2017-18 ನೇ ಸಾಲಿನ ಪಿಯುಸಿ ಫಲಿತಾಂಶ ಪ್ರಕಟವಾಗಿದೆ. ಎಂದಿನಂತೆ ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ ಸ್ಥಾನ ಪಡೆದಿದೆ. 

ಬೆಂಗಳೂರು (ಏ.30) : 2017-18 ನೇ ಸಾಲಿನ ಪಿಯುಸಿ ಫಲಿತಾಂಶ ಪ್ರಕಟವಾಗಿದೆ. ಕಳೆದ ಬಾರಿಗಿಂತ ಈ ವರ್ಷ ಫಲಿತಾಂಶದಲ್ಲಿ ಹೆಚ್ಚಳ ಕಂಡು ಬಂದಿದೆ. ಈ ಬಾರಿ ಒಟ್ಟು ಶೇ.59.56 ರಷ್ಟು ಫಲಿತಾಂಶ ಬಂದಿದೆ. 

ಶೖಕ್ಷಣಿಕ ಜಿಲ್ಲಾವಾರು ಫಲಿತಾಂಶ ನೋಡಿದರೆ, ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ ಹಾಗೂ ಕೊಡುಗು ಮೂರನೇ ಸ್ಥಾನ ಪಡೆದಿದೆ. ಈ ಬಾರಿ ಚಿಕ್ಕೋಡಿ ಕೊನೆಯ ಸ್ಥಾನ ಪಡೆದಿದೆ. 

ಎಂದಿನಂತೆ ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಶೇ.52.30 ಬಾಲಕರು ಉತ್ತೀರ್ಣರಾಗಿದ್ದರೆ, ಶೇ. 67.11 ಬಾಲಕಿಯರು ಉತ್ತೀರ್ಣರಾಗಿದ್ದಾರೆ.

ವಿಭಾಗವಾರು ಫಲಿತಾಂಶಗಳನ್ನು ಗಮನಿಸದರೆ, ಕಲಾ ವಿಭಾಗದಲ್ಲಿ ಶೇ. 45.13, ವಿಜ್ಞಾನ ವಿಭಾಗದಲ್ಲಿ ಶೇ.67.48, ಹಾಗೂ ವಾಣಿಜ್ಯ ವಿಭಾಗದಲ್ಲಿ ಶೇ. 63ರಷ್ಟು ಫಲಿತಾಂಶ ಬಂದಿದೆ. 

ಕಲಾ ವಿಭಾಗವಿಜ್ಞಾನ ವಿಭಾಗವಾಣಿಜ್ಯ ವಿಭಾಗ
45.1367.4863.64

ಕಲಾ ವಿಭಾಗದಲ್ಲಿ ಒಂದೇ ಕಾಲೇಜಿಗೆ ಮೂರು ಸ್ಥಾನ ಸಿಕ್ಕಿದೆ. ಬಳ್ಳಾರಿಯ ಕೊಟ್ಟೂರಿನ ಇಂದೂ ಪಿಯು ಕಾಲೇಜು ವಿದ್ಯಾರ್ಥಿ ಸ್ವಾತಿ ಎಸ್, ಕಲಾ ವಿಭಾಗದಲ್ಲಿ 595 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಇದೇ ಕಾಲೇಜಿನ ರಾಜೇಶ್ 593 ಅಂಕ ಗಳಿಸಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಇದೇ ಕಾಲೇಜಿನ ಕಾವ್ಯಾಂಜಲಿ 588 ಅಂಕ ಪಡೆದು ಮೂರನೇ ಸ್ಥಾನ ಪಡೆದಿದ್ದಾರೆ.

ಸ್ವಾತಿಇಂದು ಇಂಡಿಪೆಂಡೆಂಟ್ ಪಿಯು ಕಾಲೇಜು,
ಕೊಟ್ಟೂರು ಕೂಡ್ಲಿಗಿ, ಬಳ್ಳಾರಿ
595
ರಮೇಶ್ ಎಸ್ ವಿ593
ಗೊರವರ ಕಾವ್ಯಂಜಲಿ588

 ವಿಜ್ಞಾನ ವಿಭಾಗದಲ್ಲಿ ಬೆಂಗಳೂರಿನ ವಿವಿ ಸರ್ದಾರ್ ಪಟೇಲ್ ಕಾಲೇಜಿನ ವಿಜ್ಞಾನ ವಿದ್ಯಾರ್ಥಿನಿ ಕೃತಿ ಮುಕ್ತಗಿ 597 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಹಾಸನದ ಮೋಹನ್.ಎಸ್.ಎಲ್ ಮತ್ತು ದಕ್ಷಿಣ ಕನ್ನಡ ಅಂಕಿತ್ ಪಿ.ಗೆ 595 ಅಂಕಗಳು ಪಡೆದು ಎರಡನೇ ಸ್ಥಾನದಲ್ಲಿದ್ದಾರೆ. 

ಕೃತಿ ಮುತ್ತಗಿವಿವಿಎಸ್ ಸರ್ದಾರ್ ಪಟೇಲ್ ಕಾಲೇಜು, ಬೆಂಗಳೂರು597
ಮೋಹನ್ ಮಾಸ್ಟರ್ಸ್ ಪಿಯು ಕಾಲೇಜು, ಹಾಸನ595
ಅಂಕಿತಾಗೋವಿಂದದಾಸ ಪಿಯು ಕಾಲೇಜು ಮಂಗಳೂರು595

ವಾಣಿಜ್ಯ ವಿಭಾಗದಲ್ಲಿ ವರ್ಷಿಣಿ ಎಂ. ಭಟ್ 595 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. 

ವರ್ಷಿಣಿ ಎಂ ಭಟ್ವಿದ್ಯಾಮಂದಿರ ಪಿಯು ಕಾಲೇಜು, ಮಲ್ಲೆಶ್ವರಂ, ಬೆಂಗಳೂರು595
ಅಮೃತಾ ಎಸ್ ಆರ್ಎಎಸ್‌ಸಿ ಪಿಯು ಕಾಲೇಜು, ರಾಜಾಜಿನಗರ, ಬೆಂಗಳೂರು595
ಪೂರ್ವಿತಾ ಆರ್ಮೌಂಟ್ ಕಾರ್ಮೆಲ್ ಕಾಲೇಜು, ಬೆಂಗಳೂರು594

ಜಿಲ್ಲೆಫಲಿತಾಂಶ [%]
ದಕ್ಷಿಣ ಕನ್ನಡ91.49
ಉಡುಪಿ90.67
ಕೊಡಗು83.94
ಉತ್ತರ ಕನ್ನಡ76.75
ಶಿವಮೊಗ್ಗ75.77
ಚಾಮರಾಜ ನಗರ75.3
ಚಿಕ್ಕಮಗಳೂರು74.39
ಹಾಸನ73.87
ಬೆಂಗಳೂರು ದಕ್ಷಿಣ73.67
ಬಳ್ಳಾರಿ73.04
ಬೆಂಗಳೂರು ಉತ್ತರ71.68
ಬಾಗಲಕೋಟೆ70.49
ಬೆಂಗಳೂರು ಗ್ರಾಮಾಂತರ68.82
ಚಿಕ್ಕಬಳ್ಳಾಪುರ68.61
ಹಾವೇರಿ67.3
ಗದಗ66.83
ಮೈಸೂರು66.77
ಕೋಲಾರ66.51
ಮಂಡ್ಯ65.36
ರಾಮನಗರ64.64
ತುಮಕೂರು64.29
ಧಾರವಾಡ63.67
ದಾವಣಗೆರೆ63.29
ವಿಜಯಪುರ63.1
ಕೊಪ್ಪಳ63.04
ರಾಯಚೂರು56.22
ಚಿತ್ರದುರ್ಗ56.06
ಯಾದಗಿರಿ54.4
ಬೆಳಗಾವಿ54.28
ಕಲಬುರಗಿ53.61
ಬೀದರ್52.63
ಚಿಕ್ಕೋಡಿ52.2

ಜಿಲ್ಲಾವಾರು ಫಲಿತಾಂಶ:

ಮಾಧ್ಯಮವಾರು ಫಲಿತಾಂಶ:

 ಹಾಜರಾದವರು ತೇರ್ಗಡೆಯಾದವರುಶೇ. ವಾರು ಫಲಿತಾಂಶ
ಕನ್ನಡ30524815708151.46
ಇಂಗ್ಲೀಷ್38046525134066.06