ಶ್ರೀದೇವಿ ಇನ್ನಿಲ್ಲ ಎಂದಾಗ ಅಭಿಮಾನಿಗಳು ಕಣ್ಣೀರಾಗಿದ್ದರು. ನೆಚ್ಚಿನ ನಟಿ ಇಲ್ಲ ಎನ್ನುವ ಖಾಲಿತನವನ್ನು ಅರಗಿಸಿಕೊಳ್ಳಲು ಅವಕಾಶ ನೀಡದೇ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದರು ಮಗಳು ಜಾನ್ವಿ ಕಪೂರ್‌. ಈಗ ಜಾನ್ವಿಯ ಬೆನ್ನಿಗೆ ಬಿದ್ದಿದ್ದ ಶ್ರೀದೇವಿಯ ಮತ್ತೊಬ್ಬ ಮಗಳು ಖುಷಿ ಕಪೂರ್‌ ಸರದಿ.

ಅಕ್ಕ ಬಂದು ತೆರೆಯಲ್ಲಿ ಕಾಣಿಸಿಕೊಂಡ ಮೇಲೆ ತಂಗಿ ಖುಷಿ ಕಪೂರ್‌ 2019ಕ್ಕೆ ತೆರೆಗೆ ಬರಲು ಸಿದ್ಧವಾಗಿದ್ದಾರೆ. ಇದನ್ನು ಅಧಿಕೃತವಾಗಿ ಹೇಳಿರುವುದು ತಂದೆ ಬೋನಿ ಕಪೂರ್‌.

ಅಕ್ಕ ನಟಿಸಿದ ಧಡಕ್ ಟ್ರೇಲರ್ ನೋಡಿ ಕಣ್ಣೀರಿಟ್ಟ ಖುಷಿ

ಇನ್ನು ಸಾಕಷ್ಟುಯುವ ಪ್ರತಿಭೆಗಳಿಗೆ ಅವಕಾಶ ಕೊಟ್ಟಹೆಸರು ಹೊಂದಿರುವ ಕರಣ್‌ ಜೋಹರ್‌ ನಿರ್ಮಾಪಕರಾಗಿ ಖುಷಿಯನ್ನು ಬಾಲಿವುಡ್‌ಗೆ ಕರೆತರುವ ಸಾರಥ್ಯ ವಹಿಸಿದ್ದಾರೆ. ಇದಕ್ಕಾಗಿ ಕರಣ್‌ ಏನೆಲ್ಲಾ ಸಿದ್ಧತೆ ಮಾಡಿಕೊಂಡಿದ್ದಾರೆ ಎನ್ನುವುದು ವಿಶೇಷ. ಇದಕ್ಕೆ ತಕ್ಕಂತೆ ಅಗತ್ಯ ತಯಾರಿಯನ್ನೂ ಮಾಡಿಕೊಳ್ಳಲು ಮುಂದಾಗಿದ್ದಾರೆ ಖುಷಿ ಕಪೂರ್‌. ಎಲ್ಲವೂ ಅಂದುಕೊಂಡಂತೆ ಆದರೆ ಮುಂದಿನ ವರ್ಷ ಅಭಿಮಾನಿಗಳನ್ನು ಖುಷಿಪಡಿಸಲು ಖುಷಿ ಬರಲಿದ್ದಾರೆ.

ಟ್ರೋಲಿಗರಿಗೆ ಸಿಕ್ಕಿದ್ದು ಜಾಹ್ನವಿ ಪಿಂಕ್ ಡ್ರೆಸ್.. ಅಂಥಾದ್ದೇನಿತ್ತು?