ರೆಬೆಲ್ ಸ್ಟಾರ್ ಅಂಬರೀಶ್ ಹಾಗೂ ಸುಮಲತಾರನ್ನು ತಂದೆ-ತಾಯಿಯಂತೆ ಭಾವಿಸುವವರು ಯಶ್ ಹಾಗೂ ರಾಧಿಕಾ ಪಂಡಿತ್. ಅಂಬಿ ಅಗಲಿದ ನಂತರ ಚುನಾವಣೆಯಲ್ಲಿ ಸ್ಪರ್ಧಿಸಿದ ಸುಮಲತಾಳಿಗೆ ಬೆನ್ನೆಲುಬಾಗಿ ನಿಂತವರು ಹಿರಿಯ ಪುತ್ರ ದರ್ಶನ್ ಹಾಗೂ ಯಶ್. ಇನ್ನು ಯಶ್ ಪುತ್ರಿ ಐರಾ ಹುಟ್ಟುವ ಮೊದಲೇ ಅಂಬಿ ವಿಶೇಷ ಶೈಲಿಯಲ್ಲಿ ತೊಟ್ಟಿಲನ್ನು ಗಿಫ್ಟ್‌ ಆಗಿ ನೀಡಲು ಯಾರಿಗೂ ಹೇಳದ ಹಾಗೆ ಗುಪ್ತವಾಗಿ ರೆಡಿ ಮಾಡಿಸಿದ್ದರು.

ಯಶ್-ರಾಧಿಕಾ ಮಗಳ ನಾಮಕರಣ ಹೇಗಿತ್ತು? ಚಿತ್ರಲೋಕ

ಜೂನ್ 24 ರಂದು ಅಂಬಿ 7 ನೇ ತಿಂಗಳ ಪುಣ್ಯ ತಿಥಿ ಇದ್ದು ಪೂಜೆ ಮಾಡಲು ಸಮಾಧಿಯ ಬಳಿ ಆಗಮಿಸಿದ ಸುಮಲತಾರನ್ನು ಮಾಧ್ಯಮದವರು ಕೆಲವೊಂದು ಪ್ರಶ್ನೆಗಳನ್ನು ಕೇಳಿದರು. ಆ ವೇಳೆ ಯಶ್ ಮಗಳ ಬಗ್ಗೆಯೂ ಕೇಳಿದಾಗ 'ಯಶ್ ಪುತ್ರಿ ನನಗೂ ಮೊಮ್ಮಗಳೇ, ಚುನಾವಣೆಯಲ್ಲಿ ಕೆಲವೊಂದು ಕೆಲಸಗಳಿಂದ ಬ್ಯುಸಿ ಇದ್ದ ಕಾರಣ ಭೇಟಿ ಮಾಡಲು ಆಗಿಲ್ಲ. ಹಾಗಾಗಿ ಒಂದು ಒಳ್ಳೆ ದಿನ ನೋಡಿ ಯಶ್ ಮಗಳನ್ನು ನೋಡುತ್ತೇನೆ' ಎಂದಿದ್ದಾರೆ.

ಇನ್ನು ಬೆಂಗಳೂರಿನ ತಾಜ್ ವೆಸ್ಟ್‌ ಎಂಡ್‌ನಲ್ಲಿ ಮಗಳಿಗೆ ‘ಐರಾ’ ಎಂದು ವಿಭಿನ್ನ ಹೆಸರಿನಿಂದ ನಾಮಕರಣ ಮಾಡಿದ್ದು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಐರಾಳಿಗೆ ಫ್ಯಾನ್‌ ಪೇಜ್‌ಗಳು ಒಪನ್ ಆಗಿವೆ.