Asianet Suvarna News Asianet Suvarna News

ಹರ್ಷಿಕಾ ಪೂಣಚ್ಚಗೆ ಪ್ರತಿಷ್ಟಿತ ವ್ಯಕ್ತಿಗಳಿಂದ ಬೆದರಿಕೆ

ಮೀಟೂ ವೀರರಿಗೆ ಏಟು ಕೊಟ್ಟಿದ್ದಕ್ಕೆ ಈ ಪಾಟಿ ಬೆದರಿಕೆ ಹಾಕುವುದೇ!?
- ಹೀಗೆ ಹರ್ಷಿಕಾ ಪೂಣಚ್ಚ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುತ್ತಾರೆ. ಈ ಕಾಟ ಹೀಗೆ ಮುಂದುವರೆದರೆ ಪೊಲೀಸ್ ಠಾಣೆಯ ಮೆಟ್ಟಿಲೇರುವುದಾಗಿಯೂ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ

MeToo  Harshika Poonacha life threat
Author
Bengaluru, First Published Oct 27, 2018, 9:52 AM IST
  • Facebook
  • Twitter
  • Whatsapp

ಹರ್ಷಿಕಾ ಇತ್ತೀಚೆಗೆ ಪಬ್ಲಿಸಿಟಿಗಾಗಿ ಮೀಟೂ ಬಳಸಿಕೊಳ್ಳುತ್ತಿರುವವರ ವಿರುದ್ಧ ಗರಂ ಆಗಿ ಹೇಳಿಕೆ ನೀಡಿದ್ದರು. ಆ್ಯಕ್ಟಿಸ್ಟ್ ಹೋರಾಟಗಾರ್ತಿಯರು ಪ್ರಸಿದ್ಧ ನಟ, ನಿರ್ಮಾಪಕರು, ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಬಿದ್ದಿದ್ದನ್ನು ನಾನು ನೋಡಿದ್ದೇನೆ ಎಂದು ಹೇಳಿದ್ದರು. ಇದೀಗ ಅವರು ಈ ಕಾರಣಕ್ಕೆ ತನಗೆ ಬೆದರಿಕೆ ಕರೆಗಳು ಬರುತ್ತಿವೆ, ಪ್ರತಿಷ್ಟಿತ ವ್ಯಕ್ತಿಗಳು ಬೆದರಿಸುತ್ತಿದ್ದರೆ ಎಂದು ಟ್ವೀಟರ್‌ನಲ್ಲಿ ಬರೆದುಕೊಂಡಿದ್ದಾರೆ.

ಪ್ರಾಣ ಬೆದರಿಕೆಯ ಹಿಂದಿರೋದು ಯಾರು?
ಹರ್ಷಿಕಾ ಪೂಣಚ್ಚರ ಈ ತಿರುಗೇಟು ಅವರಿಗೆ ಪ್ರಾಣ ಬೆದರಿಕೆಗಳು ಬರುವಂತೆ ಮಾಡಿವೆಯಂತೆ. ಇಷ್ಟಕ್ಕೂ ಈ ಕೊಡಗಿನ ಪುಟ್ಟಿಗೆ ಯಾರು ಪಟ್ಟಾಗಿ ಪ್ರಾಣ ಬೆದರಿಕೆ ಹಾಕುತ್ತಿರುವುದು? ‘ನಾನು ಸತ್ಯದ ಪರವಾಗಿ ಮಾತನಾಡಿದ್ದೇನೆ. ಇಲ್ಲಿ ಯಾರ ಪರವೋ, ವಿರುದ್ಧವೋ ಮಾತನಾಡಿಲ್ಲ. ಅನ್ಯಾಯ ಆದಾಗಲೇ ಪ್ರತಿಭಟನೆ ಮಾಡಬೇಕು. ಬಾಲಿವುಡ್ ಚಿತ್ರವನ್ನು ನಾನು ರಿಜೆಕ್ಟ್ ಮಾಡಿ ಬಂದಿದ್ದು ಅದೇ
ಕಾರಣಕ್ಕೆ. ಆದರೆ, ಈಗ ಏನಾಗುತ್ತಿದೆ? ಅವಕಾಶನೂ ಬೇಕು. ಅದನ್ನು ಪಡೆದುಕೊಳ್ಳುವುದಕ್ಕೆ ಹೊಂದಾಣಿಕೆಯನ್ನೂ ಮಾಡಿಕೊಳ್ಳುತ್ತೀರಿ.

ಈಗ ಮೀಟೂ ಅಂತೀರಿ. ಇದು ಸರಿನಾ? ಅಂತ ನಾನು ಕೇಳುತ್ತಿರುವುದು. ಹೀಗೆ ವಾಯ್ಸ್ ಮಾಡಿದ ಮರು ದಿನದಿಂದಲೇ ಒಂದೇ ಸಮನೇ ಬೆದರಿಕೆಗಳು ಬರುತ್ತವೆ. ಮೀಟೂ ಅಭಿಯಾನದ ವಿಚಾರದಲ್ಲಿ ನೀವು ಮಾತನಾಡಬಾರದು ಎಂದು ನನ್ನ ಧ್ವನಿಯನ್ನು ತಡೆಯಲಿಕ್ಕೆ ಪ್ರಯತ್ನ ಮಾಡುತ್ತಿದ್ದಾರೆ. ದೂರು ದಾಖಲಿಸುತ್ತೇನೆ. ಅನ್‌ನೋನ್ ನಂಬರ್‌ಗಳಿಂದ ಕಾಲ್ ಬರುತ್ತಿವೆ.ಇದು ಹೀಗೆ ಮುಂದುವರೆದರೆ ನಾನು ಖಂಡಿತ ಪೊಲೀಸ್ ಸ್ಟೇಷನ್ ಮೆಟ್ಟಿಲೇರುತ್ತೇನೆ. ಕಾನೂನು ಮೂಲಕ ತಕ್ಕ ಪಾಠ ಕಲಿಸುತ್ತೇನೆ’ ಎಂಬುದು ಹರ್ಷಿಕಾ ಅವರ ಎಚ್ಚರಿಕೆ ಮಾತುಗಳು. 

Follow Us:
Download App:
  • android
  • ios