ಪತ್ನಿ ಹಾಗೂ ಮಗಳಿಗೆ ಹೆಚ್ಚು ಸಮಯ ನೀಡಲು ಸಾಧ್ಯವಾಗದೇ ಇದ್ದದ್ದೇ ಇಬ್ಬರ ನಡುವ ವೈಮನಸ್ಸಿಗೆ ಮೂಲ ಕಾರಣವಾಗಿತ್ತು ಎನ್ನಲಾಗಿದೆ. ತಡವಾಗಿ ಅರ್ಥ ಮಾಡಿಕೊಂಡ ಸುದೀಪ್ ಹಾಗೂ ಪ್ರಿಯಾ ಮಗಳು ಸಾನ್ವಿಯ ಭವಿಷ್ಯಕ್ಕಾಗಿ ತಮ್ಮೆಲ್ಲಾ ಭಿನ್ನಾಪ್ರಾಯಗಳನ್ನು ಮರೆತು ಒಂದಾಗಿ ಬಾಳಲು ಮುಂದಾಗಿದ್ದಾರೆ.
ಬೆಂಗಳೂರು(ಆ.24): ಎರಡೂ ವರ್ಷಗಳ ಹಿಂದೆ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದ ಸ್ಯಾಂಡಲ್'ವುಡ್ ಸ್ಟಾರ್ ಕಿಚ್ಚ ಸುದೀಪ್ ವಿರಸ ಮರೆತು ವಿಚ್ಚೇದನ ಅರ್ಜಿಯನ್ನು ವಾಪಸ್ ಪಡೆದು ಪತ್ನಿ ಪ್ರಿಯಾ ಜೊತೆ ಮತ್ತೆ ಒಂದಾಗಿದ್ದಾರೆ.
ಪತ್ನಿ ಹಾಗೂ ಮಗಳಿಗೆ ಹೆಚ್ಚು ಸಮಯ ನೀಡಲು ಸಾಧ್ಯವಾಗದೇ ಇದ್ದದ್ದೇ ಇಬ್ಬರ ನಡುವ ವೈಮನಸ್ಸಿಗೆ ಮೂಲ ಕಾರಣವಾಗಿತ್ತು ಎನ್ನಲಾಗಿದೆ. ತಡವಾಗಿ ಅರ್ಥ ಮಾಡಿಕೊಂಡ ಸುದೀಪ್ ಹಾಗೂ ಪ್ರಿಯಾ ಮಗಳು ಸಾನ್ವಿಯ ಭವಿಷ್ಯಕ್ಕಾಗಿ ತಮ್ಮೆಲ್ಲಾ ಭಿನ್ನಾಪ್ರಾಯಗಳನ್ನು ಮರೆತು ಒಂದಾಗಿ ಬಾಳಲು ಮುಂದಾಗಿದ್ದಾರೆ.
ಶಿವಣ್ಣ ಹಾಗೂ ಕ್ರೇಜಿ'ಸ್ಟಾರ್ ಕಾರಣಕರ್ತರು
ಕಿಚ್ಚನ ದಾಂಪತ್ಯ ಒಂದಾಗಲು ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಹಾಗೂ ಕ್ರೇಜಿ ಸ್ಟಾರ್ ರವಿಚಂದ್ರನ್ ಕಾರಣ ಎನ್ನುತ್ತವೆ ಆಪ್ತ ವಲಯಗಳು. ಮಗಳಿಗಾಗಿ ವಿರಸ ಮರೆತು ಮರಳಿ ಜೀವನ ಪ್ರಾರಂಭಿಸುವಂತೆ ಇಬ್ಬರು ಹೇಳಿದ ಬುದ್ಧಿ ಮಾತಿಗೆ ಬೆಲೆ ನೀಡಿ ಪ್ರಿಯಾ ಜೊತೆ ಒಂದಾಗಿದ್ದಾರೆ ಎನ್ನಲಾಗಿದೆ. ಮಾಣಿಕ್ಯ ಚಿತ್ರದಲ್ಲಿ ಸುದೀಪ್ ತಂದೆಯಾಗಿ ರವಿಚಂದ್ರನ್ ನಟಿಸಿದ್ದರು. ಅದೇ ರೀತಿ ಶಿವರಾಜ್ ಕುಮಾರ್ '#73 ಶಾಂತಿ ನಿವಾಸ' ಚಿತ್ರದಲ್ಲಿ' ಟೈಟಲ್ ಕಾರ್ಡಿನ ನಿರೂಪಕ ಕಲಾವಿದನಾಗಿ ಅಭಿನಯಿಸಿದ್ದರು.