ಬಹುಭಾಷಾ ನಟಿ ಸಮಂತಾಗೆ ಮದುವೆಯಾಗಿ ತಪ್ಪು ಮಾಡಿ ಬಿಟ್ಟೆನಾ ಎಂಬ ಕೊರಗು ಕಾಡುತ್ತಿದೆಯಾ? ಹೀಗೊಂದು ಪ್ರಶ್ನೆ ಅವರ ಒಂದು ಹೇಳಿಕೆ ಹುಟ್ಟು ಹಾಕಿದೆ. 

ಇತ್ತೀಚಿಗೆ ನೀಡಿದ ಸಂದರ್ಶನವೊಂದರಲ್ಲಿ ಮದುವೆ ಬಗ್ಗೆ ಮಾತನಾಡಿದ್ದಾರೆ. ಮದುವೆಯಾದ ನಂತರ ಅಷ್ಟೊಂದು ಆಫರ್ ಗಳು ಬರುತ್ತಿಲ್ಲ. ಇದನ್ನು ನಾನು ಮನಸ್ಸಿಗೆ ಹಚ್ಚಿಕೊಂಡಿದ್ದೇನೆ. ಮದುವೆಗೂ ಮುನ್ನ ರಂಗಸ್ಥಳಂ, ಮಹಾನತಿ ಸಿನಿಮಾ ಮಾಡಿದ್ದೇನೆ. ಆ ಸಿನಿಮಾಗಳು ಮದುವೆ ಬಳಿಕ ರಿಲೀಸ್ ಆದವು. ಅದನ್ನು ಜನ ಇಷ್ಟಪಟ್ಟರು. ಹಿಟ್ ಆಯಿತು. ಆದರೂ ಇದನ್ನು ಪಾಸಿಟೀವ್ ಆಗಿ ತೆಗೆದುಕೊಳ್ಳಲು ಆಗುತ್ತಿಲ್ಲ ಎಂದಿದ್ದಾರೆ. 

ನನ್ನನ್ನು ಹಾಕಿಕೊಂಡು ಸಿನಿಮಾ ಮಾಡುವುದೇನಿದೆ ಎಂದು ನಿರ್ಮಾಪಕರು ಭಾವಿಸಿದಂತಿದೆ. ಹಾಗಾಗಿ ನನಗೆ ಆಫರ್ ಗಳು ಕಡಿಮೆಯಾಗುತ್ತಿವೆ ಎಂದಿದ್ದಾರೆ. 

ಇನ್ನು ಬಾಲಿವುಡ್ ನಲ್ಲಿ ಸಿನಿಮಾ ಮಾಡುವ ಬಗ್ಗೆ ಮಾತನಾಡುತ್ತಾ, ಸೌತ್ ಇಂಡಿಯನ್ ಇಂಡಸ್ಟ್ರಿಯಲ್ಲಿ ಒಳ್ಳೆಯ ಸಿನಿಮಾಗಳು ಸಿಗುವವರೆಗೂ ಬಾಲಿವುಡ್ ಗೆ ಹೋಗುವುದಿಲ್ಲ ಎಂದಿದ್ದಾರೆ.