88 ವರ್ಷದ ತನ್ನ ಅತ್ತೆಯನ್ನು ಎಂಎಸ್ ಧೋನಿ ಇಂದು ಭೇಟಿಯಾದರು. ಮಹೀ, ನೀವು ಅವರ ಜೀವನಕ್ಕೆ ಇನ್ನಷ್ಟು ಅರೋಗ್ಯ ಹಾಗೂ ಸಂತೋಷವನ್ನು ತುಂಬಿದ್ದೀರಿ ಎಂದು ಖುಷ್ಬೂ ತಮ್ಮ ಸೋಶಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ಬೆಂಗಳೂರು (ಏ.14): ನಟಿ ಹಾಗೂ ಬಿಜೆಪಿ ನಾಯಕಿ ಖುಷ್ಬೂ ಸುಂದರ್ ಇತ್ತೀಚೆಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಹಾಗೂ ಟೀಮ್ ಇಂಡಿಯಾ ಮಾಜಿ ನಾಯಕ ಕ್ಯಾಪ್ಟನ್ ಕೂಲ್ ಎಂಎಸ್ ಧೋನಿಯನ್ನು ಭೇಟಿಯಾಗಿದ್ದಲ್ಲದೆ, ಈ ಕುರಿತಾದ ಫೋಟೋ ಕೂಡ ಹಂಚಿಕೊಂಡಿದ್ದಾರೆ. 80-90ರ ದಶಕದಲ್ಲಿ ಕನ್ನಡ, ತಮಿಳು, ತೆಲುಗು ಹಾಗೂ ಹಿಂದಿ ಚಿತ್ರಗಳಲ್ಲಿ ನಟಿಸಿ ದೊಡ್ಡ ಮಟ್ಟದಲ್ಲಿ ಪ್ರಖ್ಯಾತಿ ಗಳಿಸಿದ್ದ ನಟಿ ಖುಷ್ಬೂ ಇಂದಿಗೂ ಜನಪ್ರಿಯ ತಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರ ಪೋಸ್ಟ್‌ಗಳಿಗೆ ಸಾಕಷ್ಟು ಮೆಚ್ಚುಗೆಗಳು ವ್ಯಕ್ತವಾಗುತ್ತದೆ. ರಾಜಕೀಯ ಹಾಗೂ ಸಿನಿಮಾ ಎರಡೂ ಕ್ಷೇತ್ರಗಳಲ್ಲಿ ತೊಡಗಿಕೊಂಡಿರುವ ಖುಷ್ಬೂ ಸೋಶಿಯಲ್ ಮೀಡಿಯಾದಲ್ಲಿ ಬಹಳ ಆಕ್ಟೀವ್ ಆಗಿದ್ದಾರೆ. ತಮ್ಮ ಜೀವನದ ಪ್ರತಿದಿನದ ಸಂಗತಿಗಳನ್ನು, ರಾಜಕೀಯ ಕುರಿತಾದ ಅಭಿಪ್ರಾಯಗಳನ್ನು ಹಾಗೂ ಕುಟುಂಬದ ಜೊತೆಗಿನ ಚಿತ್ರಗಳನ್ನು ಅವರು ಶೇರ್ ಮಾಡಿಕೊಳ್ಳುತ್ತಲೇ ಇರುತ್ತಾರೆ. ಇತ್ತೀಚೆಗೆ ಖುಷ್ಭೂ ಕ್ಯಾಪ್ಟನ್ ಕೂಲ್ ಎಂಎಸ್ ಧೋನಿ ಅವರ ಜೊತೆಗಿನ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಚಿತ್ರಗಳು ಇಂಟರ್ನೆಟ್‌ನಲ್ಲಿ ವೈರಲ್ ಆಗಿವೆ.
ಈ ಫೋಟೋಗಳನ್ನು ಶೇರ್ ಮಾಡಿಕೊಂಡು ಟ್ವಿಟರ್‌ನಲ್ಲಿ ಬರೆದುಕೊಂಡಿರುವ ಅವರು, 'ಹೀರೋಗಳು ಎಂದಿಗೂ ನಿರ್ಮಾಣ ಮಾಡಲಾಗೋದಿಲ್ಲ. ಅವರು ಹುಟ್ಟುತ್ತಾರೆ. ಧೋನಿ ಅದನ್ನು ಸಾಬೀತು ಮಾಡಿದ್ದಾರೆ. ಧೋನಿ ಇತ್ತೀಚೆಗೆ ನನ್ನ 88 ವರ್ಷದ ಅತ್ತೆಯನ್ನು ಭೇಟಿ ಮಾಡಿದರು. ಮಹೀ, ನೀವು ಅವರ ಜೀವನಕ್ಕೆ ಇನ್ನಷ್ಟು ಆರೋಗ್ಯ ಹಾಗೂ ಖುಷಿಯನ್ನು ನೀಡಿದ್ದೀರಿ. ಇದಕ್ಕಾಗಿ ನಿಮಗೆ ಥ್ಯಾಂಕ್ಸ್, ಚೆನ್ನೈ ಸೂಪರ್ ಕಿಂಗ್ಸ್‌ಗೆ ವಿಶಲ್ ಹೊಡೆಯಿರಿ' ಎಂದು ಅವರು ಬರೆದುಕೊಂಡಿದ್ದಾರೆ.

2011ರ ವಿಶ್ವಕಪ್ ಫೈನಲ್‌ನಲ್ಲಿ ಗೆಲುವಿನ ಸಿಕ್ಸರ್ ಬಡಿದ ಸೀಟ್‌ಗೆ ಧೋನಿ ಹೆಸರಿಡಲು ನಿರ್ಧಾರ!
ಅದರೊಂದಿಗೆ ಖುಷ್ಭೂ ಅವರ ಅತ್ತೆ ಧೋನಿಗೆ ಮುತ್ತು ನೀಡಿರುವ ಚಿತ್ರವನ್ನೂ ಹಾಕಿದ್ದಾರೆ. ಅದರೊಂದಿಗೆ ಧೋನಿ ಜೊತೆ ತಾವು ತೆಗೆದುಕೊಂಡಿರುವ ಚಿತ್ರವನ್ನೂ ಪೋಸ್ಟ್ ಮಾಡಿದ್ದಾರೆ. ಈ ಚಿತ್ರಗಳು ಇಂಟರ್ನೆಟ್‌ನಲ್ಲಿ ವೈರಲ್ ಆಗಿದೆ. ಅದರೊಂದಿಗೆ ನಟಿ ತ್ರಿಶಾ ಹಾಗೂ ನಿರ್ದೇಶಕ ಲೋಕೇಶ್ ಕಂಗರಾಜ್ ಅವರ ಚಿತ್ರಗಳೂ ಕೂಡ ವೈರಲ್ ಆಗಿದೆ. ರಾಜಸ್ಥಾನ ವಿರುದ್ಧದ ಪಂದ್ಯವನ್ನು ವೀಕ್ಷಿಸುವ ಸಲುವಾಗಿ ತ್ರಿಶಾ ಹಾಗೂ ಖುಷ್ಬೂ ಚೆಪಾಕ್ ಸ್ಟೇಡಿಯಂಗೆ ಆಗಮಿಸಿದ್ದರು.
IPL 2023: ಬರೋಬ್ಬರಿ 15 ವರ್ಷಗಳ ಬಳಿಕ ಚೆಪಾಕ್‌ನಲ್ಲಿ ಚೆನ್ನೈ ತಂಡವನ್ನು ಮಣಿಸಿದ ರಾಜಸ್ಥಾನ!
ಅಲ್ಲದೆ, ತಮಿಳು ಚಿತ್ರರಂಗದಲ್ಲಿ ಹಾಸ್ಯನಟರಾಗಿರುವ ಸತೀಶೂಮ್ ಅವರು ಮೈದಾನದಲ್ಲಿ ತ್ರಿಷಾ ಜೊತೆಗಿನ ಚಿತ್ರವನ್ನು ಹಂಚಿಕೊಂಡಿದ್ದಾರೆ. ಅದೇ ರೀತಿ ಲಿಯೋ ಚಿತ್ರದ ನಿರ್ದೇಶಕ ಲೋಕೇಶ್ ಕನಕರಾಜ್ ಮತ್ತು ನಟ ಮತ್ತು ಸಚಿವ ಉದಯನಿಧಿ ಸ್ಟಾಲಿನ್ ಅವರ ಫೋಟೋಗಳು ಅಂತರ್ಜಾಲದಲ್ಲಿ ವೈರಲ್ ಆಗಿವೆ.
