ಲಕ್ಷ್ಮಿ ನಿವಾಸ ಸೀರಿಯಲ್ ಭಾವನಾ ಅರ್ಥಾತ್​ ದಿಶಾ ಮದನ್​ ಕೇನ್ಸ್​ ಚಿತ್ರೋತ್ಸವದಲ್ಲಿ ಸ್ಥಾನ ಗಳಿಸುವ ಮೂಲಕ ಮುನ್ನೆಲೆಗೆ ಬಂದಿದ್ದಾರೆ. ಇದೀಗ ಇವರ ಹೋಮ್​ ಟೂರ್ ವಿಡಿಯೋ ವೈರಲ್​ ಆಗಿದೆ. ಇಲ್ಲಿದೆ ನೋಡಿ ವಿಡಿಯೋ.

ಲಕ್ಷ್ಮಿ ನಿವಾಸ ಸೀರಿಯಲ್ ಭಾವನಾ ಅರ್ಥಾತ್​ ದಿಶಾ ಮದನ್​ ಸದ್ಯ ಫ್ರಾನ್ಸ್​ನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಕೇನ್ಸ್ ಚಲನಚಿತ್ರೋತ್ಸವದಲ್ಲಿ ಶೈನ್​ ಆಗುತ್ತಿದ್ದಾರೆ. ಇಲ್ಲಿಯ ರೆಡ್​ ಕಾರ್ಪೆಟ್​ನಲ್ಲಿ ಈ ಬಾರಿ ಅವಕಾಶ ಪಡೆದ ಕನ್ನಡದ ಏಕೈಕ ನಟಿ ಇವರಾಗಿದ್ದಾರೆ. ನಟಿ ಮತ್ತು ನೃತ್ಯಗಾರ್ತಿ ದಿಶಾ ಮದನ್ (Disha Madan) ಇದಾಗಲೇ ಈ ಬಗ್ಗೆ ಮಾತನಾಡಿದ್ದು, ಹರ್ಷ ವ್ಯಕ್ತಪಡಿಸಿದ್ದಾರೆ. ಇಂತಹ ಪ್ರತಿಷ್ಠಿತ ಕಾರ್ಯಕ್ರಮದಲ್ಲಿ ಭಾಗವಹಿಸಿ, ಕನ್ನಡ ಚಿತ್ರರಂಗದ ಧ್ವನಿಯಾಗಲು ತಮಗೆ ಸಿಕ್ಕಿರುವ ಅವಕಾಶವನ್ನು ದಿಶಾ ಅವರು ತಮ್ಮ ವೃತ್ತಿಜೀವನದ ಒಂದು ಪ್ರಮುಖ ಮೈಲಿಗಲ್ಲು ಎಂದಿದ್ದಾರೆ. ಲಕ್ಷ್ಮೀ ನಿವಾಸ ಸೀರಿಯಲ್​ನಲ್ಲಿ ಗರತಿ ಗೌರಮ್ಮನ ರೀತಿ ಇರೋ ಭಾವನಾ ಅರ್ಥಾತ್​ ದಿಶಾ ಕೇನ್ಸ್​ನಲ್ಲಿ ಸಕತ್​ ಹಾಟ್​ ಆಗಿ ಮಿಂಚಿದ್ದಾರೆ.

ಇದೀಗ ನಟಿ ತಮ್ಮ ಮನೆಯ ಪರಿಚಯ ಮಾಡಿಸಿರುವ ಹಳೆಯ ಯೂಟ್ಯೂಬ್​ ವಿಡಿಯೋ ಇದೀಗ ಪುನಃ ವೈರಲ್​ ಆಗುತ್ತಿದೆ. ನಟಿಯ ಬಗ್ಗೆ ಹಲವರು ಜಾಲತಾಣದಲ್ಲಿ ಹುಡುಕಿರೋ ಹಿನ್ನೆಲೆಯಲ್ಲಿ, ಈ ವಿಡಿಯೋ ಮತ್ತೆ ಮೇಲೆ ಬಂದಿದೆ. ಈ ವಿಡಿಯೋದಲ್ಲಿ ನಟಿ ತಮ್ಮ ಶಾಂತವಾಗಿರುವ ಮನೆ ಹಾಗೂ ಅದರಲ್ಲಿ ಇರುವ ಎಲ್ಲಾ ವಸ್ತುಗಳ ಪರಿಚಯವನ್ನೂ ಮಾಡಿಸಿದ್ದಾರೆ. ಗಣೇಶನ ಮೂರ್ತಿಯ ಬಗ್ಗೆ ವಿಶೇಷ ಮಾಹಿತಿಯನ್ನೂ ನೀಡಿದ್ದಾರೆ. ಇನ್ನು ನಟಿ ಕುರಿತು ಹೇಳುವುದಾದರೆ ಇವರು ಬೆಳ್ಳಿ ಪರದೆಯ ಮೇಲೂ ಮಿಂಚಿದ್ದಾರೆ. ಫ್ರೆಂಚ್ ಬಿರಿಯಾನಿ' ಸಿನಿಮಾದಲ್ಲಿ ನಟಿಸಿದ್ದಾರೆ. 'ಹಂಬಲ್ ಪೊಲಿಟಿಷಿಯನ್ ನಾಗರಾಜ್' ವೆಬ್ ಸೀರೀಸ್‌ನಲ್ಲಿಯೂ ಕಾಣಿಸಿಕೊಂಡಿದ್ದಾರೆ. ಇನ್ನೂ ಒಂದು ವಿಶೇಷ ಎಂದರೆ ಈಚೆಗಷ್ಟೇ ದಿಶಾ ಅವರಿಗೆ ಕರ್ನಾಟಕ ವಿಮೆನ್ ಅಚೀವರ್ಸ್ ಅವಾರ್ಡ್‌ ಲಭಿಸಿತ್ತು. 2024ನೇ ಸಾಲಿನ ಪ್ರಶಸ್ತಿ ಇವರ ಪಾಲಿಗೆ ಬಂದಿದೆ. ನಟಿಯ ನಟನಾ ಪಯಣವನ್ನು ಗಮನಿಸಿ, ಈ ಪ್ರಶಸ್ತಿ ನೀಡಲಾಗಿದೆ.

ದಿಶಾ ಅವರಿಗೆ ಇಬ್ಬರು ಮಕ್ಕಳು. ಕನ್ನಡ ಕಿರುತೆರೆಯಲ್ಲಿ ಕಳೆದ ಒಂದು ದಶಕದಿಂದಲೂ ನಟಿ ದಿಶಾ ಮದನ್ ಕಾಣಿಸಿಕೊಳ್ಳುತ್ತಿದ್ದಾರೆ. ಡಾನ್ಸ್ ಇಂಡಿಯಾ ಡಾನ್ಸ್, ಇಸ್ಮಾರ್ಟ್ ಸೂಪರ್ ಜೋಡಿ ಸೇರಿದಂತೆ ಕೆಲವು ರಿಯಾಲಿಟಿ ಷೋಗಳಲ್ಲಿಯೂ ಕಾಣಿಸಿಕೊಂಡಿದ್ದರು. ಶಶಾಂಕ್ ವಾಸುಕಿ ಅವರನ್ನು ಮದುವೆಯಾದ ಬಳಿಕ ಚಿಕ್ಕ ಗ್ಯಾಪ್​ ತೆಗೆದುಕೊಂಡಿದ್ದ ನಟಿ ಮತ್ತೆ ಲಕ್ಷ್ಮೀ ನಿವಾಸದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರ ಪತಿ ಮತ್ತು ಒಂದು ಮಗುವನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದೆ. ಮಕ್ಕಳಿಗಾಗಿ ವಿಶೇಷ ರೀತಿಯಲ್ಲಿ ಸೌಲಭ್ಯಗಳನ್ನೂ ಇವರು ಮನೆಯಲ್ಲಿ ಮಾಡಿರುವುದನ್ನು ನೋಡಬಹುದು. ಅಂದಹಾಗೆ, ಈ ಸೀರಿಯಲ್​ನಲ್ಲಿ ಗರತಿ ಗೌರಮ್ಮನ ರೀತಿ ಇರೋ ಭಾವನಾ ಅರ್ಥಾತ್​ ದಿಶಾ ಅವರು ಸೋಷಿಯಲ್​ ಮೀಡಿಯಾದಲ್ಲಿಯೂ ಸಕತ್​ ಆ್ಯಕ್ಟೀವ್​ ಇದ್ದು, ಹಾಟ್​ ಫೋಟೋಶೂಟ್​ ಮಾಡಿಸಿಕೊಳ್ಳುತ್ತಿರುತ್ತಾರೆ. ಇವರನ್ನು ಮೊದಲಿಗೆ ನೋಡದವರು ನಿಜಕ್ಕೂ ಈಕೆ ಭಾವವನಾ ಎಂದು ಅಚ್ಚರಿಪಟ್ಟುಕೊಳ್ಳುವುದು ಉಂಟು. ಹಾಗಿರುತ್ತೆ ಇವರ ಗೆಟಪ್​. ಕೇನ್ಸ್​ನಲ್ಲಿ ಇವರ ಹಾಟ್​ ಫೋಟೋಗಳನ್ನು ನೋಡಿ ಅಭಿಮಾನಿಗಳು ಅಚ್ಚರಿಪಟ್ಟುಕೊಂಡದ್ದೂ ಇದೆ.

ಅಂದಹಾಗೆ, ಕೇನ್ಸ್ ಚಲನಚಿತ್ರೋತ್ಸವವು ಕೇವಲ ಸಿನಿಮಾಗಳ ಪ್ರದರ್ಶನಕ್ಕೆ ಮಾತ್ರ ಸೀಮಿತವಾಗಿಲ್ಲ, ಬದಲಾಗಿ ಇದು ವಿವಿಧ ದೇಶಗಳ ಸಿನಿಮಾ ನಿರ್ಮಾಪಕರು, ನಿರ್ದೇಶಕರು, ನಟರು ಮತ್ತು ತಂತ್ರಜ್ಞರು ಒಂದೆಡೆ ಸೇರಿ, ತಮ್ಮ ಅನುಭವಗಳನ್ನು ಹಂಚಿಕೊಳ್ಳಲು, ಹೊಸ ಯೋಜನೆಗಳ ಬಗ್ಗೆ ಚರ್ಚಿಸಲು ಮತ್ತು ಭವಿಷ್ಯದ ಸಹಯೋಗಗಳಿಗೆ ನಾಂದಿ ಹಾಡಲು ಒಂದು ವೇದಿಕೆಯಾಗಿದೆ. ದಿಶಾ ಮದನ್ ಅವರ ಉಪಸ್ಥಿತಿಯು ಕನ್ನಡ ಚಿತ್ರರಂಗಕ್ಕೆ ಹೊಸ ಬಾಗಿಲುಗಳನ್ನು ತೆರೆಯಬಹುದು ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಚಿತ್ರಗಳಿಗೆ ಹೆಚ್ಚಿನ ಮನ್ನಣೆ ಸಿಗಲು ಸಹಕಾರಿಯಾಗಬಹುದು ಎಂದು ನಿರೀಕ್ಷಿಸಲಾಗಿದೆ.

YouTube video player