ಇದೀಗ ಕಿಚ್ಚ ಸುದೀಪ್ ಹಾಗೂ ಕಲರ್ಸ್ ಕನ್ನಡ ಚಾನೆಲ್ ಕರೆದಿರುವ ಸುದ್ದಿಗೋಷ್ಠಿಯಲ್ಲಿ ಮುಂಬರುವ ಸೀಸನ್ 12 ಹೋಸ್ಟ್ ಮಾಡಲಿರುವ ಕಿಚ್ಚ ಸುದೀಪ್ ಅವರು ಬಹಳಷ್ಟು ಪ್ರಶ್ನೆಗಳಿಗೆ ಉತ್ತರ ಕೊಡುತ್ತಿದ್ದಾರೆ. 

ಮಾಡಲ್ಲ ಅಂದಿದ್ದರೂ ಮತ್ತೆ ಕಿಚ್ಚ ಸುದೀಪ್ (Kichcha Sudeep) ಅವರು ಬಿಗ್ ಬಾಸ್ ಕನ್ನಡ ಸೀಸನ್ 12 ಹೋಸ್ಟ್ ಮಾಡಲು ಒಪ್ಪಿದ್ದೇಕೆ? ಈ ಸಂಗತಿ ಕಳೆದ ಸೀಸನ್ ಮುಗಿದ ಸಮಯದಿಂದಲೂ ಚರ್ಚೆ ಆಗುತ್ತಲೇ ಇತ್ತು. ಕಳೆದ ಬಿಗ್ ಬಾಸ್ ಕನ್ನಡ ಸೀಸನ್ 11ನ್ನು ಹೋಸ್ಟ್ ಮಾಡುತ್ತಿದ್ದಂತೆ, ನಟ ಸುದೀಪ್ ಅವರು ತಾವಿನ್ನು ಮುಂದೆ ಬಿಗ್ ಬಾಸ್ ಹೋಸ್ಟ್ ಮಾಡಲ್ಲ ಎಂದು ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾ ಎಕ್ಸ್ ಅಕೌಂಟ್ ಘೋಷಣೆ ಮಾಡಿದ್ದರು. ಆದರೆ, ಇದೀಗ ಮತ್ತೆ ಕಿಚ್ಚ ಸುದೀಪ್ ಅವರು ಮುಂಬರುವ 12ನೇ ಸೀಸನ್ ಹೋಸ್ಟ್ ಮಾಡಲು ಒಪ್ಪಿದ್ದಾರೆ. ಇದೀಗ ಈ ಬಗ್ಗೆ ಪ್ರೆಸ್‌ಮೀಟ್ ನಡೆಯುತ್ತಿದೆ.

ಇದೀಗ ಕಿಚ್ಚ ಸುದೀಪ್ ಹಾಗೂ ಕಲರ್ಸ್ ಕನ್ನಡ ಚಾನೆಲ್ ಕರೆದಿರುವ ಸುದ್ದಿಗೋಷ್ಠಿಯಲ್ಲಿ ಮುಂಬರುವ ಸೀಸನ್ 12 ಹೋಸ್ಟ್ ಮಾಡಲಿರುವ ಕಿಚ್ಚ ಸುದೀಪ್ ಅವರು ಬಹಳಷ್ಟು ಪ್ರಶ್ನೆಗಳಿಗೆ ಉತ್ತರ ಕೊಡುತ್ತಿದ್ದಾರೆ. ಆದರೆ, ಎಲ್ಲಕ್ಕಿಂತ ಮುಖ್ಯವಾಗಿ 'ಮುಂದಿನ ಸೀಸನ್ ಮಾಡಲ್ಲ ಎಂದಿದ್ದ ಸುದೀಪ್ ಅವರು ಮತ್ತೆ ಒಪ್ಪಿದ್ದೇಕೆ?' ಎಂಬ ಪ್ರಶ್ನೆಯೇ ಹೆಚ್ಚಾಗಿ ಕೇಳಿಬಂತು. ಅದಕ್ಕೇ ಉತ್ತರವನ್ನು ಇದೀಗ ಸುದೀಪ್ ಅವರು ಕೊಟ್ಟಿದ್ದಾರೆ. ಇನ್ನೂ ಹೆಚ್ಚು ಪ್ರಶ್ನೆಗಳಿಗೆ ಉತ್ತರ ಕೊಡಬೇಕಾಗಬಹುದು ಎನ್ನಬಹುದು.

ಖಾಸಗಿ ಹೋಟೆಲ್ ನಲ್ಲಿ ಬಿಗ್ ಬಾಸ್ 12 ರ ಸುದ್ದಿಗೋಷ್ಠಿ ನಡೆಯುತ್ತಿದ್ದು ಸಾಕಷ್ಟು ಸಂಗತಿ ಅಪ್ಡೇಟ್ ಆಗುತ್ತಿದೆ. ತಮ್ಮ ಬಗ್ಗೆ ತೂರಿಬಂದ ಪ್ರಶ್ನೆಗಳಿಗೆ ಸುದೀಪ್ ಉತ್ತರ ಕೊಟ್ಟಿದ್ದಾರೆ. 'ನಾನು ಬಿಗ್ ಬಾಸ್ ನಿರೂಪಣೆ ಮಾಡಲ್ಲ ಅಂದಿದ್ದು ನಿಜ. ನಾನು ಮಧ್ಯರಾತ್ರಿ 2 ಗಂಟೆಗೆ ಟ್ವೀಟ್ ಮಾಡಿದ್ದೆ. ನನ್ನ ಟ್ವೀಟ್ ಅನ್ನು ಯಾರು ಸೀರಿಯಸ್ ಆಗಿ ತಗೊಂಡಿರ್ಲಿಲ್ಲ. ನನ್ಮ ಬಗ್ಗೆ ಜನರು ಮಾತನಾಡಿದ ವಿಟಿ ನೋಡಿದಾಗ ಹಾರ್ಟ್ ಗೆ ಟಚ್ ಆಯ್ತು. ನಾನು ಸೀಸನ್ 11ರ ಆರಂಭದಲ್ಲೆ ಹಿಂಟ್ ಕೊಟ್ಟಿದ್ದೆ. ಕೊನಯಲ್ಲಿ ನಾನು ನಿರೂಪಣೆ ಮಾಡಲ್ಲ ಅಂತ ಕ್ಲಾರಿಟಿ ಕೊಟ್ಟೆ ಅಷ್ಟೇ.

ಬಿಗ್ ಬಾಸ್ ನ ಐಪಿಎಲ್ ತರ ಮೂರು ತಿಂಗಳು ನೋಡ್ತಾರೆ. ಇದು ನನ್ನ ರೆಸ್ಪಾನ್ಸ್ ಅನ್ನಿಸ್ತು. ನಾನು ನಿರೂಪಣೆ ಮಾಡಲ್ಲ ಅಂತ ಟ್ವೀಟ್ ಮಾಡಿದ್ದು ಥ್ರೆಟ್ ,ವಾರ್ನಿಂಗ್ ಅಲ್ಲ, ನನ್ನ‌ ಭಾವನೆಯನ್ನು ನಾನು ವ್ಯಕ್ತಪಡಿಸಿದ್ದೆ. ಮುಂದಿನ ನಾಲ್ಕು ಸೀಸನ್ ನಾನೇ ನಿರೂಪಣೆ ಮಾಡುತ್ತೇನೆ' ಎಂದು ನಟ ಸುದೀಪ್ ಹೇಳಿಕೆ ನೀಡಿದ್ದಾರೆ.