ಮಜಾ ಟಾಕೀಸ್ ಖ್ಯಾತಿಯ ‘ರಾಣಿ’ ಕೊಟ್ರು ಗುಡ್‌ನ್ಯೂಸ್ | ಅವರ ಮನೆಗೆ ಬರಲಿದೆ ಪುಟಾಣಿ ಅತಿಥಿ | ಕಂದಮ್ಮನ ನಿರೀಕ್ಷೆಯಲ್ಲಿ ಶ್ವೇತಾ 

ನಟಿ, ನಿರೂಪಕಿ ಶ್ವೇತಾ ಚೆಂಗಪ್ಪ ಕಿರುತೆರೆ ವೀಕ್ಷಕರಿಗೆ ಚಿರಪರಿಚಿತರು. ಕಾದಂಬರಿ, ಅರುಂಧತಿ ಧಾರಾವಾಹಿ, ಯಾರಿಗುಂಟು ಯಾರಿಗಿಲ್ಲ ರಿಯಾಲಿಟಿ ಶೋ ಸೇರಿದಂತೆ ಸಾಕಷ್ಟು ಕಾರ್ಯಕ್ರಮಗಳ ಮೂಲಕ ಜನಪ್ರಿಯರಾಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಜಾ ಟಾಕೀಸ್ ರಾಣಿಯ ಮಸ್ತ್-ಮಸ್ತ್ ಫೋಟೋಸ್!

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ‘ಮಜಾ ಟಾಕೀಸ್’ ನಲ್ಲಿ ಸೃಜನ್ ಲೋಕೇಶ್ ‘ರಾಣಿ’ಯಾಗಿ ಸಿಕ್ಕಾಪಟ್ಟೆ ಫೇಮಸ್. ವೀಕೆಂಡ್ ಬಂತಂದ್ರೆ ಸಾಕು ಮಜಾ ಟಾಕೀಸ್ ನೋಡ್ಬೇಕು ಅನ್ನೋವಷ್ಟರ ಮಟ್ಟಿಗೆ ಹವಾ ಕ್ರಿಯೆಟ್ ಮಾಡಿದ್ದಾರೆ. 

ಕೆಲದಿನಗಳಿಂದ ಶ್ವೇತಾ ಚೆಂಗಪ್ಪ ಮಜಾ ಟಾಕೀಸ್ ನಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಯಾವ ರಿಯಾಲಿಟಿ ಶೋಗಳಲ್ಲೂ ಕಾಣಿಸುತ್ತಿಲ್ಲ. ಅರೇ! ಎಲ್ಲಿ ಹೋದ್ರು? ಏನಾಯ್ತು ಇವರಿಗೆ ಅಂದ್ರೊಂಡ್ರಾ? ಸರ್ಪ್ರೈಸ್ ಆಗಿ ಗುಡ್ ನ್ಯೂಸ್ ಕೊಟ್ಟಿದ್ದಾರೆ. 

ಶ್ವೇತಾ ಚೆಂಗಪ್ಪ ತಾಯಿಯಾಗುತ್ತಿದ್ದಾರೆ. ಬೇಬಿ ಬಂಪ್ ಫೋಟೋಶೂಟ್ ಮಾಡಿಸಿಕೊಂಡಿದ್ದು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. 

View post on Instagram