ಫೇಸ್ಬುಕ್ ಹಾಗೂ ಟ್ಟಿಟರ್ ನಲ್ಲಿ ಆ್ಯಕ್ಟಿವ್ ಇದ್ದ ರಾಕಿಂಗ್ ಸ್ಟಾರ್ ಯಶ್ ಪತ್ನಿ ಹಾಗೂ ಅಭಿಮಾನಿಗಳ ಬೇಡಿಕೆ ಮೇರೆಗೆ 2ನೇ ವೆಡ್ಡಿಂಗ್ ಆ್ಯನಿವರ್ಸರಿಯಂದು (ಡಿಸೆಂಬರ್ 2018) ಇನ್ ಸ್ಟಾಗ್ರಾಂಗೆ ಕಾಲಿಟ್ಟರು. ಕೆಲವೇ ದಿನಗಳಲ್ಲಿ ಯಶ್ ಖಾತೆ ವೇರಿಫೈಡ್ ಆಗಿತ್ತು. ಅವರ ಮೊದಲ ಪೋಸ್ಟ್ ಯಾವುದು ಗೊತ್ತಾ?

ರಾಧಿಕಾ-ಯಶ್ ಲಿಟಲ್ ಪ್ರಿನ್ಸೆಸ್ ’ಐರಾ’ ಮುದ್ದು ಫೋಟೋಗಳಿವು

ಮದುವೆ ವಾರ್ಷಿಕೋತ್ಸವ ದಿನದಂದು ‘ನನ್ನ ಜೀವನದ 2 ವರ್ಷಗಳ ಬೆಸ್ಟ್ ಜರ್ನಿ ಇದಾಗಿದೆ. ಹ್ಯಾಪಿ ಆ್ಯನಿವರ್ಸರಿ ಮೈ ಲವ್. ನೀನು ನನಗೆ ಬೆಸ್ಟ್ ಗಿಫ್ಟ್ ಕೊಟ್ಟಿದ್ದೀಯಾ. ಇದೊಂದು ಹೊಸ ಜರ್ನಿ! ’ ಎಂದು ಮಡದಿ ರಾಧಿಕಾರನ್ನು ಟ್ಯಾಗ್ ಮಾಡಿ ವಿಶ್ ಮಾಡಿದ್ದರು. ಅದಾದ ನಂತರ ಸ್ಯಾಂಡಲ್ ವುಡ್ ನಲ್ಲಿ ದೊಡ್ಡ ಅಲೆ ಹುಟ್ಟಿಸಿದ ಕೆಜಿಎಫ್ ಚಿತ್ರದ ಅಪ್ಡೇಟ್ ಮಾಡುತ್ತಿದ್ದು ಚಿತ್ರ ರಿಲೀಸ್ ಆದ ನಂತರ ಫಾಲೋವರ್ಸ್ ಇನ್ನೂ ಹೆಚ್ಚಾಗಿದ್ದಾರೆ.

ಇನ್ ಸ್ಟಾಗ್ರಾಂನಲ್ಲಿ 1 ಮಿಲಿಯನ್ ದಾಟುವ ಮೂಲಕ ಹೊಸ ದಾಖಲೆ ಮಾಡಿರುವ ಮೊದಲ ಕನ್ನಡದ ನಟ ಅಂದ್ರೆ ಯಶ್.