Asianet Suvarna News Asianet Suvarna News

-3+1 ಅಂದ್ರೆ ಚಿತ್ರ ನೋಡಿದ್ರೆ ಗೊತ್ತಾಗತ್ತೆ

ಹೆಸರು ‘-3+1’. ಇದೇ ವಾರ ತೆರೆಗೆ ಬರುತ್ತಿರುವ ಚಿತ್ರವಿದು. ಇದೊಂದು ಮಹಿಳಾ ಪ್ರಧಾನ ಚಿತ್ರ. 

Movie release: -3+1 directed by Sathyanarayan
Author
Bengaluru, First Published Oct 26, 2018, 10:44 AM IST

ಸಂಖ್ಯೆಗಳೇ ಚಿತ್ರದ ಟೈಟಲ್ ಆಗಿ ಕುತೂಹಲ ಮೂಡಿಸಿದ ಚಿತ್ರಗಳ ಪೈಕಿ 6-5=2 ಕೂಡ ಒಂದು. ಹಾರರ್ ಜಾನರ್‌ನಲ್ಲಿ ಬಂದ ಈ ಚಿತ್ರ ಗಟ್ಟಿ ಕತೆ ಮತ್ತು ನಿರೂಪಣೆಯ ಮೂಲಕ ಗಮನ ಸೆಳೆದಿದ್ದು ನಿಮಗೂ ಗೊತ್ತು. ಅಲ್ಲಿಂದ ಸಂಖ್ಯೆಗಳೇ ಟೈಟಲ್ ಆಗುವ ಟ್ರೆಂಡ್‌ವೊಂದು ಸಣ್ಣಗೆ ಶುರುವಾಗಿದ್ದು ಹೊಸದಲ್ಲ. ಈಗ ಅಂಥದ್ದೇ ಮತ್ತೊಂದು ಚಿತ್ರ. ಅದರ ಹೆಸರು ‘-3+ 1’. ಇದೇ ವಾರ ತೆರೆಗೆ ಬರುತ್ತಿರುವ ಚಿತ್ರವಿದು. 

ಎನ್. ಸತ್ಯನಾರಾಯಣ್ ನಿರ್ಮಾಣದಲ್ಲಿ ರಮೇಶ್ ಯಾದವ್ ನಿರ್ದೇಶಿಸಿ, ತೆರೆಗೆ ತರುತ್ತಿದ್ದಾರೆ. ‘ತಿಥಿ’ ಚಿತ್ರ ಖ್ಯಾತಿಯ ಅಭಿಷೇಕ್ ಹಾಗೂ ಸೆಂಚುರಿ ಗೌಡ ಸೇರಿದಂತೆ ರಮೇಶ್ ಯಾದವ್, ಡಕನಾಚಾರಿ, ಕಾಂಚನಾ ಅಲಿಯಾಸ್ ಸಸ್ಯಾ,
ರಾಮಕೃಷ್ಣ, ಪದ್ಮಾ ವಾಸಂತಿ ಚಿತ್ರದ ತಾರಾಗಣದಲ್ಲಿದ್ದಾರೆ. ಎ.ಟಿ. ರವೀಶ್ ಸಂಗೀತ, ಶೇಖರ್ ಛಾಯಾಗ್ರಹಣ ಚಿತ್ರಕ್ಕಿದೆ. ರಮೇಶ್ ಯಾದವ್ ಗೀತ ಸಾಹಿತ್ಯಕ್ಕೆ ಅನುರಾಧ ಭಟ್, ಸಂತೋಷ್ ವೆಂಕಿ ಹಾಗೂ ಶಶಾಂಕ್ ಶೇಷಗಿರಿ ಧ್ವನಿ ನೀಡಿದ್ದಾರೆ. 

‘ಪ್ರತಿಯೊಬ್ಬರಲ್ಲೂ ಕೆಟ್ಟ ಮತ್ತು ಒಳ್ಳೆಯ ಎರಡೂ ಗುಣಗಳಿರುತ್ತವೆ. ಇಲ್ಲೂ ಅಂಥದ್ದೇ ಎರಡು ಗುಣಗಳಿರುವ ಮೂವರು ನಾಯಕರು. ಆ ಮೂವರಿಗೂ ಒಂದು ಹುಡುಗಿ ಮೇಲೆ ಕಣ್ಣು. ಆಕೆಯನ್ನು ಪಡೆಯಲು ಅವರು ನಡೆಸುವ ಪ್ರಯತ್ನ ವಿಫಲವಾಗುತ್ತದೆ. ಆಗ ಅವರೊಳಗೆ ಕೆಟ್ಟ ಆಲೋಚನೆಗಳು ಶುರುವಾಗುತ್ತವೆ. ಆನಂತರ ಸಮಾಜದಲ್ಲಿ ಅವರು ಕೆಟ್ಟ ವ್ಯಕ್ತಿಗಳಾಗುತ್ತಾರೆ. ಅಷ್ಟಾಗಿಯೂ ಅವರೊಳಗೆ ಒಳ್ಳೆಯ ಗುಣವಿರುತ್ತದೆ. ಅದು ಅವರನ್ನು ಎಚ್ಚರಿಸುತ್ತದೆ. ಆ ಮೂಲಕ ಒಳ್ಳೆಯವರಾಗಲು ಪ್ರಯತ್ನಿಸುತ್ತಾರೆ. ಹಾಗಾದ್ರೆ ಅವರೊಳಗಿರುವ ಒಳ್ಳೆಯ ಗುಣ ಯಾವುದು ಎನ್ನುವುದು ಚಿತ್ರದ ಕಥಾ ಹಂದರ’ಎನ್ನುತ್ತಾರೆ ನಿರ್ದೇಶಕ ರಮೇಶ್ ಯಾದವ್. ‘ಟೈಟಲ್‌ಗೂ ಕತೆಗೂ ಲಿಂಕ್ ಏನು, ಅದರ ಅರ್ಥ ಹೇಗೆ ಎನ್ನುವುದು ಚಿತ್ರ ನೋಡಿದರೆ ಗೊತ್ತಾಗುತ್ತದೆ’ ಎನ್ನುತ್ತಾರೆ ಅವರು.

ಕಲಾವಿದರ ಪೈಕಿ ಕಾಂಚನಾ ಹೊಸ ಪ್ರತಿಭೆ. ಬೆಳ್ಳಿತೆರೆಗೆ ಪ್ರವೇಶಕ್ಕೆ ಮೂಲ ಹೆಸರನ್ನು ಸಸ್ಯಾ ಎಂಬುದಾಗಿ ಬದಲಾಯಿಸಿಕೊಂಡಿದ್ದಾರೆ. ಚಿನ್ನಾಭರಣ ವ್ಯಾಪಾರಿ ಆಗಿರುವ ಸತ್ಯನಾರಾಯಣ್ ಆಚಾರ್ ಅವರಿಗೆ ಮೊದಲ ಬಾರಿ ಚಿತ್ರ ನಿರ್ಮಾಣ ಮಾಡಿದ ಅನುಭವ.ಒಂದೊಳ್ಳೆ ಕತೆ ಸಿಕ್ಕಿದ್ದ ಕಾರಣಕ್ಕೆ ನಿರ್ಮಾಣಕ್ಕೆ ಬಂಡವಾಳ ಹೂಡಬೇಕಾಗಿ ಬಂತು. ಬಹು ದಿನದ ಆಸೆಯೊಂದು ಹೀಗೆ ಈಡೇರಿತು. ಅಂತಿಮವಾಗಿ ಚಿತ್ರದ ಬಗೆಗಿನ ಕುತೂಹಲ ಪ್ರೇಕ್ಷಕರ ಮೇಲಿದೆ ಎನ್ನುತ್ತಾರೆ ನಿರ್ಮಾಪಕ ಸತ್ಯನಾರಾಯಣ್.

Follow Us:
Download App:
  • android
  • ios