Asianet Suvarna News Asianet Suvarna News

ಕೆಜಿಎಫ್ ಆಡಿಯೋ ಸೇಲ್ : ಕೊಂಡೋರು ಯಾರು..?

ಕೆ ಜಿಎಫ್’ ಚಿತ್ರದ ಆಡಿಯೋ ರೈಟ್ಸ್ ದಾಖಲೆ ಮೊತ್ತಕ್ಕೆ ಮಾರಾಟವಾಗಿರುವ ಸುದ್ದಿ ಬಂದಿದೆ. 

KGF audio rights purchased by Lahari music
Author
Bengaluru, First Published Oct 29, 2018, 9:44 AM IST
  • Facebook
  • Twitter
  • Whatsapp

ಪ್ರತಿಷ್ಟಿತ ಲಹರಿ ಆಡಿಯೋ ಸಂಸ್ಥೆಯು ‘ಕೆಜಿಫ್’ ಚಿತ್ರದ ಆಡಿಯೋ ಹಕ್ಕು ಖರೀದಿಸಿದ್ದು, ಅದಕ್ಕೆ ದಾಖಲೆ ಮೊತ್ತದ ಹಣ ನೀಡಿದೆ ಎನ್ನುತ್ತಿವೆ ಮೂಲಗಳು. ಕನ್ನಡದಲ್ಲೇ ಇದು ಮೊದಲು ಎನ್ನುವಷ್ಟು ಮೊತ್ತಕ್ಕೆ ಆಡಿಯೋ ರೈಟ್ಸ್ ಸೇಲ್ ಆಗಿದೆ ಎನ್ನಲಾಗಿದೆ.

ಪ್ರಶಾಂತ್ ನೀಲ್ ನಿರ್ದೇಶನದ ‘ಕೆಜಿಎಫ್’ ಚಿತ್ರಕ್ಕೆ ರವಿ ಬಸ್ರೂರು ಸಂಗೀತ ನೀಡಿದ್ದಾರೆ. ನವೆಂಬರ್‌ನಲ್ಲಿ ಚಿತ್ರದ ಆಡಿಯೋ ಬಿಡುಗಡೆಗೆ ಚಿತ್ರತಂಡ ಸಿದ್ಧತೆ ಮಾಡುತ್ತಿದೆ. ಮೂಲಗಳ ಪ್ರಕಾರ, ಆಡಿಯೋ ರೈಟ್ಸ್ ದಾಖಲೆ ಮೊತ್ತಕ್ಕೆ ಮಾರಾಟವಾಗಿರುವುದರ ಹಿಂದೆ ಸಂಗೀತದ ಗುಣಮಟ್ಟವೇ ಕಾರಣ. ಹಾಡುಗಳನ್ನು ಕೇಳಿದ ಲಹರಿ ಸಂಸ್ಥೆಯೇ ಅತ್ಯಧಿಕ ಮೊತ್ತಕ್ಕೆ ರೈಟ್ಸ್ ಖರೀದಿಸಲು ಮುಂದಾಯಿತು. ಅದಕ್ಕೆ ಚಿತ್ರ ತಂಡವೂ ಒಪ್ಪಿಗೆ ನೀಡಿತು ಎಂಬುದಾಗಿಯೂ ಮೂಲಗಳು ತಿಳಿಸಿವೆ.

ಸೋಷಲ್ ಮೀಡಿಯಾ ಮೂಲಕ ಬಂದ ಚಿತ್ರದ ಟೀಸರ್ಗಳಿಗೆ ಬಾರೀ ಪ್ರತಿಕ್ರಿಯೆ ಸಿಕ್ಕಿದೆ. ಯಶ್ ಎರಡು ವರ್ಷ ಸಮಯವನ್ನು ಇದೊಂದೇ ಚಿತ್ರಕ್ಕೆ ಮೀಸಲಿಟ್ಟಿದ್ದಾರೆ. ಹಾಗೆಯೇ ವಿಭಿನ್ನ ಗೆಟಪ್, ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗಾಗಿ ಅಭಿಮಾನಿಗಳು ಈ ಚಿತ್ರ ಬಿಡುಗಡೆಗೆ ಕಾಯುತ್ತಿದ್ದಾರೆ. ಡಿಸೆಂಬರ್ 21ರವರೆಗೆ ಕಾಯಬೇಕಾಗಿದೆ.

 

Follow Us:
Download App:
  • android
  • ios