ಕನ್ನಡ ಚಿತ್ರರಂಗದ ಪ್ರಮುಖ ನಟಿ ಹಾಗೂ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ನಿನ್ನೆ (27 ಆಗಸ್ಟ್‌ 2019) ರಂದು 56 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಸ್ಯಾಂಡಲ್ ವುಡ್ ಗಣ್ಯರ ಜೊತೆ ಬರ್ತಡೇ ಸೆಲಬ್ರೇಶನ್ ಮಾಡಿದ್ದಾರೆ. ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ.

ದರ್ಶನ್ ಫ್ಯಾಮಿಲಿ ವಾರ್‌ಗೆ ಸುಮಲತಾ ಪ್ರತಿಕ್ರಿಯೆ ಇದು!

ಕೇಕ್ ಕಟಿಂಗ್ ವಿಡಿಯೋದಲ್ಲಿ ಸುಮಲತಾ ಮೊದಲು ಅಭಿಷೇಕ್ ಅಂಬರೀಶ್‌ಗೆ ತಿನ್ನಿಸಿ ಆನಂತರ ಹಿರಿಯ ಮಗ ದರ್ಶನ್‌ಗೆ ಕೇಕ್ ತಿನ್ನಿಸುತ್ತಾರೆ. ಈ ಸಂತೋಷ ಕ್ಷಣದ ವಿಡಿಯೋವನ್ನು ಅಲ್ಲಿದ್ದವರೊಬ್ಬರು ಸೆರೆ ಹಿಡಿದಿದ್ದಾರೆ. ದರ್ಶನ್ ಫ್ಯಾನ್ ಪೇಜ್‌ ಇದನ್ನು ಶೇರ್ ಮಾಡಿಕೊಂಡಿದೆ. ಅಂಬರೀಷ್ ಇಲ್ಲದೇ ಆಚರಿಸಿಕೊಳ್ಳುತ್ತಿರುವ ಮೊದಲ ಹುಟ್ಟುಹಬ್ಬ ಇದಾಗಿದ್ದು ಮಂಡ್ಯದ ರೆಬೆಲ್ ಹೆಣ್ಣಿಗೆ ಭಗವಂತನ ಆಶೀರ್ವಾದವಿರಲಿ ಎಂದು ಎಲ್ಲರೂ ಶುಭ ಹಾರೈಸಿದ್ದಾರೆ.