ಐಶ್ವರ್ಯಾ ರೈಗೂ ತಟ್ಟಿದ #MeToo ಬಿಸಿ | ಐಶ್ವರ್ಯಾ ರೈ ಮೇಲೂ ನಡೆದಿತ್ತಾ ಲೈಂಗಿಕ ದೌರ್ಜನ್ಯ? | ಸಲ್ಮಾನ್ ಖಾನ್ ಬಗ್ಗೆ ಐಶ್ವರ್ಯಾ ಹೇಳೋದೇನು? 

ನವದೆಹಲಿ (ಅ. 15): ಬಾಲಿವುಡ್ ನಲ್ಲಿ #MeToo ಭಾರೀ ಸದ್ದು ಮಾಡುತ್ತಿದೆ. #MeToo ಬಿಸಿ ನಟಿ ಐಶ್ವರ್ಯಾ ರೈಗೂ ತಟ್ಟಿದೆ. ಕೆಲ ದಿನಗಳ ಹಿಂದೆ ಸಲ್ಮಾನ್ ಖಾನ್ ಐಶ್ವರ್ಯಾ ಬಗ್ಗೆ ಹೇಳಿರುವ ಹೇಳಿಕೆಗೂ, ಈಗ ಐಶ್ವರ್ಯಾ ಮಾಡಿರುವ ಟ್ವೀಟ್‌ಗೂ ಕಾಕತಾಳಿಯವಾಗಿದೆ. ಹಾಗಾಗಿ ಸಲ್ಮಾನ್‌ನಿಂದ ಐಶ್ವರ್ಯಾ ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದಾರಾ ಎಂಬ ಪ್ರಶ್ನೆ ಎದ್ದಿದೆ. 

Scroll to load tweet…

ನನಗೂ ಕೂಡಾ ಅವಮಾನ ಮಾಡಲಾಗಿತ್ತು. ಸಾಕಷ್ಟು ಬಾರಿ ಹೊಡೆತ ಕೂಡಾ ತಿಂದಿದೀನಿ. ಬಾಲಿವುಡ್ ನ ಖ್ಯಾತ ಚಾರಿಟಿ ಮ್ಯಾನ್ ಎಂದು ಕರೆಸಿಕೊಳ್ಳುವವರು ಮನುಷ್ಯತ್ವವನ್ನೇ ಕಳೆದುಕೊಂಡಿದ್ದಾರೆ ಎಂದು ಐಶ್ವರ್ಯಾ ಮಾಡಿರುವ ಟ್ವೀಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಾ ಇದೆ. 

ನಾನು ಹೊಡೆದಿದ್ರೆ ಐಶ್ವರ್ಯಾ ಬದುಕ್ತಿರ್ಲಿಲ್ಲ: ಸಲ್ಲು

ನಿಜವಾಗಿಯೂ ಐಶ್ವರ್ಯಾ ರೈ ಈ ರೀತಿ ಟ್ವೀಟ್ ಮಡಿದ್ದಾರಾ ಎಂದು ಪರಿಶೀಲಿಸಿದಾಗ, ಅವರ ಟ್ವಿಟರ್ ಖಾತೆಯಲ್ಲಿ ಈ ರೀತಿ ಅವರು ಬರೆದುಕೊಂಡಿಲ್ಲ. ಅವರ ಹೆಸರಿನಲ್ಲಿ ಸಾಕಷ್ಟು ಖಾತೆಗಳನ್ನು ಓಪನ್ ಮಾಡಲಾಗಿದ್ದು ಫೇಕ್ ಅಕೌಂಟ್ ನಿಂದ ಈ ರೀತಿಯಾಗಿ ಟ್ವೀಟ್ ಮಾಡಿರಬಹುದು ಎನ್ನಲಾಗಿದೆ.