ಝೀ ಕನ್ನಡ ವಾಹಿನಿಯ ಸರಿಗಮಪ ಸೀಸನ್ 13 ರಲ್ಲಿ ಎರಡನೇ ಸ್ಥಾನ ಪಡೆದಿರುವ ದಿ ಮೋಸ್ಟ್ ವರ್ಸಟೈಲ್ ಧ್ವನಿ ಎಂದೇ ಫೇಮಸ್ ಆದ ಮೆಹಬೂಬ್ ಸಾಬ್ ಇದುವರೆಗೂ 26 ಸ್ಯಾಂಡಲ್‌ವುಡ್ ಸಿನಿಮಾಗಳಲ್ಲಿ ಹಾಡನ್ನು ಹಾಡಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಕಳೆದ ಸಂಚಿಕೆಯಲ್ಲಿ ಸರಿಗಮಪ ವೇದಿಕೆ ಮೇಲೆ ಮತ್ತೊಮ್ಮೆ ಆಗಮಿಸಿದ ಮೆಹಬೂಬ್ ಸಾಬ್ ಸಾಧನೆ ಕಂಡು ಅನುಶ್ರೀ, ರಾಜೇಶ್ ಕೃಷ್ಣನ್, ವಿಜಯ್ ಪ್ರಕಾಶ್ ಹಾಗೂ ಹಂಸಲೇಖ ಸಂತೋಷ ವ್ಯಕ್ತಪಡಿಸಿದರು.

ಮೆಹಬೂಬ್ ಸಾಬ್‌ಗೆ ಸಿನಿ ಜರ್ನಿಯಲ್ಲಿ ಬಿಗ್ ಹಿಟ್ ಕೊಟ್ಟಿದ್ದು ರಾಂಬೋ-2 ಚಿತ್ರದ ಮೊದಲ ಹಾಡು 'ಬಿಟ್ ಹೋಗ್ಬೇಡ ನನ್ನಾ.... '. ಸರಿಗಮಪ ವೇದಿಕೆಯಲ್ಲಿ ಭಾಗಿ ಆಗಿದ ಪ್ರತಿಯೊಬ್ಬರು ಪ್ರತಿಭಾವಂತರಾಗಿ ಸಿನಿಮಾದಲ್ಲಿ ಹಾಗೂ ಹಲವಾರು ಕಾರ್ಯಕ್ರಮದಲ್ಲಿ ಹಾಡು ಹಾಡುತ್ತಿದ್ದಾರೆ.
