* ‘ಸಿದ್ಲಿಂಗು’ ಬಾಳಿಗೆ ಜೊತೆಯಾದ ‘ಸಾಹಿತ್ಯ’* ಲೂಸ್​ ಮಾದಗೆ ಸಿಕ್ಕ ‘ಜಿಂಕೆ ಮರಿ’* ಯೋಗಿ ಲವ್ಸ್​ ಸಾಹಿತ್ಯ* ಸಾಹಿತ್ಯಗೆ ‘ಪ್ರೀತ್ಸೆ ಪ್ರೀತ್ಸೆ’ ಎಂದ ಯೋಗಿ* ಮದುವೆಯ ‘ಅಂಬಾರಿ’ಯಲ್ಲಿ ಯೋಗಿ

ಬೆಂಗಳೂರು(ಅ. 31): ಸ್ಯಾಂಡಲ್‍ವುಡ್'ನ ಯಂಗ್ ಸ್ಟಾರ್ ಲೂಸ್ ಮಾದ ಖ್ಯಾತಿಯ ಯೋಗಿ ಮದುವೆಗೆ ಕ್ಷಣಗಣನೆ ಆರಂಭವಾಗಿದೆ. ಬಾಲ್ಯದ ಗೆಳತಿ ಸಾಹಿತ್ಯ ಅರಸ್ ಅವರೊಂದಿಗೆ ಇದೇ ನವೆಂಬರ್ 2ರಂದು ಹಸೆಮಣೆ ಏರಲಿದ್ದಾರೆ. ಯೋಗಿ ಮತ್ತು ಸಾಹಿತ್ಯ ಜೂನ್ 11ರಂದು ಸರಳವಾಗಿ ಉಂಗುರ ಬದಲಿಸಿಕೊಂಡು ಎಂಗೇಜ್ ಆಗಿದ್ದರು. ಈಗ ಮದುವೆಯ ಸಿದ್ದತೆಯೊಂದಿಗೆ ಹಲವು ಶಾಸ್ತ್ರಗಳು ನಡೆಯುತ್ತಿದೆ. ಇಂದು ಕೋಣನಕುಂಟೆಯಲ್ಲಿರುವ ಯೋಗಿ ಮನೆಯಲ್ಲಿಂದು ಚಪ್ಪರ ಪೂಜೆ, ಬಳೆ ಶಾಸ್ತ್ರ, ಅರಿಶಿನ ಕುಟ್ಟುವ ಶಾಸ್ತ್ರ, ಮಂಗಳ ಸ್ನಾನ, ಅಕ್ಕಿ ಹಸೆ ಶಾಸ್ರ್ರ ಅದ್ಧೂರಿಯಾಗಿ ನಡೆದಿದೆ. ಹಿರಿಯರ ಆಶಿರ್ವಾದದೊಂದಿಗೆ ಮಧು ಮಗನಂತೆ ಯೋಗಿ ವಿವಾಹ ಶಾಸ್ತ್ರಗಳಲ್ಲಿ ಮಿಂಚಿದ್ದಾರೆ.