ಕುಲವಧು ಧಾರಾವಾಹಿಯಲ್ಲಿ ಧನ್ಯಾ ಎಂದೇ ಖ್ಯಾತಿ ಪಡೆದಿರುವ ದೀಪಿಕ ಮಿಸ್ ಸೌತ್ ಇಂಡಿಯಾ ಗ್ಲಾಮರ್ 2019 ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. 

ಮಿಸ್ ಇಂಡಿಯಾ ಗ್ಲಾಮರ್ 2019 ಈವೆಂಟ್ ನಲ್ಲಿ ಭಾಗಿಯಾಗಿದ್ದು, ಕಿರೀಟವನ್ನು ಮುಡಿಗೇರಿಸಿಕೊಂಡಿದ್ದು ಖುಷಿಯಾಗಿದೆ. ನನಗೆ ಸಪೋರ್ಟ್ ಮಾಡಿದ, ನನ್ನ ಮೇಲೆ ನಂಬಿಕೆ ಇಟ್ಟ ಎಲ್ಲರಿಗೂ ಧನ್ಯವಾದಗಳು ಎಂದು ಇನ್ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ. 

 

ಜೊತೆಗೆ ತಾವು ಮದುವೆಯಾಗುತ್ತಿರುವ ಹುಡುಗನಿಗೆ ವಿಶೇಷವಾದ ಥ್ಯಾಂಕ್ಸ್ ಹೇಳಿದ್ದಾರೆ.  ನೀನಿಲ್ಲದೇ ನನ್ನ ಜೀವನದಲ್ಲಿ ಏನೂ ನಡೆಯಲು ಸಾಧ್ಯವಿಲ್ಲ. ಯಾವಾಗಲೂ ಸಪೋರ್ಟಿವ್ ಆಗಿರುವ ನಿನಗೆ ಥ್ಯಾಂಕ್ಸ್ ಬೇಬಿ’ ಎಂದು ಬರೆದುಕೊಂಡಿದ್ದಾರೆ. 

ಇತ್ತೀಚಿಗಷ್ಟೇ ದೀಪಿಕಾ ತಮ್ಮ ಗೆಳೆಯ ಅಕ್ಕು ಆಕರ್ಷ್ ನನ್ನು ಪರಿಚಯಿಸಿದ್ದರು. 

ದೀಪಿಕಾ ಕುಲವಧು ಧಾರಾವಾಹಿಯಲ್ಲಿ ಧನ್ಯಾ ಪಾತ್ರವನ್ನು ಮಾಡಿದ್ದಾರೆ. ಈ ಧಾರಾವಾಹಿ ಇವರಿಗೆ ಬಿಗ್ ಹಿಟ್ ತಂದು ಕೊಟ್ಟಿದೆ.