ಸೆಲಬ್ರಿಟಿಗಳು ಯಶಸ್ಸಿನ ಹಂತ ತಲುಪಿದ ಮೇಲೆ ಹಿಂದಿನ ಕಹಿ ಅನುಭವಗಳನ್ನು ಹಂಚಿಕೊಳ್ಳೋದು ಸುಲಭ. ಅದನ್ನು ಆಗ ಜನರೂ ಕೂಡಾ ಸ್ವೀಕರಿಸುತ್ತಾರೆ. 

ಮಿಷನ್ ಮಂಗಲ್ ಸಕ್ಸಸ್ ನಲ್ಲಿರುವ ನಟಿ ವಿದ್ಯಾ ಬಾಲನ್ ಬಾಲಿವುಡ್ ನ ಪ್ರಬುದ್ಧ ನಟಿ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಇವರು ಇತ್ತೀಚಿಗೆ ಕ್ಯಾಸ್ಟಿಂಗ್ ಕೌಚ್ ಅನುಭವದ ಬಗ್ಗೆ ಮಾತನಾಡಿದ್ದರು. ಇದೀಗ ಸಿನಿ ಜರ್ನಿಯ ಶುರುವಿನಲ್ಲಿ ರಿಜೆಕ್ಟ್ ಆಗಿರುವುದರ ಬಗ್ಗೆ ಮಾತನಾಡಿದ್ದಾರೆ. 

ಕ್ಯಾಸ್ಟಿಂಗ್ ಕೌಚ್ ಬಗ್ಗೆ ಬಾಯ್ಬಿಟ್ಟ ‘ಕಹಾನಿ’ ಗರ್ಲ್!

ಖಾಸಗಿ ವಾಹಿನಿಯೊಂದಕ್ಕೆ ಕೊಟ್ಟ ಸಂದರ್ಶನದಲ್ಲಿ ಮಾತನಾಡುತ್ತಾ, ‘ ನಾನು ನೋಡುವುದಕ್ಕೆ ಚೆನ್ನಾಗಿಲ್ಲವೆಂದು ರೀಜನಲ್ ಸಿನಿಮಾವೊಂದಕ್ಕೆ ರಿಜೆಕ್ಟ್ ಆಗಿದ್ದು. ಇದು ನನ್ನ ಮನಸ್ಸನ್ನು ತುಂಬಾ ಕಲಕಿತು. ನಾನು ಚೆನ್ನಾಗಿಲ್ಲ, ನೋಡಲು ಕುರೂಪಿಯಾಗಿದ್ದೇನೆ ಎಂದು ಕನ್ನಡಿ ನೋಡುವುದನ್ನೇ ಬಿಟ್ಟಿದ್ದೆ’ ಎಂದು ಹೇಳಿಕೊಂಡಿದ್ದಾರೆ. 

ಅವಕಾಶಕ್ಕಾಗಿ ಮೂರು ವರ್ಷ ಅಲೆದಿದ್ದರು ‘ಕಹಾನಿ’ ನಟಿ!

ನಾನು ಇದ್ದ ಹಾಗೆ ನನ್ನನ್ನು ಒಪ್ಪಿಕೊಳ್ಳುವುದನ್ನು, ಪ್ರೀತಿಸುವುದನ್ನು ಕಲಿತಿದ್ದೇನೆ’ ಎಂದು ಹೇಳಿದ್ದಾರೆ.