ಕಿಚ್ಚ ಸುದೀಪ್ ಮತ್ತೆ ಬಾಹುಬಲಿ ಸಿನಿಮಾ ನಂತ್ರ ಟಾಲಿವುಡ್ ಗೆ ಹಾರಲಿದ್ದಾರೆ. ಕಿಚ್ಚ ಸುದೀಪ್ ಭಾರತೀಯ ಚಿತ್ರರಂಗದಲ್ಲಿ ತನ್ನದೇ ಛಾಪು ಮೂಡಿಸಿರುವ ಮಲ್ಟಿ ಟ್ಯಾಲೆಂಟೆಡ್ ನಟ. ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ, ಸುದೀಪ್ ನನಗೆ ಬೇಕೇ ಬೇಕು ಅಂತಿದ್ದಾರೆ.
ಬೆಂಗಳೂರು (ನ.13): ಕಿಚ್ಚ ಸುದೀಪ್ ಮತ್ತೆ ಬಾಹುಬಲಿ ಸಿನಿಮಾ ನಂತ್ರ ಟಾಲಿವುಡ್ ಗೆ ಹಾರಲಿದ್ದಾರೆ. ಕಿಚ್ಚ ಸುದೀಪ್ ಭಾರತೀಯ ಚಿತ್ರರಂಗದಲ್ಲಿ ತನ್ನದೇ ಛಾಪು ಮೂಡಿಸಿರುವ ಮಲ್ಟಿ ಟ್ಯಾಲೆಂಟೆಡ್ ನಟ. ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ, ಸುದೀಪ್ ನನಗೆ ಬೇಕೇ ಬೇಕು ಅಂತಿದ್ದಾರೆ.
ಮೆಗಾಸ್ಟಾರ್ ಚಿರಂಜೀವಿ ನಟಿಸುತ್ತಿರುವ ಸೈರಾ ನರಸಿಂಹರೆಡ್ಡಿ ಚಿತ್ರದಲ್ಲಿ , ಕಿಚ್ಚ ಸುದೀಪ್ ನಟಿಸುತ್ತಾರೆ ಅಂತ ಸುದ್ದಿ ಕೇಳಿಬಂದಿತ್ತು. ಈ ಸುದ್ದಿ ಹಂಡ್ರೆಡ್ ಪರ್ಸೆಂಟ್ ನಿಜ ಅಂತಿದ್ದಾರೆ ಕಿಚ್ಚ ಸುದೀಪ್. ಮೆಗಾಸ್ಟಾರ್ 151 ಸಿನಿಮಾದಲ್ಲಿ ಕಿಚ್ಚ ಸುದೀಪ್ ಅಭಿನಯಿಸಬೇಕು ಅಂತಾ ಮೆಗಾಸ್ಟಾರ್ ಹಾಗೂ ಈ ಚಿತ್ರದ ನಿರ್ದೇಶಕ ಸುರೇಂದರ್ ರೆಡ್ಡಿ ಕಿಚ್ಚನನ್ನ ಕೇಳಿಕೊಂಡಿದ್ದಾರಂತೆ..
ರಾಯಲಸೀಮಾ ಸ್ವಾತಂತ್ರ್ಯ ಹೋರಾಟಗಾರ ಉಯ್ಯಲವಾಡ ನರಸಿಂಹರೆಡ್ಡಿ, ಜೀವನವನ್ನಾಧರಿಸಿ ಬರುತ್ತಿರೋ ಸೈರಾ ನರಸಿಂಹ ರೆಡ್ಡಿ ಚಿತ್ರದಲ್ಲಿ ಕಿಚ್ಚ ಸುದೀಪ್ ಮೆಗಾಸ್ಟಾರ್ ಜೊತೆ ಸ್ಕ್ರೀನ್ ಹಂಚಿಕೊಳ್ಳಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಯಾಕಂದ್ರೆ ಅಂತರಾಷ್ಟ್ರೀಯ ಮಟ್ಟದಲ್ಲಿ ಈ ಸಿನಿಮಾವನ್ನ ನಿರ್ಮಾಣ ಮಾಡುತ್ತಿರುವ ಕಾರಣ, ಸೌತ್ ಚಿತ್ರರಂಗದ ಒಬ್ಬೊಬ್ಬ ಸ್ಟಾರ್ ನಟರನ್ನ ಈ ಸಿನಿಮಾದಲ್ಲಿ ಅಭಿನಯಿಸಲು ನಿರ್ದೇಶಕ ಸುರೇಂದರ್ ರೆಡ್ಡಿ ಕೇಳಿಕೊಂಡಿದ್ದಾರಂತೆ. ಈಗಾಗಲೇ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಚಿತ್ರದಲ್ಲಿ ನಟಿಸಲು ಓಕೆ ಅಂದಿದ್ದಾರೆ. ಹೀಗಾಗಿ ಕಿಚ್ಚ ಸುದೀಪ್ ಕನ್ನಡ ಸಿನಿಮಾಗಳಿಗೆ ತೊಂದರೆ ಆಗದಂತೆ 45ರಿಂದ 50 ದಿನ, ನಿರ್ದೇಶಕದ ಸುರೇಂದರ್ ರೆಡ್ಡಿಗೆ ಕಾಲ್ ಶೀಟ್ ಕೊಟ್ಟಿದ್ದಾರಂತೆ. ಬರೋಬ್ಬರಿ 150 ಕೋಟಿ ಬಜೆಟ್'ನಲ್ಲಿ, ಚಿರು ಪುತ್ರ ರಾಮ್ ಚರಣ್ ತೇಜಾ ನಿರ್ಮಾಣ ಮಾಡಲಿದ್ದಾರೆ.
