ಸಮಂತಾ ಪತಿ ರಾಜ್ ನಿಡಿಮೋರು ಜೊತೆ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಬಗ್ಗೆ 'ಮಾ ಇಂಟಿ ಬಂಗಾರಂ' ಚಿತ್ರದ ನಿರ್ದೇಶಕಿ ನಂದಿನಿ ರೆಡ್ಡಿ ಕೆಲವು ಇಂಟರೆಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಏನದು ಅಂತ ತಿಳಿಯಲು ಮುಂದೆ ಓದಿ.

ಸೌತ್ ಸಿನಿಮಾರಂಗದ ಫೇಮಸ್ ನಟಿ ಸಮಂತಾ ಸದ್ಯ ತಮ್ಮ ಹೊಸ ಸಿನಿಮಾ 'ಮಾ ಇಂಟಿ ಬಂಗಾರಂ' ಯಶಸ್ಸಿನ ಖುಷಿಯಲ್ಲಿದ್ದಾರೆ. ಕಾಮಿಡಿ, ಆ್ಯಕ್ಷನ್, ಥ್ರಿಲ್ ಎಲ್ಲವೂ ಇರೋ ಈ ಫ್ಯಾಮಿಲಿ ಎಂಟರ್‌ಟೈನರ್ ಪ್ರೇಕ್ಷಕರಿಗೆ ಸಖತ್ ಇಷ್ಟ ಆಗಿದೆ. ಅಂದಹಾಗೆ, ಈ ಸಿನಿಮಾ ಸಮಂತಾಗೆ ಎರಡು ಕಾರಣಕ್ಕೆ ತುಂಬಾನೇ ಸ್ಪೆಷಲ್. ಒಂದು, ಈ ಚಿತ್ರವನ್ನು ಅವರ ಪತಿ ರಾಜ್ ನಿಡಿಮೋರು ನಿರ್ಮಿಸಿದ್ದಾರೆ. ಇನ್ನೊಂದು, ಈ ಜೋಡಿ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಹೌದು, ನೀವು ಓದಿದ್ದು ನಿಜ. ಇತ್ತೀಚೆಗೆ ನಡೆದ ಸಿನಿಮಾದ ಸಕ್ಸಸ್ ಮೀಟ್‌ನಲ್ಲಿ ಸಮಂತಾ ತಮ್ಮ ಬೇಬಿ ಬಂಪ್ ತೋರಿಸಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಸಂಭ್ರಮದಲ್ಲಿ ಅವರು ತಮ್ಮ ಪತಿ ಹಾಗೂ ಚಿತ್ರತಂಡದ ಸದಸ್ಯರಿಗೆ ಕೇಕ್ ತಿನ್ನಿಸಿದ್ದರು. ಇದಾದ ನಂತರ ನಡೆದ ಮತ್ತೊಂದು ಕಾರ್ಯಕ್ರಮದಲ್ಲಿ, ಸಮಂತಾ ತಾವು ಗರ್ಭಿಣಿ ಎನ್ನುವುದನ್ನು ಅಧಿಕೃತವಾಗಿ ಹೇಳಿಕೊಂಡರು. ಜೊತೆಗೆ, ಶೀಘ್ರದಲ್ಲೇ ಹೆರಿಗೆ ರಜೆ ತೆಗೆದುಕೊಳ್ಳುವುದಾಗಿಯೂ ತಿಳಿಸಿದರು. ಈಗ, 'ಮಾ ಇಂಟಿ ಬಂಗಾರಂ' ಚಿತ್ರದ ನಿರ್ದೇಶಕಿ ನಂದಿನಿ ರೆಡ್ಡಿ, ಸಮಂತಾ ಜೊತೆ ಕೆಲಸ ಮಾಡಿದ ಅನುಭವ ಹಾಗೂ ಅವರು ಮಾರ್ನಿಂಗ್ ಸಿಕ್‌ನೆಸ್ ನಡುವೆಯೂ ಸೆಟ್‌ನಲ್ಲಿ ಹೇಗೆ ಪೂರ್ತಿ ತೊಡಗಿಸಿಕೊಂಡಿದ್ದರು ಎಂಬುದರ ಬಗ್ಗೆ ಮಾತನಾಡಿದ್ದಾರೆ.

ಸಮಂತಾ ಬದಲಾವಣೆ ಬಗ್ಗೆ ನಂದಿನಿ ರೆಡ್ಡಿ ಹೇಳಿದ್ದೇನು?

ಹಿಂದೂಸ್ತಾನ್ ಟೈಮ್ಸ್ ಜೊತೆ ಮಾತನಾಡಿದ ಅವರು, "ಸಮಂತಾ ಒಬ್ಬ ವ್ಯಕ್ತಿಯಾಗಿ ನಿಜವಾಗಿಯೂ ತುಂಬಾ ಬೆಳೆದಿದ್ದಾರೆ, ತರಬೇತಿ ಪಡೆದಿದ್ದಾರೆ ಮತ್ತು ವಿಕಸನಗೊಂಡಿದ್ದಾರೆ. ಭಾವನಾತ್ಮಕವಾಗಿ, ಆಧ್ಯಾತ್ಮಿಕವಾಗಿ, ಶಕ್ತಿಯ ವಿಚಾರದಲ್ಲಿ ಹೀಗೆ ಹಲವು ರೀತಿಯಲ್ಲಿ ಅವರು ಸಂಪೂರ್ಣವಾಗಿ ಬೇರೆಯೇ ವ್ಯಕ್ತಿಯಾಗಿದ್ದಾರೆ. ಆದರೆ ಅಂದಿನಿಂದ ಇಂದಿನವರೆಗೂ ಅವರಲ್ಲಿ ಒಂದು ವಿಷಯ ಮಾತ್ರ ಬದಲಾಗಿಲ್ಲ. ಅದು, ತಾನು ಅಂದುಕೊಂಡಿದ್ದನ್ನು ಸಾಧಿಸುವ ಅವರ ಅದ್ಭುತ ದೃಢ ಸಂಕಲ್ಪ" ಎಂದು ಹೇಳಿದ್ದಾರೆ.

ಅವರ ಮಲ್ಟಿ-ಟಾಸ್ಕಿಂಗ್ ಕೌಶಲ್ಯದ ಬಗ್ಗೆ ಮಾತನಾಡಿದ ನಂದಿನಿ, "ಅವರು ಬೇರೆಯವರ ಮೇಲೆ ಮಾತ್ರವಲ್ಲ, ತಮ್ಮ ಮೇಲೆಯೇ ಹೆಚ್ಚು ಕಠಿಣವಾಗಿರುತ್ತಾರೆ. ಆ ಗುಣ ಬದಲಾಗಿಲ್ಲ. ಆದರೆ ಅವರಲ್ಲಿ ಈಗ ನಂಬಲಾಗದಷ್ಟು ಪ್ರಬುದ್ಧತೆ ಮತ್ತು ಬೆಳವಣಿಗೆ ಕಾಣಿಸುತ್ತಿದೆ, ವಿಶೇಷವಾಗಿ ಆಧ್ಯಾತ್ಮಿಕ ಬೆಳವಣಿಗೆ. ಇಂದು ಅವರು ಹೆಚ್ಚು ಶಾಂತ, ಬುದ್ಧಿವಂತೆ ಮತ್ತು ಎಲ್ಲದರಲ್ಲೂ ಸ್ಪಷ್ಟತೆ ಇರುವ ವ್ಯಕ್ತಿಯಾಗಿದ್ದಾರೆ. ಇನ್ನು ನಟನೆಯ ವಿಚಾರಕ್ಕೆ ಬಂದರೆ, ಅವರು ಅದ್ಭುತವಾಗಿ ಬೆಳೆದಿದ್ದಾರೆ; ಅದನ್ನು ನೀವು ತೆರೆಮೇಲೆ ನೋಡಬಹುದು. ಅವರು ಅನುಭವಿಸುತ್ತಿರುವ ಭಾವನೆಯನ್ನು ಪ್ರೇಕ್ಷಕರಿಗೂ ತಲುಪಿಸುವಂತೆ ಮಾಡುತ್ತಾರೆ" ಎಂದು ವಿವರಿಸಿದ್ದಾರೆ.

ವೈಯಕ್ತಿಕ ಜೀವನದ ಬಗ್ಗೆ

ಸಮಂತಾ ಮತ್ತು ಅವರ ಪತಿ ರಾಜ್, ಡಿಸೆಂಬರ್‌ನಲ್ಲಿ ತಮ್ಮ ಮೊದಲ ಮಗುವನ್ನು ಬರಮಾಡಿಕೊಳ್ಳಲಿದ್ದಾರೆ.