ಕಲರ್ಸ್ ಸೂಪರ್ ನಲ್ಲಿ ಪ್ರಸಾರವಾಗುವ 'ಮಾಂಗಲ್ಯಂ ತಂತುನಾನೇನ' ಧಾರಾವಾಹಿಯ ಮುದ್ದು ಮುಖದ ನಟ ತೇಜು ಅಲಿಯಾಸ್ ಚಂದನ್. ಹೌದು! ಸಂಜೆ ಆದ್ರೆ ಸಾಕು ಟಿವಿ ಮುಂದೆ ಕೂತು ಮಿಸ್ ಮಾಡದೇ ಧಾರಾವಾಹಿ ನೋಡುತ್ತಾರೆ ಅಂದ್ಮೇಲೆ ಈ ಲವರ್ ಬಾಯ್‌ಗೆ ಸಿಕ್ಕಾಪಟ್ಟೆ ಹುಡುಗಿಯರು ಫ್ಯಾನ್ಸ್‌ ಇದ್ದಾರೆ ಅಂತಾನೇ ಅರ್ಥ ಅಲ್ವೇ?

ಇನೋಸೆಂಟ್ ಚಂದನ್‌ ಬಗ್ಗೆ ಫೇಸ್ ಬುಕ್‌ ಖಾತೆಯ ಮೂಲಕ ಸಾಕಷ್ಟು ಆರೋಪಗಳು ಕೇಳಿ ಬರುತ್ತಿದೆ. ಚಂದನ್ ಹೆಸರಿನಲ್ಲಿ ಫ್ಯಾನ್ ಒಬ್ಬ ನಕಲಿ ಖಾತೆ ತೆಗೆದು ಜನರಿಗೆ ಫ್ರೆಂಡ್‌ ರಿಕ್ವೆಸ್ಟ್ ಕಳುಹಿಸಿ ಆನಂತರ ಭೇಟಿ ಮಾಡುವುದಾಗಿ, ಹಣ ಕೊಡುವುದಾಗಿ ಹೇಳಿ ಮೋಸ ಮಾಡಿರುವ ಆರೋಪಗಳು ಕೇಳಿ ಬರುತ್ತಿದೆ. ಈ ಬಗ್ಗೆ ಸ್ವತಃ ಚಂದನ್‌ ತನ್ನ ಅಫಿಶಿಯಲ್ ಖಾತೆಯಿಂದ ಸ್ಪಷ್ಟನೆ ನೀಡಿದ್ದಾರೆ.

'ನನ್ನ ಹೆಸರಿನಲ್ಲಿ ಹಲವಾರು ನಕಲಿ ಖಾತೆಗಳಿವೆ. ಅವುಗಳಿಂದ ಜನರ ಒಳಿತಿಗೆ, ಸಹಾಯಕ್ಕಾಗಿ ಹಣ ಕಳಿಸಿಕೊಡಿ ಎಂದು personal message ಬಂದರೆ, ನಿಮ್ಮನ್ನು ಭೇಟಿಯಾಗುತ್ತೇನೆ ನಂಬರ್ ಕೊಡಿ ಎಂದು ಕೇಳಿದರೆ ಅದನ್ನು ನಂಬದಿರಿ. ಸಾಕಷ್ಟು ಜನ ಹಣ ಕಳೆದುಕೊಂಡಿರುವುದು, ಮೋಸ ಹೋಗಿರುವುದು ನನ್ನ ಗಮನಕ್ಕೆ ಬಂದಿದೆ. Facebook ನಲ್ಲಿ ಕೇವಲ official page ಮಾತ್ರ ಇದ್ದು ಇನ್ಯಾವುದೇ ಖಾತೆಗಳಿಲ್ಲ. Instagramನಲ್ಲಿ @iam___rk ಮಾತ್ರ ಖಾಸಗಿ ಖಾತೆ.' ಎಂದು ವಿಡಿಯೋ ಮೂಲಕ ಮನವಿ ಮಾಡಿಕೊಂಡಿದ್ದಾರೆ.