ಸಾಹಸಸಿಂಹ ವಿಷ್ಣುವರ್ಧನ್ ಸೇರಿದಂತೆ ಅನೇಕರಿಗೆ ಚಿತ್ರರಂಗದಲ್ಲಿ ಅಚ್ಚಳಿಯ ಸ್ಥಾನ ಕಲ್ಪಿಸಿದ ನಾಗರಹಾವು ಚಿತ್ರ ಮತ್ತೆ ತೆರೆ ಮೇಲೆ ಬರಲಿದೆ. ಈ ಬಾರಿ ಹೊಸ ತಂತ್ರಜ್ಞಾನ ಹಾಗು ಡಿಜಿಟಲ್ ಸೌಂಡ್ ನೊಂದಿಗೆ ರಿಲೀಸ್ ಆಗಿದೆ.
ಸಾಹಸಸಿಂಹ ವಿಷ್ಣುವರ್ಧನ್ ಸೇರಿದಂತೆ ಅನೇಕರಿಗೆ ಚಿತ್ರರಂಗದಲ್ಲಿ ಅಚ್ಚಳಿಯ ಸ್ಥಾನ ಕಲ್ಪಿಸಿದ ನಾಗರಹಾವು ಚಿತ್ರ ಮತ್ತೆ ತೆರೆ ಮೇಲೆ ಬರಲಿದೆ. ಈ ಬಾರಿ ಹೊಸ ತಂತ್ರಜ್ಞಾನ ಹಾಗು ಡಿಜಿಟಲ್ ಸೌಂಡ್ ನೊಂದಿಗೆ ರಿಲೀಸ್ ಆಗಿದೆ.
ಟೀಸರ್ ನ್ನು ಕಿಚ್ಚ ಸುದೀಪ್ ಬಿಡುಗಡೆ ಮಾಡಿದ್ದು, ಇದು ನನಗೆ ಸಿಗುತ್ತಿರುವ ಭಾಗ್ಯ ಎಂದು ಟ್ವಿಟರ್ ನಲ್ಲಿ ಹೇಳಿದ್ದಾರೆ. ಜತೆಗೆ ಹೊಸ ಸಾಹಸಕ್ಕೆ ಕೈ ಹಾಕಿರುವ ರವಿಚಂದ್ರನ್ ಸಹೋದರ ಬಾಲಾಜಿಗೆ ಶುಭ ಕೋರಿದ್ದಾರೆ.
7.1 ಡಿಜಿಟಲ್ ಅಲ್ಟ್ರಾ ಸೌಂಡಿಂಗ್ ಎಫೆಕ್ಟ್ ನಲ್ಲಿ 'ನಾಗರಹಾವು' ಚಿತ್ರದ ಟೀಸರ್ ಝಲಕ್ ಅಭಿಮಾನಿಗಳ ಮುಂದೆ ಬಂದಿದೆ. ಹೊಸ ಅವತಾರದಲ್ಲಿ ಸಾಹಸ ಸಿಂಹ ಎದುರಿಗೆ ಬಂದಿದ್ದಾರೆ. 1973ರಲ್ಲಿ ಈಶ್ವರಿ ಪ್ರೊಡಕ್ಷನ್ ನಿರ್ಮಾಣ ಮಾಡಿದ್ದ ಚಿತ್ರವನ್ನು ದಿಗ್ಗಜ ಪುಟ್ಟಣ್ಣ ಕಣಗಾಲ್ ನಿರ್ದೇಶನ ಮಾಡಿದ್ದರು. ನೀವು ಟೀಸರ್ ನೋಡಿಕೊಂಡು ಬನ್ನಿ..