ಕಿರಿಕ್ ಕೀರ್ತಿ ಪೂರ್ಣಪ್ರಮಾಣದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡ ಮೊದಲ ಚಿತ್ರ ಇದಂತೆ. ಚಿತ್ರವನ್ನು ಆವಿಷ್ಕಾರ್ ಕ್ರಿಯೇಶನ್ಸ್ ಬ್ಯಾನರ್'ನಡಿ ನಿರ್ಮಿಸಲಾಗುತ್ತಿದ್ದು, 'ಒಂದೇ ಒಂದು ಪೆಗ್ಗಿಗೆ' ಖ್ಯಾತಿಯ ರ್ಯಾಪರ್ ಚಂದನ್ ಶೆಟ್ಟಿ ಸಂಗೀತ ನೀಡಿದ್ದಾರೆ.
ಬೆಂಗಳೂರು: ಬಿಗ್'ಬಾಸ್ ಖ್ಯಾತಿಯ 'ಕಿರಿಕ್' ಕೀರ್ತಿಯ ಹಾರರ್ ಸಿನಿಮಾವೊಂದು ಶೀಘ್ರದಲ್ಲೇ ಬರಲಿದೆ. ಹೆಸರು - ಚಿತ್ರಾಲಿ. ಇದೇ 8ರಂದು ಚಿತ್ರದ ಭರ್ಜರಿ ಟ್ರೇಲರ್ ಲಾಂಚ್ ಆಗುತ್ತಿದೆ. ಇಂಟರೆಸ್ಟಿಂಗ್ ವಿಷಯ ಏನೆಂದರೆ 'ಬಿಗ್ ಬಾಸ್' ಮನೆಗೆ ಹೋಗುವ ಮೊದಲೇ ಕೀರ್ತಿ ಅವರು ಈ ಚಿತ್ರದಲ್ಲಿ ನಟಿಸಿದ್ದರು. ಆಗಲೇ ಚಿತ್ರೀಕರಣ ಸಂಪೂರ್ಣವಾಗಿತ್ತು. ಬಿಗ್ ಬಾಸ್ ಮನೆಗೆ ಹೋಗಿ ಬಂದು, ಪೋಸ್ಟ್ ಪ್ರೊಡಕ್ಷನ್ ಮುಗಿಸಿ ಟ್ರೇಲರ್ ಲಾಂಚ್'ಗೆ ಸಿದ್ಧತೆ ನಡೆಸಿಕೊಂಡಿದ್ದಾರೆ. ರವಿ ಮತ್ತು ಚೇತನ್ ಎಸ್'ಪಿ ಎನ್ನುವವರು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. "ಎರಡನೇ ಸಲ" ಸೇರಿ 2 ಚಿತ್ರಗಳನ್ನು ಆಗಲೇ ಒಪ್ಪಿಕೊಂಡಿದ್ದರೂ ಕಿರಿಕ್ ಕೀರ್ತಿ ಪೂರ್ಣಪ್ರಮಾಣದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡ ಮೊದಲ ಚಿತ್ರ ಇದಂತೆ. ಚಿತ್ರವನ್ನು ಆವಿಷ್ಕಾರ್ ಕ್ರಿಯೇಶನ್ಸ್ ಬ್ಯಾನರ್'ನಡಿ ನಿರ್ಮಿಸಲಾಗುತ್ತಿದ್ದು, 'ಒಂದೇ ಒಂದು ಪೆಗ್ಗಿಗೆ' ಖ್ಯಾತಿಯ ರ್ಯಾಪರ್ ಚಂದನ್ ಶೆಟ್ಟಿ ಸಂಗೀತ ನೀಡಿದ್ದಾರೆ.
ಕೀರ್ತಿ ಈ ಬಗ್ಗೆ ಹೇಳೋದು ಹೀಗೆ:
"ಇದೊಂದು ಹಾಲಿವುಡ್ ಥರದ ಸಿನಿಮಾ. ಹಾಡು ಕಾಮಿಡಿಗಳಿಲ್ಲ. ನೇರ ಕತೆಯೇ ಜರುಗುತ್ತದೆ. ಈ ಚಿತ್ರದ ಅವಧಿ ಒಂದು ಗಂಟೆ ಹತ್ತು ನಿಮಿಷದಷ್ಟು ಮಾತ್ರ. ಚಿಕ್ಕ ಮಗಳ ಮೇಲೆ ಭೂತ ಆವಾಹನೆ ಆಗುವ ಒಂದು ಕತೆ. ಅದರಲ್ಲಿ ನಾನು ಆ ಮಗುವಿನ ಚಿಕ್ಕಪ್ಪ. ನಾನು ವಿದೇಶದಲ್ಲಿ ಪ್ಯಾರನಾರ್ಮಲ್ ಸ್ಟಡಿ ಮಾಡಿಕೊಂಡು ಬಂದಿರುತ್ತೇನೆ. ಹೇಗೆ ಆ ಮಗುವನ್ನು ಬಚಾವ್ ಮಾಡುತ್ತೇನೆ ಎನ್ನುವದೇ ಈ ಕತೆ" ಎಂದು ಕೀರ್ತಿ ವಿವರಿಸುತ್ತಾರೆ.
ಕನ್ನಡಪ್ರಭ ಸಿನಿ ವಾರ್ತೆ
epaper.kannadaprabha.in
