ಬಾಲಿವುಡ್ ಸೂಪರ್ ಸ್ಟಾರ್ ಶ್ರಿದೇವಿ ಇದ್ದಿದ್ದರೆ ಎಷ್ಟು ಖುಷಿ ಪಡುತ್ತಿದ್ದರೋ? ಮಗಳ ಮೊದಲ ಸಿನಿಮಾ 'ಧಡಕ್...' ಟ್ರೇಲರ್ ರಿಲೀಸ್ ಆಗಿದೆ. ಮಗಳನ್ನು ತೆರೆ ಮೇಲೆ ಕಾಣುವ ಕನಸು ಕಂಡಿದ್ದ ಶ್ರಿದೇವಿ, ಆಸೆ ಈಡೇರುವ ಮುನ್ನವೇ ಇಹಲೋಕ ತ್ಯಜಿಸಿದ್ದು ದುರಂತ.
ಜು.11ರಂದು ಮುಂಬೈನಲ್ಲಿ ಶ್ರಿದೇವಿ ಮಗಳು ಜಾಹ್ನವಿ ನಟನೆಯ 'ಧಡಕ್...' ಚಿತ್ರದ ಟ್ರೇಲರ್ ಬಿಡುಗಡೆ ಆಗಿದೆ. ಪ್ರಖ್ಯಾತ ಮರಾಠಿ ಚಿತ್ರ 'ಸೈರಾಟ್' ಚಿತ್ರದ ಹಿಂದಿ ಅವತರಿಣಿಕೆಯಾದ ಈ ಚಿತ್ರದಲ್ಲಿ ಜಾಹ್ನವಿಯೊಂದಿಗೆ ಇಶಾನ್ ಕಟ್ಟರ್ ನಟಿಸಿದ್ದಾರೆ.
ಸಿನಿ ಜಗತ್ತಿಗೆ ಅಕ್ಕ ಇಟ್ಟ ಮೊದಲ ಹೆಜ್ಜೆ ನೋಡಿ ಇತ್ತ ತಂಗಿ ಖುಷಿಯೂ ಫುಲ್ ಖುಷಿಯಾಗಿದ್ದಾರೆ. ಆದರೆ, ಇಂತ ಸಂದರ್ಭಗಳಲ್ಲಿ ಕಳೆದುಕೊಂಡ ತಾಯಿ ನೆನಪಾಗುವುದು ಸಹಜ. ಅಕ್ಕನ ಸಿನಿ ಜರ್ನಿಯ ಮೊದಲ ಹೆಜ್ಜೆಗೆ ಶುಭ ಹಾರೈಸುತ್ತಿದ್ದಂತೆ, ತಾಯಿಯ ನೆನೆದು ಖುಷಿ ಬಿಕ್ಕಿ ಬಿಕ್ಕಿ ಅತ್ತಿದ್ದಾಳೆ. ತಬ್ಬಿಕೊಂಡ ಜಾಹ್ನವಿ ಎಷ್ಟೇ ಸಮಾಧಾನ ಮಾಡಿದರೂ, ದುಃಖ ಉಮ್ಮಳಿಸಿ ಮತ್ತೆ ಮತ್ತೆ ಬಿಕ್ಕಿದ್ದಾಳೆ.
ಕರಣ್ ಜೋಹರ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಬಾಲಿವುಡ್ ದಿಗ್ಗಜರು ಪಾಲ್ಗೊಂಡಿದ್ದರು.ಪ್ರೀತಿಯಲ್ಲಿ ಬಿದ್ದ ಮುದ್ದು ಹುಡುಗಿಯ ಪಾತ್ರ ಮಾಡಿರುವ ಜಾಹ್ನವಿ ಅಮ್ಮನ ಹೆಸರು ಉಳಿಸುತ್ತಾರಾ ಕಾದು ನೋಡಬೇಕು.
