ಮಾರ್ಚ್’ನಲ್ಲಿ ಸೆಟ್ಟೇರಲಿದೆ ಕೋಟಿಗೊಬ್ಬ-3

First Published 21, Feb 2018, 9:28 AM IST
Kotigoba 3 will come March
Highlights

ಸುದೀಪ್ ಹಾಗೂ ನಿರ್ಮಾಪಕ ಸೂರಪ್ಪ ಬಾಬು ಕಾಂಬಿನೇಷನ್‌ನ ‘ಕೋಟಿಗೊಬ್ಬ 3’ ಮಾ.2 ರಂದು ಅಧಿಕೃತವಾಗಿ ಸೆಟ್ಟೇರಲಿದೆ. ವಿಶೇಷ ಅಂದರೆ ಈ ಚಿತ್ರಕ್ಕೆ ಕತೆ ಬರೆದಿರುವುದು ಸುದೀಪ್. ಚಿತ್ರಕತೆ ಬರೆದು ನಿರ್ದೇಶನ ಮಾಡುತ್ತಿರುವುದು ಶಿವ ಕಾರ್ತಿಕ್. ಇವರಿಗೆ ಇದು ಮೊದಲ ಸಿನಿಮಾ. ಎರಡು ಹಂತಗಳಲ್ಲಿ ಚಿತ್ರೀಕರಣ ನಡೆಯಲಿದೆ. ವಿರಾಮದ ನಂತರದ ಕತೆ ಪೂರ್ತಿ ಯೂರೋಪ್ ದೇಶದಲ್ಲಿ ಚಿತ್ರೀಕರಣ ನಡೆಯಲಿದೆ.

ಬೆಂಗಳೂರು (ಫೆ.21): ಸುದೀಪ್ ಹಾಗೂ ನಿರ್ಮಾಪಕ ಸೂರಪ್ಪ ಬಾಬು ಕಾಂಬಿನೇಷನ್‌ನ ‘ಕೋಟಿಗೊಬ್ಬ 3’ ಮಾ.2 ರಂದು ಅಧಿಕೃತವಾಗಿ ಸೆಟ್ಟೇರಲಿದೆ. ವಿಶೇಷ ಅಂದರೆ ಈ ಚಿತ್ರಕ್ಕೆ ಕತೆ ಬರೆದಿರುವುದು ಸುದೀಪ್. ಚಿತ್ರಕತೆ ಬರೆದು ನಿರ್ದೇಶನ ಮಾಡುತ್ತಿರುವುದು ಶಿವ ಕಾರ್ತಿಕ್. ಇವರಿಗೆ ಇದು ಮೊದಲ ಸಿನಿಮಾ. ಎರಡು ಹಂತಗಳಲ್ಲಿ ಚಿತ್ರೀಕರಣ ನಡೆಯಲಿದೆ. ವಿರಾಮದ ನಂತರದ ಕತೆ ಪೂರ್ತಿ ಯೂರೋಪ್ ದೇಶದಲ್ಲಿ ಚಿತ್ರೀಕರಣ ನಡೆಯಲಿದೆ.

ಯೂರೋಪ್‌ನಲ್ಲಿ ನಡೆಯುವ ಸಾಹಸ ದೃಶ್ಯಗಳನ್ನು ಹಾಲಿವುಡ್ ಸಿನಿಮಾಗಳ ಸಾಹಸ ನಿರ್ದೇಶಕ ಲೀ ಕಂಪೋಸ್ ಮಾಡಲಿದ್ದಾರೆ. ಇವರು ಈಗಾಗಲೇ ಬಾಹುಬಲಿ ಹಾಗೂ  ವಿಶ್ವರೂಪಂ ಚಿತ್ರಗಳಿಗೆ ಸಾಹಸ ದೃಶ್ಯಗಳನ್ನು ಸಂಯೋಜನೆ
ಮಾಡಿದ್ದಾರೆ. ಈಗ ಕನ್ನಡ ಚಿತ್ರಕ್ಕೆ ಬರುತ್ತಿದ್ದಾರೆ. ‘ಕೋಟಿಗೊಬ್ಬ 2’ ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ರವಿಶಂಕರ್  ಜೈಲಿಗೆ ಹೋಗುತ್ತಾರೆ. ಆ ಪಾತ್ರ ಪಾರ್ಟ್-3 ನಲ್ಲೂ  ಮುಂದುವರಿಯಲಿದೆ. ಜೈಲಿನಿಂದ ರವಿಶಂಕರ್ ಹೇಗೆ ಬರುತ್ತಾರೆ, ಅವರ ಪಾತ್ರ ಇಲ್ಲೂ ಹೇಗೆ ಮುಂದುವರಿಯುತ್ತದೆ. ‘ಕತೆಯ ಒಂದು ಸಾಲು ಕೊಟ್ಟಿರುವುದು ನಟ ಸುದೀಪ್  ಅವರೇ. ಅವರು ಕೊಟ್ಟ ಕತೆಯನ್ನು ತುಂಬಾ ಸಮಯ  ತೆಗೆದುಕೊಂಡು ಚಿತ್ರಕಥೆ ಮಾಡಿಸಿ ಕಾರ್ತಿಕ್ ಅವರಿಂದ ನಿರ್ದೇಶನ ಮಾಡಿಸುತ್ತಿದ್ದೇವೆ. ಚಿತ್ರಕತೆಯೇ ಕೋಟಿಗೊಬ್ಬ 3  ಸಿನಿಮಾದ ಹೈಲೈಟ್’ ಎನ್ನುತ್ತಾರೆ ನಿರ್ಮಾಪಕ ಸೂರಪ್ಪ  ಬಾಬು. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಲಿದ್ದು, ಶೇಖರ್‌ ಚಂದ್ರು ಕ್ಯಾಮೆರಾ ಹಿಡಿಯಲಿದ್ದಾರೆ. 

loader