ಬೆಂಗಳೂರು (ಸೆ. 19): ರಾಕಿಂಗ್ ಸ್ಟಾರ್ ಬಹು ನಿರೀಕ್ಷಿತ ಚಿತ್ರ ಕೆಜಿಎಫ್ ಬಿಡುಗಡೆಗೆ ಸಿದ್ಧವಾಗಿದೆ. ಏಕಕಾಲಕ್ಕೆ ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.  ಕನ್ನಡ ಚಿತ್ರವೊಂದು ಪಂಚಭಾಷೆಗಳಲ್ಲಿ ರಿಲೀಸ್ ಆಗುವ ಹೆಮ್ಮೆ ಈ ಚಿತ್ರದ್ದು. 

ಚಿತ್ರ ಬಿಡುಗಡೆಗೆ ದಿನಾಂಕ ಅಧಿಕೃತವಾಗಿ ಘೋಷಣೆಯಾಗಬೇಕಷ್ಟೇ. ಈಗಾಗಲೇ ಚಿತ್ರತಂಡ ಹೇಳಿದಂತೆ ನವೆಂಬರ್ 16 ಕ್ಕೆ ಬಿಡುಗಡೆಯಾಗಬೇಕಿತ್ತು. ಆದರೆ ಅದು ಬದಲಾವಣೆಯಾಗುವ ಸಾಧ್ಯತೆ ಇದೆ. 

ಕೆಜಿಎಫ್‌ನಿಂದ ಹೊರಬಿತ್ತು ಬ್ರೇಕಿಂಗ್ ನ್ಯೂಸ್! ಯಶ್ ಅಭಿಮಾನಿಗಳು ಫುಲ್ ಥ್ರಿಲ್!

ಚಿತ್ರ ಬಿಡುಗಡೆಗೆ ನವೆಂಬರ್ ನಲ್ಲಿ ಎರಡು ದಿನಾಂಕದ ಬಗ್ಗೆ ಚರ್ಚೆ ನಡೆಯುತ್ತಿದೆ. ತಮಿಳು, ತೆಲುಗು ಡಿಸ್ಟ್ರಿಬ್ಯೂಟರ್ ಜೊತೆ ಮಾತನಾಡಿ ಅಂತಿಮ ದಿನಾಂಕ ನಿರ್ಧರಿಸಲಿದ್ದೇವೆ ಎಂದು ಚಿತ್ರ ತಂಡ ಹೇಳಿದೆ.