ಬೆಂಗಳೂರು (ಮಾ. 14): ಪೈಲ್ವಾನ್ ಅಖಾಡದಲ್ಲಿ ಕಿಚ್ಚ ಸುದೀಪ್ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ಡಿಫರೆಂಟ್ ಲುಕ್ ಮೂಲಕ ಕಿಚ್ಚ ಸುದೀಪ್ ಈ ಚಿತ್ರದ ಬಗ್ಗೆ ಭಾರೀ ಕುತೂಹಲ ಮೂಡಿಸಿದ್ದಾರೆ. 

ಕೆಜಿಎಫ್ ಗಣಿಯಲ್ಲಿ ಮತ್ತೆ ಶುರುವಾಗಲಿದೆ ರಾಕಿ ಬಾಯ್ ಅಬ್ಬರ!

ಪಂಚಭಾಷೆಗಳಲ್ಲಿ ರಿಲೀಸ್ ಮಾಡಲಾಗಿದ್ದ ಯಶ್ ಕೆಜಿಎಫ್ ಭರ್ಜರಿ ಸಕ್ಸಸ್ ಕಂಡಿತ್ತು. ಇದೀಗ ಕಿಚ್ಚ ಸುದೀಪ್ ಕೂಡಾ ಪೈಲ್ವಾನ್ ನನ್ನು ಬಹುಭಾಷೆಗಳಲ್ಲಿ ಬಿಡುಗಡೆ ಮಾಡಲು  ಸಿದ್ಧತೆ ಮಾಡಿಕೊಂಡಿದ್ದಾರೆ. ಬರೋಬ್ಬರಿ ಒಂಬತ್ತು ಭಾಷೆಗಳಲ್ಲಿ ಬರಲಿದೆ ಪೈಲ್ವಾನ್. 

ಫ್ಯಾನ್ ಆಫ್ ರೆಬೆಲ್ ಸ್ಟಾರ್: ಅಂಬಿ ಅಭಿಮಾನಿಯ ಕಥೆಗೆ ನಾಯಕನ್ಯಾರು?

ಕನ್ನಡ, ತಮಿಳು, ತೆಲುಗು, ಮಲಯಾಳಂ ಸೇರಿದಂತೆ ಬೆಂಗಾಲಿ, ಪಂಜಾಬಿ, ಭೋಜ್ಪುರಿ, ಮರಾಠಿ ಭಾಷೆಗಳಲ್ಲಿ ಪೈಲ್ವಾನ್ ಅಬ್ಬರಿಸಲಿದೆ. ಕನ್ನಡದ ಮಟ್ಟಿದೆ ಇದೊಂದು ದಾಖಲೆಯಾಗಲಿದೆ. 

ಈ ಚಿತ್ರದಲ್ಲಿ ನಟಿ ಆಕಾಂಕ್ಷ ಸಿಂಗ್ ಸುದೀಪ್ ಗೆ ನಾಯಕಿಯಾಗಿದ್ದಾರೆ.