ಶಿಲ್ಪಿ ರಾಜ್‌ ಖಾಸಗಿ ವಿಡಿಯೋ ಲೀಕ್ ಆಗಿ ಭಾರಿ ಸುದ್ದಿಯಾಗಿದ್ದರು. ಭೋಜ್‌ಪುರಿ ಹಾಡು ಹಾಡುವ ಶಿಲ್ಪಿ ರಾಜ್ ವೈರಲ್‌ ವಿಡಿಯೋದಲ್ಲಿರೋದು ನಾನಲ್ಲ ಎಂದ ಶಿಲ್ಪಿ

ನವದೆಹಲಿ: ಕಳೆದ ಹಲವು ದಿನಗಳಿಂದ ಖ್ಯಾತ ಭೋಜ್‌ಪುರಿ ಗಾಯಕಿ ಶಿಲ್ಪಿ ರಾಜ್ ತನ್ನ ಸೋರಿಕೆಯಾದ ಎಂಎಂಎಸ್‌ನಿಂದಾಗಿ ಸುದ್ದಿಯಲ್ಲಿದ್ದು, ಈ ಘಟನೆಯು ಇಡೀ ಭೋಜ್‌ಪುರಿ ಉದ್ಯಮವನ್ನು ಬೆಚ್ಚಿ ಬೀಳಿಸಿತ್ತು.

ಈ ಮಧ್ಯೆ ಶಿಲ್ಪಿ ರಾಜ್ ಅವರ ಮತ್ತೊಂದು ಮ್ಯೂಸಿಕ್ ವಿಡಿಯೋ 'ಕೊಕಾಕೋಲಾ ಪಿಲಾ ದೋ ಬಲಮ್' ಎಂಬ ಶೀರ್ಷಿಕೆಯೊಂದಿಗೆ ಹೊರ ಬಂದಿದೆ. ಕೆಲವೇ ಕ್ಷಣಗಳಲ್ಲಿ ಈ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಗಮನ ಸೆಳೆದಿದೆ. ಬಿಡುಗಡೆಯಾದ ಕೆಲವೇ ದಿನಗಳಲ್ಲಿ, ಹಾಡು ಈಗಾಗಲೇ 2 ಲಕ್ಷಕ್ಕಿಂತಲೂ ಹೆಚ್ಚು ಜನ ವೀಕ್ಷಿಸಿದ್ದು, ಮೂರು ಸಾವಿರಕ್ಕೂ ಹೆಚ್ಚು ಜನ ಲೈಕ್ ಮಾಡಿದ್ದಾರೆ. ಹಾಡು ಕೇಳಿದ ಶಿಲ್ಪಿಯ ಅಭಿಮಾನಿಗಳು ಆಕೆಯ ಮೇಲೆ ಪ್ರೀತಿಯ ಸುರಿಮಳೆಗೈದಿದ್ದಾರೆ.

View post on Instagram

ಮತ್ತೆ ಅತ್ಯುತ್ತಮ ಧ್ವನಿಯನ್ನು ಶಿಲ್ಪಿ ರಾಜ್ ನೀಡಿದ್ದಾರೆ. ಈ ಹಾಡಿಗೆ 10 ರಲ್ಲಿ 10 ಮಾರ್ಕ್ ನೀಡಬಹುದು. ಇವರು ಅತ್ಯುತ್ತಮ ಗಾಯಕರಲ್ಲಿ ಒಬ್ಬರು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು 'ಸೂಪರ್ ಹಾಡು, ಆಪ್ಕಿ ಆವಾಜ್ ಮೇ ಕುಚ್ ತೋ ಜಾದೂ ಹೈ ತಭಿ ತೋ ಲಖೋ ದಿಲೋ ಪರ್ ರಾಜ್ ಕರ್ತೀ ಹೈ (ನಿಮ್ಮ ಧ್ವನಿಯಲ್ಲೇನೋ ಜಾದೂ ಇದೆ ಇದು ಅನೇಕರ ಹೃದಯವನ್ನು ಸೊರೆಗೊಳ್ಳುತ್ತಿದೆ. ಶಿಲ್ಪಿ ನಿಮ್ಮ ಧ್ವನಿ ಮನಸ್ಸಿಗೆ ಮುದ ನೀಡುತ್ತದೆ' ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. 

ಬೆತ್ತಲೆ ವಿಡಿಯೋ ಲೀಕ್ ; 'ಮನೆಯಿಂದ ಹೊರಗೆ ಹೆಜ್ಜೆ ಇಡಲಿಲ್ಲ'

ಆದಾಗ್ಯೂ, ನೆಟ್ಟಿಗರ ಒಂದು ವಿಭಾಗವು ಅವರ ಸೋರಿಕೆಯಾದ ಖಾಸಗಿ ವೀಡಿಯೊ ವಿವಾದವನ್ನು ಮತ್ತೆ ನೆನಪಿಸಲು ಶುರು ಮಾಡಿದರು. ಶಿಲ್ಪಿ ರಾಜ್ ಕಾ ವೈರಲ್ ವೀಡಿಯೊ ಕೌನ್ ಕೌನ್ ಕೌನ್ ದೇಖಾ'(ಶಿಲ್ಪಿ ರಾಜ್ ಅವರ ವೈರಲ್ ವಿಡಿಯೋವನ್ನು ಯಾರೆಲ್ಲಾ ನೋಡಿದ್ದೀರಾ) 'ವೀಡಿಯೊ ವೈರಲ್ ಹೋನೆ ಕೆ ಬಾದ್ ಭಿ ಗನಾ ಕ್ಯೋ ಗತಿ ಹೈ' (ವಿಡಿಯೋ ವೈರಲ್ ಆದ ಮೇಲೆ ಹಾಡು ಏಕೆ ಹಾಡುತ್ತಿದ್ದೀರಿ) ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ.

Private Video Leaked: ಪೋರ್ನ್‌ ಸೈಟ್‌ನಲ್ಲಿ ತನ್ನದೇ ವಿಡಿಯೋ ಕಂಡು ದಂಗಾದ ಬೆಂಗಳೂರು ಟೆಕ್ಕಿ

ಗಮನಾರ್ಹವಾಗಿ ಕೆಲವು ದಿನಗಳ ಹಿಂದೆ, ಶಿಲ್ಪಿ ರಾಜ್ ಅವರ ಖಾಸಗಿ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಸುತ್ತು ಹೊಡೆದಿತ್ತು. ವಿಡಿಯೋದಲ್ಲಿ ಆಕೆ ಮತ್ತು ಆಕೆಯ ಗೆಳೆಯನನ್ನು ಆಕ್ಷೇಪಾರ್ಹವಾಗಿ ತೋರಿಸಲಾಗಿತ್ತು. ವಿಡಿಯೋ ಕ್ಲಿಪ್ ಇಂಟರ್‌ನೆಟ್‌ಗೆ ಬಂದ ತಕ್ಷಣ ವೈರಲ್ ಆಗಿತ್ತು. ಆದಾಗ್ಯೂ, ಸುದ್ದಿ ಪೋರ್ಟಲ್‌ನೊಂದಿಗಿನ ಸಂಭಾಷಣೆಯಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ ಗಾಯಕಿ ಸೋರಿಕೆಯಾದ ವೀಡಿಯೊ ಬಗ್ಗೆ ಪ್ರತಿಕ್ರಿಯಿಸಿದ್ದು,'ಈ ವೀಡಿಯೊವನ್ನು ಸ್ವಲ್ಪ ಗಮನವಿಟ್ಟು ನೋಡಿದ ಯಾರಾದರೂ ಈ ಕೊಳಕು ವೀಡಿಯೊ ನನ್ನದೋ ಅಲ್ಲವೋ ಎಂದು ಅರ್ಥಮಾಡಿಕೊಳ್ಳುತ್ತಾರೆ. ಜನರು ಈ ವೀಡಿಯೊವನ್ನು ವೀಕ್ಷಿಸಿ ನನ್ನನ್ನು ತುಂಬಾ ಕೆಟ್ಟದಾಗಿ ಕರೆದರು ಎಂದು ಅಳಲು ತೋಡಿಕೊಂಡರು.