ಮಂಡ್ಯ (ಡಿ. 26): ಕೆಜಿಎಫ್ ನಿರ್ಮಾಪಕ ವಿಜಯ್ ಕಿರಗಂದೂರ್ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.  

ಜೋಗಿ ಪ್ರಕಾರ KGF ನೋಡಲು 10 ಕಾರಣಗಳು...

ವಿಜಯ್ ರವರು ಮೂಲತಃ ಮಂಡ್ಯದವರು. ಮಂಡ್ಯ ನಗರಕ್ಕೆ ಅಂಟಿಕೊಂಡಿರೊ ಕಿರಗಂದೂರು ವಿಜಯ್ ಸ್ವಗ್ರಾಮ.  ಮಲ್ಲೇಶ್ವರಂ ಬಿಜೆಪಿ ಶಾಸಕ ಅಶ್ವತ್ ನಾರಾಯಣ್ ಅವರ ಹತ್ತಿರದ ಸಂಬಂಧಿ ಕೂಡಾ ಹೌದು. ಹಾಗಾಗಿ  ಬಿಜೆಪಿ ಮುಖಂಡರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ.  ಈಗಾಗಲೇ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಬಿಜೆಪಿ ಮುಖಂಡರು ಹಾಗೂ ಆಪ್ತರೊಂದಿಗೆ ಮಾತನಾಡಿದ್ದಾರೆ ಎನ್ನಲಾಗಿದೆ. 

ಲುಂಗಿ ಉಟ್ಟು ಮಂಕಿ ಕ್ಯಾಪ್‌ ಹಾಕಿ KGF ಕಂಡ ಜಗ್ಗೇಶ್‌..ಯಾಕೆ!

ಸ್ಪರ್ಧೆ ಸಾಧ್ಯತೆ ಹಿನ್ನೆಲೆಯಲ್ಲಿ ಮಂಡ್ಯದಲ್ಲಿ ವಿಜಯ್  ಫ್ಲೆಕ್ಸ್, ಬ್ಯಾನರ್ ಗಳು ರಾರಾಜಿಸುತ್ತಿದೆ. ವಿಜಯ್ ಬಿಜೆಪಿಯಿಂದ ಸ್ಪರ್ಧಿಸಿದರೆ ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ಉತ್ತಮ ಪೈಪೋಟಿ ನೀಡಿದಂತಾಗುತ್ತದೆ.