ಈ ಸಿನಿಮಾ ಬಿಡುಗಡೆಯಾದ ನಾಲ್ಕನೇ ದಿನಕ್ಕೆ 1,710 ಕೋಟಿ ರೂ. ಕಲೆಕ್ಷನ್ ಮಾಡಿದೆ. ಚಿತ್ರಕ್ಕೆ IMDb 8.1 ರೇಟಿಂಗ್ ನೀಡಿದೆ. ಭಾರತದಲ್ಲಿ ಈ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ.
ನವದೆಹಲಿ: ಭಾರತದಲ್ಲಿ ಹಾಲಿವುಡ್ ಸಿನಿಮಾಗಳ ಕ್ರೇಜ್ ಎಷ್ಟಿದೆ ಅಂದ್ರೆ ಯಾವುದೇ ಹೊಸ ಸಿನಿಮಾ ಬಂದ್ರೂ ಮಲ್ಟಿಫ್ಲೆಕ್ಸ್‌ನಲ್ಲಿ ಜಾಗ ಮಾಡಿಕೊಡಲಾಗುತ್ತದೆ. ಹಾಗಾಗಿ ಹಾಲಿವುಡ್ ಸಿನಿಮಾಗಳು ಇಡೀ ವಿಶ್ವದಾದ್ಯಂತ ಮಾರುಕಟ್ಟೆಯನ್ನು ಹೊಂದಿವೆ. ಈ ಕಾರಣದಿಂದ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಸಾವಿರಾರು ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ದಾಖಲೆ ಬರೆಯುತ್ತವೆ. ಇಂದು ನಾವು ಹೇಳುತ್ತಿರುವ ಸಿನಿಮಾ ಬಿಡುಗಡೆಯಾದ ನಾಲ್ಕನೇ ದಿನಕ್ಕೆ 1,710 ಕೋಟಿ ರೂ. ಕಲೆಕ್ಷನ್ ಮಾಡಿದ್ದು, ಚಿತ್ರಕ್ಕೆ IMDb 8.1 ರೇಟಿಂಗ್ ನೀಡಿದೆ. ಭಾರತದಲ್ಲಿ ಈ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ.
ಹಾಲಿವುಡ್‌ನ ಹೌ ಟು ಟ್ರೈನ್ ಯುವರ್ ಡ್ರ್ಯಾಗನ್ ಸಿನಿಮಾಗೆ 8.1 ರೇಟಿಂಗ್ ಪಡೆದುಕೊಂಡು ಯಶಸ್ಸಿನತ್ತ ಮಹಾಹೆಜ್ಜೆಯನ್ನು ಇರಿಸಿದೆ. ಇದು 2010 ರ ಅನಿಮೇಟೆಡ್ ಚಲನಚಿತ್ರ ಹೌ ಟು ಟ್ರೈನ್ ಯುವರ್ ಡ್ರ್ಯಾಗನ್ ನ ರಿಮೇಕ್ ಆಗಿದೆ. ಭಾರತದ ಬಾಕ್ಸ್ ಆಫಿಸ್‌ನಲ್ಲಿಯೂ ಹೌ ಟು ಟ್ರೈನ್ ಯುವರ್ ಡ್ರ್ಯಾಗನ್ ಸಿನಿಮಾ ಉತ್ತಮ ಕಲೆಕ್ಷನ್ ಮಾಡುತ್ತಿದೆ.
ಕ್ರೆಸಿಡಾ ಕೋವೆಲ್ ಅವರ ಕಾದಂಬರಿ ಕಥೆಯನ್ನಾಧರಿಸಿದ ಹೌ ಟು ಟ್ರೈನ್ ಯುವರ್ ಡ್ರ್ಯಾಗನ್ ಸಿನಿಮಾವನ್ನು ಡ್ರೀಮ್‌ವರ್ಕ್ಸ್ ಅನಿಮೇಷನ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗಿದೆ. ಈ ಚಿತ್ರಕ್ಕೆ ಖ್ಯಾತ ನಿರ್ದೇಶಕ ಡೀನ್ ಡಿಬ್ಲೋಯಿಸ್ ಆಕ್ಷನ್ ಕಟ್ ಹೇಳಿದ್ದಾರೆ. 2003ರಲ್ಲಿ ಕ್ರೆಸಿಡಾ ಕೋವೆಲ್ ಅವರ ಕಾದಂಬರಿ ಬಿಡುಗಡೆಯಾಗಿತ್ತು. ಇದೇ ಕಾದಂಬರಿಯನ್ನಾಧರಿಸಿದ ಹೌ ಟು ಟ್ರೈನ್ ಯುವರ್ ಡ್ರ್ಯಾಗನ್ ಸಿನಿಮಾ ಜೂನ್ 13ರಂದು ವಿಶ್ವದಾದ್ಯಂತ ಬಿಡುಗಡೆಯಾಗಿತ್ತು. ಬಿಡುಗಡೆಯಾದ ಮೊದಲ ದಿನದಿಂದಲೇ ಸಿನಿಮಾ ಬಾಕ್ಸ್ ಆಫಿಸ್‌ನಲ್ಲಿ ಸದ್ದು ಮಾಡಲಾರಂಭಿಸಿದೆ.
ಭಾರತದಲ್ಲಿ 11.80 ಕೋಟಿ ರೂ. ಕಲೆಕ್ಷನ್
ಸಕ್ಕಾನಿಲ್ಕ್ ವರದಿ ಪ್ರಕಾರ, ಹೌ ಟು ಟ್ರೈನ್ ಯುವರ್ ಡ್ರ್ಯಾಗನ್ ಕೇವಲ 4 ದಿನಗಳಲ್ಲಿ ವಿಶ್ವಾದ್ಯಂತ 1710 ಕೋಟಿ ರೂ. ಗಳಿಸಿದೆ. ವಿದೇಶಗಳಲ್ಲಿ 985 ಕೋಟಿ ರೂಪಾಯಿ ಮತ್ತು ಭಾರತದಲ್ಲಿ 11.80 ಕೋಟಿ ರೂ. ಕಲೆಕ್ಷನ್ ಮಾಡಿದೆ ಎಂದು ಹೇಳಿದೆ. ಭಾರತದಲ್ಲಿ ಮೊದಲ ನಾಲ್ಕು ದಿನದ ಕಲೆಕ್ಷನ್ ಹೀಗಿದೆ.
ದಿನ 1 - 2.15 ಕೋಟಿ
ದಿನ 2 - 4 ಕೋಟಿ ರೂ.
ದಿನ 3 - 4.5 ಕೋಟಿ ರೂ.
ದಿನ 4 - 1.15 ಕೋಟಿ ರೂಪಾಯಿ
ಸಿನಿಮಾದ ಕಥೆ ಏನು?
16 ವರ್ಷದ ಹಿಕಪ್ ಎಂಬ ಬಾಲಕ ಮತ್ತು ಅಪಾಯಕಾರಿ ಡ್ರ್ಯಾಗನ್ ಸುತ್ತ ಚಿತ್ರದ ಕಥೆ ಸಾಗುತ್ತದೆ. ಹಿಕಪ್ ನೋಡಲು ದುರ್ಬಲವಾಗಿ ಕಾಣಿಸಿದರೂ ಮಾನಸಿಕವಾಗಿ ಸದೃಢನಾಗಿರುತ್ತಾನೆ. ಹಿಕಪ್ ತನ್ನ ಜಾಣ್ಮೆಯಿಂದ ಹೊಸ ಹೊಸ ತಂತ್ರಜ್ಞಾನಗಳನ್ನು ಆವಿಷ್ಕಾರ ಮಾಡುತ್ತಿರುತ್ತಾನೆ. ಒಮ್ಮೆ ಹಿಕಪ್ ವಾಸಿಸುವ ಗ್ರಾಮದ ಮೇಲೆ ಅಪಾಯಕಾರಿ ಡ್ರ್ಯಾಗನ್ ದಾಳಿ ಮಾಡುತ್ತದೆ. ಈ ವೇಳೆ ತನ್ನ ಜಾಣ್ಮೆಯಿಂದ ಡ್ರ್ಯಾಗನ್ ಗಾಯಗೊಳಿಸುತ್ತಾಳೆ. ನಂತರ ಹಿಕಪ್ ಮತ್ತು ಡ್ರ್ಯಾಗನ್ ನಡುವೆ ಅಗಾಧವಾದ ಸ್ನೇಹ ಬೆಳೆಯುತ್ತದೆ. ಮುಂದೆ ಸಿನಿಮಾ ರೋಚಕ ತಿರುವು ಪಡೆದುಕೊಳ್ಳಲು ಆರಂಭಿಸುತ್ತದೆ. ಇವರಿಬ್ಬರ ಸ್ನೇಹ ಹೇಗೆ ಮುಂದುವರಿಯುತ್ತೆ ಎಂಬುದನ್ನು ಸಿನಿಮಾ ನೋಡಿ ತಿಳಿದುಕೊಳ್ಳಬೇಕು.
ಚಿತ್ರದಲ್ಲಿ ಮೇಸನ್ ಥೇಮ್ಸ್ ಹಿಕಪ್ ಪಾತ್ರವನ್ನು ನಿರ್ವಹಿಸಿದ್ದಾರೆ. ನಿಕೊ ಪಾರ್ಕರ್, ಗೆರಾರ್ಡ್ ಬಟ್ಲರ್, ಜೂಲಿಯನ್ ಡೆನ್ನಿಸನ್ ಮತ್ತು ನಿಕ್ ಫ್ರಾಸ್ಟ್ ಕೂಡ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಚಿತ್ರದ ವಿಎಫ್‌ಎಕ್ಸ್ ಸಹ ಅದ್ಭುತವಾಗಿ ಮೂಡಿ ಬಂದಿದ್ದು, ಚಿತ್ರದ ದೃಶ್ಯಗಳು ತಮ್ಮ ಸುತ್ತವೇ ನಡೆಯುತ್ತಿದೆ ಎಂಬ ಅನುಭವ ಪ್ರೇಕ್ಷಕರಲ್ಲಿ ಉಂಟಾಗುತ್ತದೆ.

