಡಿಯಾದಲ್ಲಿ ಸಂಭವಿಸುವ ಸಂಬಂಧ- ಇವನ್ನಿಟ್ಟುಕೊಂಡು ಉತ್ತರಾರ್ಧದಲ್ಲಿ ಆಸಕ್ತಿ ಮೂಡಿಸುತ್ತಾ ಹೋಗುತ್ತಾರೆ ಪ್ರಕಾಶ್. ಹಾಗೆ ನೋಡಿದರೆ ಅವರು ಪಾತ್ರಪೋಷಣೆಗೆ ಅಂಥ ಮಹತ್ವ ಕೊಟ್ಟಂತಿಲ್ಲ. ತೆರೆಯ ಮೇಲೆ ಕಾಣಿಸುವ ಅವಿನಾಶ್ ಮತ್ತು ಬಳಗದ ಪೈಕಿ ಬಹುತೇಕರಿಗೆ ಕೆಲಸವೇ ಇಲ್ಲ. ಯಾವ ಪಾತ್ರಕ್ಕೂ ಗುರಿಯಾಗಲೀ ಉದ್ದೇಶವಾಗಲೀ ಇದ್ದಂತಿಲ್ಲ. ಅವಿನಾಶ್ ಪಾತ್ರ ಒಂದು ವಿಶ್ವಾಸದ್ರೋಹ ಮತ್ತು ಪಶ್ಚಾತ್ತಾಪದ ಪ್ರಸಂಗಕ್ಕೋಸ್ಕರ ಬರುತ್ತದೆ. ಅರವಿಂದ್ ರಾವ್ ಪಾತ್ರ ಒಂದು ಸಂಭಾಷಣೆಗೋಸ್ಕರ ಕಾಣಿಸಿಕೊಳ್ಳುತ್ತದೆ, ತಲೆತಗ್ಗಿಸಿ ನಿಂತು ಒಂದೇ ಒಂದು ಮಾತಾಡುವುದಕ್ಕೆ ಚಿತ್ರಾ ಶೆಣೈ ಇದ್ದಾರೆ. ಕುರಿ ಪ್ರತಾಪ್ ಪಾತ್ರವನ್ನು ಅನಗತ್ಯವಾಗಿ ತುರುಕಿದ್ದೂ ಅಲ್ಲದೇ, ಆ ಪಾತ್ರದ ಬಾಯಿಗೆ ಮಗನೇ ಉಚ್ಚೆ ಹೊಯ್ಯುವಂತೆ ಮಾಡುವ ಚಿಲ್ಲರೆ ತಮಾಷೆಯನ್ನೂ ಪ್ರಕಾಶ್ ತೋರಿಸುತ್ತಾರೆ.

ಮಧ್ಯಂತರದ ತನಕ ಸಿನಿಮಾ ನಿಧಾನವಾಗಿ ಸಾಗುತ್ತದೆ. ಮಹತ್ವದ ಘಟನೆಗಳಾಗಲೀ ಮುಂದೆ ಸಿನಿಮಾ ತಿರುವು ಪಡಕೊಳ್ಳುತ್ತದೆ ಎಂಬ ಸೂಚನೆಯಾಗಲೀ ಮಧ್ಯಂತರದಲ್ಲೂ ಸಿಗುವುದಿಲ್ಲ. ತಾನು ಸೃಷ್ಟಿಸಿದ ಪಾತ್ರಗಳನ್ನು ತನಗೆ ಬೇಕಾದಂತೆ ಕುಣಿಸುವ ಪ್ರಕಾಶ್, ಕತೆಯಲ್ಲಿರುವ ಸಂಕೀರ್ಣ ತೆಯನ್ನು ಕುಗ್ಗಿಸುತ್ತಾ ಹೋಗುತ್ತಾರೆ. ಇಬ್ಬರು ಹುಡುಗಿಯರ ಪೈಕಿ ಯಾರು ನಾಯಕನ ಕೈ ಹಿಡಿ ಯುತ್ತಾರೆ ಎಂಬ ಮಿಲಿಯನ್ ಡಾಲರ್ ಪ್ರಶ್ನೆಗೆ ಥಟ್ಟನೆ ಉತ್ತರ ಸಿಕ್ಕಿಯೇ ಬಿಡುತ್ತದೆ. ಹೀಗಾಗಿ ಯಾವ ಹಂತದಲ್ಲಿ ಕೂಡ ಚಿತ್ರ ಪ್ರೇಕ್ಷಕನ ಮನ ಸ್ಸನ್ನು ತೂಗುಯ್ಯಾಲೆಯಲ್ಲಿಟ್ಟು ತಮಾಷೆ ನೋಡುವುದಿಲ್ಲ.

ದರ್ಶನ್ ಅಭಿನಯದ ಬಗ್ಗೆ ಮೆಚ್ಚುಗೆ ಮೂಡಿಸುವ ಅನೇಕ ದೃಶ್ಯಗಳು ಸಿನಿಮಾದಲ್ಲಿವೆ. ಹೆತ್ತವರನ್ನು ಕಳಕೊಂಡ ಅನಾಥ ಮಗುವಾಗಿ, ಅದಕ್ಕೆ ಕಾರಣರಾದವರ ಮೇಲಿನ ಸಿಟ್ಟನ್ನು ತೋರಿಸುವ ಸಂದ‘ರ್ದ ಸಾತ್ವಿಕ ಸಿಟ್ಟು, ಕೊನೆಯ ದೃಶ್ಯದ ಭಾವುಕತೆ, ತಾತನ ಜೊತೆಗಿನ ಬಾಂಧವ್ಯ- ಇವುಗಳನ್ನೆಲ್ಲ ದರ್ಶನ್ ಅಪ್ಪಟ ಕಲಾವಿದನಂತೆ ನಿಭಾಯಿಸಿದ್ದಾರೆ. ಶಾನ್ವಿ ಶ್ರೀವಾಸ್ತವ್ ನಟನೆಯ ರೇಂಜ್ ಅಚ್ಚರಿಗೊಳಿಸುತ್ತದೆ. ಕೊನೆಯ ದೃಶ್ಯದ ಅವರ ಅಭಿನಯವೇ ಅವರ ಭಾವಜಗತ್ತು ಎಷ್ಟು ಸಮೃದ್ಧವಾಗಿದೆ ಎನ್ನುವುದನ್ನು ಹೇಳುತ್ತದೆ. ಶ್ರುತಿ ಹರಿಹರನ್ ನೋವು ನುಂಗಿ ನಗುವ ತ್ಯಾಗಮಯಿ ತರುಣಿಯಾಗಿ ಗಮನ ಸೆಳೆಯುತ್ತಾರೆ. ದೇವ ರಾಜ್ ಮತ್ತೊಮ್ಮೆ ಭಾವ ಲೋಕದಲ್ಲಿ ವಿಹರಿಸಿದ್ದಾರೆ.

ಜಯಂತ ಕಾಯ್ಕಿಣಿ ಬರೆದ ಹಾಡೊಂದು ನೆನಪು ಳಿಯುವಂತಿದೆ. ದರ್ಶನ್ ಸಿನಿಮಾಗಳಲ್ಲಿ ಕಾಣಸಿಗುವ ಅಬ್ಬರದ ಸಂಭಾಷಣೆ ಇಲ್ಲಿಲ್ಲ. ಕೌಟುಂಬಿಕ ಚೌಕಟ್ಟಿನ ಸಿನಿಮಾಗಳ ಸಾಲಿಗೆ ಸೇರುವ ಈ ಸಿನಿಮಾಕ್ಕೆ, ಪ್ರಕಾಶ್ ನಿರ್ದೇಶನದ ಅನೇಕ ಸಿನಿಮಾಗಳಿಗೆ ಇರು ವಂತೆ, ಸೀರಿಯಲ್ ಗುಣವಿದೆ. ಎಪಿಸೋಡಿಕ್ ಆಗಿರುವ ದೃಶ್ಯಗಳ ಸಮಗ್ರ ಕರಣ ಸಾಧ್ಯವಾಗಿಲ್ಲ. ಇಂಥ ಕಥಾವಸ್ತು ಗೆಲ್ಲವುದೇ ಅದ್ಭುತ ಚಿತ್ರಕತೆ ಯಿಂದ. ಇಲ್ಲಿ ಚಿತ್ರ ಕತೆಯೇ ತೆಳುವಾಗಿದೆ.

-ಜೋಗಿ, ಕನ್ನಡಪ್ರಭ