ಕೆಲದಿನಗಳ ಹಿಂದೆ ದರ್ಶನ್ ತಮ್ಮ ಪತ್ನಿ ಮೇಲೆ ಹಲ್ಲೆ ನಡೆಸಿದ್ದಾರೆ. ಪತ್ನಿ ವಿಜಯಲಕ್ಷ್ಮಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿತ್ತು.  ವಿಜಯಲಕ್ಷ್ಮೀ ಟ್ವೀಟ್ ಮಾಡುವ ಮೂಲಕ ಇವೆಲ್ಲಾ ಊಹಪೋಹಗಳೆಂದು ಸ್ಪಷ್ಟನೆ ನೀಡಿದ್ದರು. 

ಹೆಸರು ತೆಗೆದು ಇದ್ದಕ್ಕಿದ್ದಂತೆ ಪತಿ ದರ್ಶನ್ ಅನ್ ಫಾಲೋ ಮಾಡಿದ ವಿಜಯಲಕ್ಷ್ಮೀ

ದಿವಂಗತ ನಟ ಅಂಬರೀಶ್ 9 ನೇ ತಿಂಗಳ ಕಾರ್ಯದಲ್ಲಿ  ಭಾಗಿಯಾಗಿದ್ದ ಸುಮಲತಾರನ್ನು ದರ್ಶನ್ ಕುಟುಂಬದ ಬಗ್ಗೆ ಮಾಧ್ಯಮದವರು ಪ್ರಶ್ನಿಸಿದಾಗ, ‘ನಾನು ಯಾವ ವಿಡಿಯೋವನ್ನೂ ನೋಡಿಲ್ಲ. ಆಮೇಲೆ ಇಂತಹ ವಿಚಾರಗಳು ಬರುತ್ತಲೇ ಇರುತ್ತವೆ. ಇನ್ನು ಕೆಲವರು ಬೇಕು ಅಂತಲೇ ಸೃಷ್ಟಿ ಮಾಡುತ್ತಾರೆ. ಅದಕ್ಕೆ ಇಂತಹ ಸುದ್ದಿಗಳಿಗೆ ಪ್ರಾಮುಖ್ಯತೆ ನೀಡುವುದಿಲ್ಲ. ಗಂಡ- ಹೆಂಡತಿ ನಡುವೆ ಸುದ್ದಿ ಹಬ್ಬಿಸುವುದು, ಮನೆ ಮುರಿಯುವ ಕೆಲಸಗಳನ್ನು ಯಾರು ಮಾಡಬಾರದು ’ ಎಂದು ಹೇಳಿದ್ದಾರೆ.

ವಿಜಯಲಕ್ಷ್ಮಿ ಕೆಲ ದಿನಗಳ ಹಿಂದೆ ಟ್ಟಿಟರ್ ನಲ್ಲಿ ದರ್ಶನ್ ನನ್ನು ಅನ್ ಫಾಲೋ ಮಾಡಿ ಹೆಸರು ಬದಲಾಯಿಸಿಕೊಂಡಿದ್ದು ಇನ್ನಷ್ಟು ಅನುಮಾನಗಳಿಗೆ ಆಸ್ಪದವಾಗಿತ್ತು.

ಸ್ಯಾಂಡಲ್‌ವುಡ್ ನಟನೊಂದಿಗೆ ಹೆಸರು ಥಳಕು ಹಾಕಿಕೊಂಡಿರುವ ಪವಿತ್ರಾ ಗೌಡ ಯಾರು?