ಸುದೀಪ್‌ ಅಭಿ​ಮಾ​ನಿ​ಗ​ಳಿಂದ ಕೊಡಗು ಸಂತ್ರ​ಸ್ತ​ರಿಗೆ ನೆರ​ವು

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 3, Sep 2018, 3:17 PM IST
Kiccha Sudeep fans help to Kodagu flood victims
Highlights

ಕಿಚ್ಚ ಸುದೀಪ್ ಅಭಿಮಾನಿಗಳ ಜೊತೆ 44 ನೇ ಹುಟ್ಟುಹಬ್ಬ ಆಚರಿಸಿಕೊಂಡರು | ಸುದೀಪ್ ಸರಳತೆಗೆ ಮನಸೋತ ಅಭಿಮಾನಿಗಳು  | ಕೊಡಗು ಸಂತ್ರಸ್ತರಿಗೆ ನೆರವು ನೀಡಿದ ಅಭಿಮಾನಿ ರಾಕೇಶ್ ಹಾಗೂ ಅವರ ಸ್ನೇಹಿತರು 

ದಾವ​ಣ​ಗೆರೆ (ಸೆ. 03): ನಟ ಸುದೀಪ್‌ ಅವ​ರ ಜನ್ಮ​ದಿ​ನದ ಹಿನ್ನೆ​ಲೆ​ಯಲ್ಲಿ ದಾವ​ಣಗೆರೆಯ ಉದ್ಯಮಿ ಆರ್‌.​ಎ​ಸ್‌.​ಶೇ​ಖ​ರಪ್ಪ ಪುತ್ರ ಆರ್‌.​ಎ​ಸ್‌.​ರಾ​ಕೇಶ್‌ ಮತ್ತು ಸ್ನೇಹಿ​ತರು ಕೊಡಗು ನೆರೆ ಸಂತ್ರ​ಸ್ತ​ರಿಗೆ  50 ಸಾವಿರದ ಚೆಕ್‌ ನೀಡಿ​ದರು.

ತಮ್ಮ ನೆಚ್ಚಿನ ನಾಯಕ ಸುದೀಪ್‌ ಜನ್ಮ​ದಿ​ನಕ್ಕೆ ಬೆಳ್ಳಿ ಖಡ್ಗ ನೀಡಲು ಆರ್‌.​ಎ​ಸ್‌.​ರಾ​ಕೇಶ್‌ ನಿರ್ಧ​ರಿ​ಸಿ​ದ್ದರು. ಆದರೆ, ಕೊಡಗು ಪ್ರವಾ​ಹ​ದ ಹಿನ್ನೆ​ಲೆ​ಯಲ್ಲಿ ಸುದೀಪ್‌ ಆಸೆ​ಯಂತೆ ಕೊಡಗು ಸಂತ್ರಸ್ತ​ರ ಪರಿ​ಹಾ​ರ​ಕ್ಕಾಗಿ 50 ಸಾವಿರದ ಚೆಕ್‌ ಅನ್ನು ಸುದೀಪ್‌ ಅವರ ನಿವಾಸ​ದಲ್ಲಿ ನೀಡುವ ಮೂಲಕ ಜನ್ಮ​ದಿ​ನಕ್ಕೆ ಶುಭ ಹಾರೈ​ಸಿ​ದರು.

ಕಿಚ್ಚ ಸುದೀ​ಪ್‌ ಅವ​ರ ತಂದೆ ಸಂಜೀವ್‌, ಬೆಂಗ​ಳೂ​ರಿನ ಹಲ​ಸೂರು ಗೇಟ್‌ನ ಎಸಿಪಿ ಪಂಪಾ​ಪತಿ, ಶಾಬ​ನೂರು ಪ್ರವೀಣ್‌, ಲಿಂಗ​ರಾಜ ಫಣಿ​ಯಾ​ಪುರ, ಜಗ​ಳೂರು ತಾಲೂಕು ಗೌಡ​ಗೊಂಡ​ನ​ಹಳ್ಳಿ ನಾಗ​ರಾಜ, ರೇಣು​ಕಾ​ರಾಜ, ದೇವರ ಬೆಳ​ಕೆರೆ ನಿಂಗ​ರಾಜ, ದೇವ​ರಾಜ ಮತ್ತಿ​ತ​ರ​ರಿ​ದ್ದರು.

loader